ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ!

ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಮನೆಮಾತಾದ ನಟಿ ಮಯೂರಿ ಇoದು ತಮ್ಮ ಬಾಲ್ಯದ ಗೆಳೆಯರಾದ ಅರುಣ್ ರೊಂದಿಗೆ ಬೆಂಗಳೂರಿನ ಬೆಂಗಳೂರಿನ ಜೆ.ಪಿ. ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶುಭ ಲಗ್ನದಲ್ಲಿ ಮದುವೆಯಾಗಿದ್ದಾರೆ.

ತನ್ನ ಬಹುಕಾಲದ ಗೆಳೆಯನಾದ ಅರುಣ್ ಮತ್ತು ಮಯೂರಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು, ಇಂದು ಕುಟುಂಬಸ್ಥರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೃಷ್ಣ ಲೀಲಾ ಚಿತ್ರ ಖ್ಯಾತಿಯ ಮಯೂರಿ ತಮ್ಮ ಮದುವೆ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ನಾನು ನನ್ನ ಬಾಲ್ಯದ ಗಳೊಂದಿಗೆ ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ. ಮಯೂರಿ ಅವರು ಮದುವೆಯಾಗಿರುವ ಅರುಣ್ ಅವರು ಐಟಿ ಉದ್ಯೋಗಿ ಆಗಿದ್ದು, ಅಮೆರಿಕದಲ್ಲಿ ಸೆಟಲ್ ಆಗಿದ್ದರು. ಈಗ ಸದ್ಯ ಅವರು ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಯೂರಿ “ಅಶ್ವಿನಿ ನಕ್ಷತ್ರ” ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ ನoತರ ಕೃಷ್ಣ ಲೀಲಾ , ಇಷ್ಟಕಾಮ್ಯ , ನಟರಾಜ ಸರ್ವಿಸ್ , ಕರಿಯ -2 ರ್ಯಾಂಬೋ -2 , ಜಾನಿ ಜಾನಿ ಎಸ್ ಪಪ್ಪಾ , ಹಾಗೂ 8 ಎಂ.ಎಂ , ರುಸ್ತುಂ, ನನ್ನ ಪ್ರಕಾರ, ಹಾಗೂ ಮೌನಂ ಸೇರಿದಂತೆ ಹಲವಾರು ವಿಭಿನ್ನ ಪಾತ್ರಗಳಲ್ಲಿ ಬೆಳ್ಳಿ ಪರದೆ ಮೇಲೆ ಮಿಂಚಿ ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ.

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿರುವ ಈ ಮುದ್ದು ಮುಖದ ಚೆಲುವೆ ಮಯೂರಿ ಜೀವನದ ಬದುಕಿನಲ್ಲಿ ಯಶಸ್ಸು ಕಾಣಲಿ ಎಂಬುದು ಸಿನಿಪ್ರಿಯರ ಆಶಯ.

This Article Has 1 Comment
  1. Pingback: plumbing company Kitty Hawk NC

Leave a Reply

Your email address will not be published. Required fields are marked *

Translate »
error: Content is protected !!