‘ಪುನರ್ಜೀವ ಸಿಗಲಿದೆ’ಭರತ್ ಬಾಲ ರಾಷ್ಟ್ರಮಟ್ಟ ಕಿರುಚಿತ್ರ!

ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿರುವ ಭರತ್ ಬಾಲ ಅವರು ಸಾಕ್ಷ್ಯಚಿತ್ರ, ಕಮರ್ಷಿಯಲ್ಸ್, ಮ್ಯೂಜಿಕ್ ವಿಡಿಯೋಗಳು, ನಿರ್ದೇಶನ, ನಿರ್ಮಾಣ ಹಾಗೂ ಇನ್ನಿತರ ವಿಚಾರಗಳಲ್ಲಿ ಪರಿಣಿತಿ ಪಡೆದಿರುವವರು. ಭರತ್ ಈಗ ‘ಪುನರ್ಜೀವ ಸಿಗಲಿದೆ’ ಎಂಬ ಕಿರುಚಿತ್ರವನ್ನು ರಾಷ್ಟ್ರಮಟ್ಟದಲ್ಲಿ ತಯಾರಿ ಮಾಡಿದ್ದಾರೆ.

ಕೊರೊನಾ ವೈರಸ್​​​ನಿಂದ ಕುಗ್ಗಿಹೋಗಿರುವ ಭಾರತೀಯರಿಗೆ ಇದು ಧೈರ್ಯ ಹೇಳುವ ಕಿರುಚಿತ್ರ. ಪ್ರತಿಯೊಬ್ಬರಿಗೂ ಮತ್ತೆ ಜೀವನ ಇದೆ, ಕಂಗಾಲಾಗುವುದು ಬೇಡ ಎಂಬ ಸಂದೇಶವನ್ನು ಈ ಕಿರುಚಿತ್ರದ ಮೂಲಕ ನೀಡಲಾಗಿದೆ. ಭರತ್ ಬಾಲಾ ಇದುವರೆಗೂ 500ಕ್ಕೂ ಹೆಚ್ಚು ಟಿವಿ ಕಮರ್ಷಿಯಲ್ ಮಾಡಿರುವವರು. ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್​​ ಫೆಸ್ಟಿವಲ್​​​​ನಲ್ಲಿ ಇವರು ಕಥೆ ಬರೆದಿರುವ ಸಿನಿಮಾಗಳು ಭಾಗವಹಿಸಿವೆ.

ಮಾರ್ಚ್ 24 ರಿಂದ ಇಡೀ ದೇಶವೇ ಲಾಕ್​ಡೌನ್​ ಆಯ್ತು. ಇಂದು ಲಾಕ್​​​ಡೌನ್ ಸಡಿಲಿಕೆ ಆಗಿದ್ದರೂ ಜನಜೀವನ ಮೊದಲಿನಂತೆ ಇಲ್ಲ. ಜನರು ಇಂದಿಗೂ ಭಯದಿಂದಲೇ ಜೀವಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಭರತ್ ಬಾಲಾ ಅವರ 117 ಜನರ ತಂಡ ಭಾರತ ಸರ್ಕಾರದ ಅನುಮತಿ ಪಡೆದು ದೇಶದ 14 ರಾಜ್ಯಗಳ ವಿವಿಧ ಭಾಗಗಳಿಗೆ ತೆರಳಿ ಚಿತ್ರೀಕರಣ ಮಾಡಿದೆ. ಈ ಲಾಕ್​​​ಡೌನ್​​​ನಲ್ಲಿ ಸಂಭವಿಸಿರುವ ವಿಚಾರಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲು ಕಾಶ್ಮೀರದಿಂದ ಕನ್ಯಾಕುಮಾರಿ, ಗುಜರಾತ್​​​ನಿಂದ ಅಸ್ಸಾಂವರೆಗೂ ಈ ತಂಡ ತೆರಳಿದೆ. ಮುಂಬೈನಂತ ಮಹಾನಗರದಲ್ಲಿ ಮಾಸ್ಟರ್​​​​​​​​​ ಕಂಟ್ರೋಲ್ ರೂಂ ಸ್ಥಾಪಿಸಿ ಈ ತಂಡ ಹಗಲಿರುಳು ಶ್ರಮಿಸಿದೆ. ಈ ಸಮಯದಲ್ಲಿ ಭರತ್ ಬಾಲಾ ತಂಡ ಆಶ್ಚರ್ಯಗೊಳ್ಳುವಂತ ದೃಶ್ಯಗಳು ದೊರೆತಿವೆಯಂತೆ.

ಜೂನ್ 6 ರಿಂದ 13 ವರೆಗೂ ಎಲ್ಲಾ ಡಿಜಿಟಲ್ ಪ್ಲಾಟ್​​​​​​​ಫಾರ್ಮ್​ನಲ್ಲಿ ‘ಪುನರ್ಜೀವ ಸಿಗಲಿದೆ’ ಪ್ರಸಾರವಾಗಲಿದೆ. ಟೀಮ್ ವರ್ಚ್ಯುಯಲ್ ಭಾರತ್ ಸಂಸ್ಥೆ ಈ ಕಿರುಚಿತ್ರವನ್ನು ನಿರ್ಮಿಸಿದೆ.

This Article Has 1 Comment
  1. Pingback: Auto Glass Anytime Strongsville OH

Leave a Reply

Your email address will not be published. Required fields are marked *

Translate »
error: Content is protected !!