ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಧಾರಾವಾಹಿ ಪ್ರಸಾರಕ್ಕೆ ಜೀ಼ ಕನ್ನಡಕ್ಕೆಅಭಿನಂದನೆ!

ಜೀ಼ ಕನ್ನಡ ವಾಹಿನಿಯಲ್ಲಿ   ಪ್ರಸಾರವಾಗುತ್ತಿರುವ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಎಲ್ಲ  ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಮೈಸೂರಿನಲ್ಲಿ ಈ ಧಾರಾವಾಹಿ ಪ್ರಸಾರ ಮಾಡುತ್ತಿರುವ ಜೀ಼ ಕನ್ನಡ ವಾಹಿನಿಗೆ ಪುಷ್ಪ ನಮನ ಸಲ್ಲಿಸಲಾಯಿತು.

ಮೈಸೂರಿನ ಅಶೋಕಪುರಂ ಅಂಬೇಡ್ಕರ್ ಉದ್ಯಾನವನದ ಮುಂಭಾಗದಲ್ಲಿ ಅಶೋಕಪುರಂ ಅಭಿಮಾನಿಗಳ ಬಳಗ ಹಾಗೂ ದಲಿತ ವೆಲ್ಫರ್ಸ್  ಆಯೋಜಿಸಿದ್ದ ಈ ಕಾರ‍್ಯಕ್ರಮದಲ್ಲಿ ಹಿರಿಯ ಲೇಖಕ ಪ್ರೊ.ಕೆ.ಎಸ್.ಭಗವಾನ್, “ದೇಶದ ಇತಿಹಾಸದಲ್ಲಿಯೇ ಯಾವ ವಾಹಿನಿಯೂ ಮಾಡದ ಕೆಲಸವನ್ನು ಜೀ಼ ಕನ್ನಡ ವಾಹಿನಿ ಮಾಡುತ್ತಿದೆ. ಶನಿವಾರ ಹಾಗೂ ಭಾನುವಾರ ಜೀ಼ ಕನ್ನಡದಲ್ಲಿ ಪ್ರಸಾರವಾಗುವ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಧಾರಾ ವಾಹಿಯನ್ನು ಎಲ್ಲರೂ ವೀಕ್ಷಿಸಿ ಅವರ ವಿಚಾರ ಧಾರೆಗಳನ್ನು ಎಲ್ಲರಿಗೂ ಮುಟ್ಟಿಸಬೇಕು” ಎಂದರು.

ಪ್ರೊ.ಬಿ.ಪಿ. ಮಹೇಶ್ಚಂದ್ರಗುರು, “ಜೀ಼ ಕನ್ನಡ ಎಲ್ಲರನ್ನೂ ಒಳಗೊಳ್ಳುವ ಕೆಲಸ ಮಾಡುತ್ತಿದೆ. ಇತಿಹಾಸ ನೆನಪಿಸುವಕ ಕಾರ‍್ಯಮಾಡುತ್ತಿದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಅಂಬೇಡ್ಕರ್ ಅವರಿಂದ ಮಾತ್ರ ಸಾಧ್ಯವಾಗಿದೆ”ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೀಕ್ಷಕರು, “ಟಿ.ಆರ್.ಪಿ.ಗಾಗಿ ಧಾರಾವಾಹಿ ಪ್ರಸಾರ ಮಾಡುವವರ ನಡುವೆ ಜೀ಼ ಕನ್ನಡ ಬಹಳ ಅತ್ಯುತ್ತಮ ಕೆಲಸ ಮಾಡುತ್ತಿದೆ. ಅಂಬೇಡ್ಕರ್ ಧಾರಾವಾಹಿ ಪ್ರಸಾರ ನಿಜಕ್ಕೂ ಒಳ್ಳೆಯ ಕಾರ್ಯ ಈ ಧಾರಾವಾಹಿ ಪ್ರಸಾರ ಮಾಡಿರುವದಕ್ಕೆ ರಾಘವೇಂದ್ರ ಹುಣಸೂರು ಅವರಿಗೂ ನಮ್ಮಕೃತಜ್ಞತೆಗಳು” ಎಂದರು.

ಮಹಾ ನಾಯಕ ಧಾರಾವಾಹಿಯ ಜನಪ್ರಿಯತೆ ಕುರಿತು ಜೀ಼ ಕನ್ನಡದ  ರಾಘವೇಂದ್ರ ಹುಣಸೂರು, “ಜೀ಼ ಕನ್ನಡ ಜನರು ಇಷ್ಟಪಡುವ ಕಥೆಗಳನ್ನುನೀಡುವುದರಲ್ಲಿ ಸದಾಮುಂದಿದೆ. ಇದೀಗ ಸಂವಿಧಾನಶಿಲ್ಪಿ, ಜನನಾಯಕ ಡಾ .ಬಿ.ಆರ್. ಅಂಬೇಡ್ಕರ್ ಅವರ ಧಾರಾವಾಹಿ ಯುವೀಕ್ಷಕರಿಂದ ಅಪಾರ ಜನಪ್ರಿಯತೆ ಪಡೆದಿರುವುದು ನಮಗೆ ಉತ್ಸಾಹ ಹೆಚ್ಚಿಸಿದೆ. ಜನರ ಅಭಿರುಚಿಗೆ ಅನುಗುಣವಾಗಿ ಮತ್ತಷ್ಟು ಕಾರ್ಯ ಕ್ರಮಗಳನ್ನು ಜೀ಼ ಕನ್ನಡ ರೂಪಿಸಲಿದೆ.

This Article Has 2 Comments
  1. Pingback: Regression Testing

  2. Pingback: binance video

Leave a Reply

Your email address will not be published. Required fields are marked *

Translate »
error: Content is protected !!