ಅ್ಯಕ್ರೊಮೊಟಾಪ್ಸಿಯಾ (Achromatopsia) ನ್ಯೂನತೆ ಮತ್ತು ಹಲವು ಸಾವು-ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನ ಕಥಾಹಂದರ ಹೊಂದಿರುವ, ನೈಜ ಘಟನೆಗಳ ಕುರಿತಾದ ವಿನೂತನ ಹೆಸರಿನ ‘ಮೇಲೊಬ್ಬ ಮಾಯಾವಿ’ ಚಿತ್ರವನ್ನು ಸೆನ್ಸಾರ್ ಮಂಡಳಿಯು ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ಕಟ್ ನೀಡದೆ, ಸೌಂಡ್ ಮ್ಯೂಟ್ ಸಹ ನೀಡದೆ ‘ಎ’ ಪ್ರಮಾಣಪತ್ರ ನೀಡಿದ್ದಾರೆ.ಕಥೆ, ಚಿತ್ರಕಥೆ, ಕಲಾವಿದರ ಆಯ್ಕೆಯಲ್ಲಿ ಬಹಳ ಸ್ಟ್ರಾಂಗ್ ಆಗಿರುವ ನವಿನ್ ಕೃಷ್ಣ ಈ ಚಿತ್ರದಲ್ಲಿ ಸಂಗೀತದಲ್ಲೂ ಮನಸ್ಸು ತಟ್ಟಿದ್ದಾರೆ.
‘ಮೇಲೊಬ್ಬ ಮಾಯಾವಿ’ ಚಿತ್ರದ ಒಂದು ಹಾಡಿಗೆ ಸಂಗೀತ ನಿರ್ದೇಶಕ, ಗಾಯಕ, ದಿವಂಗತ ಎಲ್.ಎನ್. ಶಾಸ್ತ್ರಿ ಧ್ವನಿ ನೀಡಿದ್ದಾರೆ. ಎಲ್.ಎನ್. ಶಾಸ್ತ್ರಿ ನಿಧನರಾಗುವ ಕೆಲವು ದಿನಗಳ ಮುನ್ನ ‘ಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ…ನುಡಿಸಲು ಹೊರಟ ಲೋಕವೆಂಬ ಜೀವ ಜಾಲ’ ಎಂಬ ಹಾಡನ್ನು ಹಾಡಿದ್ದರು. ಇದು ಅತ್ಯಂತ ಭಾವನಾತ್ಮಕವಾದ ಹಾಡು. ‘ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ನವೀನ್ ಕೃಷ್ಣ, ಮಾಫಿಯಾದೊಂದಿಗೆ ನೈಜ ಕಥೆಗಳನ್ನೂ ಸೇರಿಸಿದ್ದಾರೆ. ಇದು ನವೀನ್ ಅವರ ಮೊದಲ ನಿರ್ದೇಶನದ ಸಿನಿಮಾ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಅನನ್ಯ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಕೃಷ್ಣಮೂರ್ತಿ ಕವತಾರ್, ಪವಿತ್ರಾ ಜಯರಾಂ, ಮುಖೇಶ್, ಲಕ್ಷ್ಮಿ ಅಪರ್ಣ, ನವೀನ್ ಕುಮಾರ್, ಬೆನಕ ನಂಜಪ್ಪ, ಎಂ.ಕೆ. ಮಠ ಹಾಗೂ ಇತರರು ಇದ್ದಾರೆ. ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಪುತ್ತೂರು ಭಾರತ್ ಮತ್ತು ತನ್ವಿ ಅಮಿನ್ ಕೊಲ್ಯ ಜಂಟಿಯಾಗಿ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಲಾಕ್ಡೌನ್ ಮುಗಿದ ನಂತರ ‘ಮೇಲೊಬ್ಬ ಮಾಯಾವಿ’ ತೆರೆ ಕಾಣಲಿದೆ.
Pingback: Tow Alton IL