ಲಾಕ್ಡೌನ್ ಸಮಯದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸಿಂಪಲ್ ಆಗಿ ಮದುವೆಯಾಗಿ ಗಮನ ಸೆಳೆದಿದ್ದರು. ನಂತರ ಪತ್ನಿ ರೇವತಿ ಜೊತೆ ಕೊರೊನಾದಿಂದ ಕಷ್ಟಪಡುತ್ತಿದ್ದ ರಾಮನಗರದ ಜನತೆಗೆ ದಿನಸಿ ಕಿಟ್ಗಳನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ನಿಖಿಲ್ ಅವರು ಪತ್ನಿ ಜೊತೆ ರೊಮ್ಯಾಂಟಿಕ್ ಮೂಡ್ನಲ್ಲಿದ್ದಾರೆ.
ಬಿಡದಿ ಬಳಿಯ ತಮ್ಮ ತೋಟದ ಮನೆಯಲ್ಲಿ ನಿಖಿಲ್, ತಮ್ಮ ಪತ್ನಿ ರೇವತಿ ಜೊತೆ ಸಂತೋಷವಾಗಿ ಓಡಾಡಿಕೊಂಡಿದ್ದಾರೆ. ರೇವತಿ ಕೈ ಹಿಡಿದು ಹೆಜ್ಜೆ ಹಾಕುತ್ತಿರುವ ಫೋಟೋವೊಂದನ್ನು ಸ್ವತಃ ನಿಖಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕೊರೊನಾ ಹಾವಳಿಯಿಂದ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಜೊತೆ ಎಲ್ಲೂ ಹೊರಗಡೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಫಾರಂಹೌಸ್ನಲ್ಲೇ ಪತ್ನಿ ಜೊತೆ ಕಾಲ ಕಳೆಯುತ್ತಿದ್ದಾರೆ. ರೇವತಿ ಪಿಂಕ್ ಬಣ್ಣದ ಸೀರೆಯಲ್ಲಿ ಗಮನ ಸೆಳೆದರೆ, ನಿಖಿಲ್ ಕುಮಾರಸ್ವಾಮಿ ವೈಟ್ ಅಂಡ್ ವೈಟ್ ಕುರ್ತಾದಲ್ಲಿ ಯುವರಾಜನಂತೆ ಕಾಣುತ್ತಿದ್ದಾರೆ.
ನಿಖಿಲ್ ಸಿನಿಮಾ ವಿಚಾರಕ್ಕೆ ಬರುವುದಾರೆ, ಅವರ ಕೈಯ್ಯಲ್ಲಿ 4 ಹೊಸ ಚಿತ್ರಗಳಿವೆ. ಲಾಕ್ಡೌನ್ ಮುಗಿದ ಬಳಿಕ ನಿಖಿಲ್ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
Be the first to comment