ಖ್ಯಾತ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ 25ನೇ ಪುಸ್ತಕ ‘ಶುಭಂ’ ಇದೀಗ ಆಡಿಯೋ ರೂಪದಲ್ಲಿ ಹೊರ ಬರುತ್ತಿದೆ. 900 ಪುಟಗಳ ಪುಸ್ತಕ ಇದಾಗಿದ್ದು ಕಳೆದ ವರ್ಷ ನವೆಂಬರ್ 28 ರಂದು ಸುದೀಪ್ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದರು.
ಕನ್ನಡ ಸಿನಿಮಾರಂಗದ ಅನೇಕ ಗೌಪ್ಯ ವಿಚಾರಗಳನ್ನು ಸುಂದರವಾಗಿ ಬಣ್ಣಿಸಿರುವ ಈ ‘ಶುಭಂ’ ಪುಸ್ತಕ ಇದುವರೆಗೂ 1000 ಪ್ರತಿಗಳು ಮಾರಾಟ ಆಗಿ ಮರು ಮುದ್ರಣಕ್ಕೆ ಬೇಡಿಕೆ ಕೂಡಾ ಬಂದಿದೆ. ಕರ್ನಾಟಕದ ಎಲ್ಲಾ ಕೇಂದ್ರ ಗ್ರಂಥಾಲಯಗಳಲ್ಲಿ 300 ಪ್ರತಿಗಳು ಬೇಕು ಎಂದು ಬೇಡಿಕೆ ಬಂದಿರುವುದರಿಂದ ಗಣೇಶ್ ಕಾಸರಗೋಡು ಬಹಳ ಖಷಿಯಲ್ಲಿದ್ದಾರೆ. ಇದುವರೆಗೂ ಬರೆದ 24 ಪುಸ್ತಕಗಳಿಗೆ ಇಂತಹ ಬೇಡಿಕೆ ಬಂದಿರಲಿಲ್ಲ ಎನ್ನುತ್ತಾರೆ ಗಣೇಶ್.ಇದೀಗ ಚಿತ್ತಾರ ಯೂಟ್ಯೂಬ್ನಲ್ಲೂ ಈ ‘ಶುಭಂ’ ಲಭ್ಯವಾಗುತ್ತಿದೆ. ಚಿತ್ತಾರ ಸಂಸ್ಥೆ ಇದನ್ನು ಸಿದ್ಧಪಡಿಸಿದ್ದು ಧ್ವನಿರೂಪದ ಸಿನಿಮಾ ಪುಸ್ತಕ ಹೊರಬಂದಿರುವುದು ಇದೇ ಮೊದಲು ಎನ್ನಬಹುದು. ನವೀನ್ ಕೃಷ್ಣ ಪರಿಕಲ್ಪನೆಯಲ್ಲಿ ಆರ್. ವೆಂಕಟರಾಜು ಅವರ ಧ್ವನಿಯಲ್ಲಿ ಈ ಆಡಿಯೋ ಯೂಟ್ಯೂಬ್ನಲ್ಲಿ ಲಭ್ಯವಿದೆ.
ಪ್ರತಿ ಸೋಮವಾರ ಸಂಜೆ 6 ಹಾಗೂ ಗುರುವಾರ ಸಂಜೆ 6 ಗಂಟೆಗೆ ಚಿತ್ತಾರ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಲಿದೆ. ಈ ಹೊಸ ಪ್ರಯತ್ನಕ್ಕೆ ಬಳಗದ ಮುಖ್ಯಸ್ಥ ಶಿವಕುಮಾರ್ ಸಂತೋಷ ವ್ಯಕ್ತಪಡಿಸಿದ್ದಾರೆ.
Pingback: DevOps development consulting
Pingback: dumps shop online
Pingback: great dumps shop