ತಿಳಿವಳಿಕೆ ಇದ್ದವರು, ಇಲ್ಲದವರು ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ ಎಂಬುದನ್ನು ‘ಜೊತೆಯಾಗಿರು’ ಚಿತ್ರದಲ್ಲಿ ಎರಡು ಲವ್ ಟ್ರಾಕ್ಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.
ನೈಜ ಘಟನೆಗಳನ್ನು ಪ್ರೇರಣೆಯಾಗಿ ತೆಗೆದುಕೊಳ್ಳಲಾಗಿದೆ. ಅದು ಎಲ್ಲಿ, ಏನು ಎಂಬುದನ್ನು ತಂಡವು ಗೌಪ್ಯವಾಗಿಟ್ಟಿದೆ. ಒಂದರಲ್ಲಿ ಉದ್ದೇಶ ಇಟ್ಟುಕೊಂಡು ನಿಜವಾಗಿಯೂ ಪ್ರೀತಿ ಮಾಡುವ ಪ್ರೇಮಿಗಳು.
ಮತ್ತೋಂದರಲ್ಲಿ ಮಧ್ಯಮ ವರ್ಗ ಹುಡುಗಿಯೊಬ್ಬಳು ಹಣದ ಆಸೆಗಾಗಿ ಇರುವವನ್ನು ತ್ಯಜಿಸಿ, ಶ್ರೀಮಂತನ ಹುಡುಗನ ಹಿಂದೆ ಹೋಗುತ್ತಾಳೆ. ಅಲ್ಲದೆ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ನಿರ್ಣಯ ತೆಗೆದುಕೊಂಡರೆ, ಅದು ಎಂತಹ ಪರಿಣಾಮ ಬೀರುತ್ತದೆ.
ಹಿರಿಯರಾದವರು ಅವರ ಪರಿಸ್ಥಿತಿಯನ್ನು ಅರಿತುಕೊಂಡರೆ, ಸಮಸ್ಯೆಗಳು ಉದ್ಬವವಾಗುವುದಿಲ್ಲವೆಂದು ಹೇಳುತ್ತದೆ. ಇಂತಹ ಮಾರ್ಮಿಕ ಸನ್ನಿವೇಶಗಳು ಮೂಡಿ ಬಂದಿರುವುದು ವಿಶೇಷ. ಹತ್ತು ವರ್ಷಗಳಲ್ಲಿ ಹಲವು ನಿರ್ದೇಶಕರಲ್ಲಿ ಅನುಭವ ಪಡೆದುಕೊಂಡಿರುವ ಸತೀಶ್ಕುಮಾರ್ ಆಕ್ಷನ್ ಕಟ್ ಹೇಳಿರುವುದು ಹೊಸ ಅನುಭವ.
ತಾರಗಣದಲ್ಲಿ ವೆಂಕಟೇಶ್-ರಶ್ಮಿ, ಸುನಿಲ್-ಪೂಜಾ, ಶಂಕರ್ನಾರಯಣ್, ಸುಧಾ, ಸುಧೀರ್, ಮೈ ಆಟೋ ಗ್ರಾಫ್ದಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಸಂತೋಷ್, ಉಳಿದಂತೆ ಮಂಜು, ಜಗದೀಶ್ ಮುಂತಾದವರು ನಟಿಸಿದ್ದಾರೆ. ಐದು ಹಾಡುಗಳಿಗೆ ಮಹರ್ಷಿ, ಕೆ.ಕಲ್ಯಾಣ್ ಎರಡು ಗೀತೆಗೆ ಸಾಹಿತ್ಯ ರಚಿಸುವ ಜೊತೆಗೆ ‘ಊರ್ ತುಂಬ ಹುಡುಗೀರು ನಮಗಂತ ಯಾರವರೋ’ ಹಾಡಿಗೆ ಮೊದಲಬಾರಿ ಧ್ವನಿಯಾಗಿದ್ದಾರೆ.
ಸಂಗೀತ ವಿನುಮನಸು, ಮಜಟಾಕೀಸ್ ಖ್ಯಾತಿಯ ರಾಜಶೇಖರ್ ಮಾತುಗಳನ್ನು ಪೋಣಿಸುವ ಜೊತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಜಾಶಿವಶಂಕರ್-ಆನಂದ್ ಛಾಯಾಗ್ರಹಣ, ಸತೀಶ್ಚಂದ್ರಯ್ಯ ಸಂಕಲನವಿದೆ.
ಸಕಲೇಶಪುರ, ಕಳಸ, ಮಡಕೇರಿ, ಬೆಂಗಳೂರು, ಕನಕಪುರ ರಸ್ತೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಗೆಳೆಯರೇ ಸೇರಿಕೊಂಡು ರೇಣು ಮೂವೀಸ್ ಮುಖಾಂತರ ನಿರ್ಮಾಣ ಮಾಡಿರುವ ಚಿತ್ರವು ಸದ್ಯ ಡಿಐ ಹಂತದಲ್ಲಿದೆ. ಲಾಕ್ಡೌನ್ ತೆರೆವಾದ ಬಳಿಕ ಉಳಿದ ಕೆಲಸಕ್ಕೆ ಚಾಲನೆ ಸಿಗಲಿದೆ.
Be the first to comment