ಬಹಳಷ್ಟು ಪೂರ್ವ ತಯಾರಿಯನ್ನು ಮಾಡಿಕೊಂಡು ತಾವು ಮಾಡುವ ಸಿನಿಮಾದ ಬಗ್ಗೆ ಸಿನಿಪ್ರಿಯರ ಗಮನಕ್ಕೆ ತರುವ ಕೆಲವೇ ಕೆಲವು ನಿರ್ಮಾಪಕರಲ್ಲಿ ರಂಗಿತರಂಗ ಚಿತ್ರದ ಕೆ.ಹೆಚ್. ಪ್ರಕಾಶ್ ಕೂಡ ಒಬ್ಬರು.
ರಂಗಿತರಂಗ ಹಾಗೂ ಅವನೇ ಶ್ರೀಮನ್ನಾರಾಯಣ ದಂಥ ಯಶಸ್ವಿ ಚಿತ್ರಗಳನ್ನು ನೀಡಿದ ನಂತರ ತಮ್ಮ ಶ್ರೀದೇವಿ ಎಂಟರ್ ಟೈನರ್ ಮೂಲಕ 3ನೇ ಚಿತ್ರವಾಗಿ ಹಾರರ್ ಹಾಗೂ ಕಾಮಿಡಿ ಕಥಾನಕದ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಅಂಶವನ್ನು ಪ್ರೇಕ್ಷಕರಿಗೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಚಿತ್ರವನ್ನು ಭರತ್. ಜಿ ಎಂಬ ಯುವ ಪ್ರತಿಭೆ ಆಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲೇ ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದು, ಈ ಚಿತ್ರಕ್ಕಾಗಿ ಊಟಿಯಲ್ಲಿರುವ 103 ವರ್ಷದ ಹಳೆಯ ಮನೆಯ ಒಂದನ್ನು ಆನ್ ಲೈನ್ ಮೂಲಕವೇ ಪತ್ತೆ ಮಾಡಿ ಚಿತ್ರೀಕರಣಕ್ಕೆ ಆಯ್ಕೆ ಮಾಡಿದ್ದಾರೆ.
ಬಹುತೇಕ ಕೆಲಸ ಕಾರ್ಯವನ್ನು ಆನ್ ಲೈನ್ ಮೂಲಕವೇ ಮಾಡಿದ್ದು, ಮುಖ್ಯ ತಾಂತ್ರಿಕ ವರ್ಗಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಒಗ್ಗೂಡಿಸಿಕೊಂಡು ಪಾತ್ರ ವರ್ಗಕ್ಕೆ ಆನ್ ಲೈನ್ ನಲ್ಲೇ ಆಡಿಷನ್ ಮಾಡುವ ಹೊಸ ಮಾದರಿಯ ಕಾನ್ಸೆಪ್ಟನ್ನು ಡ್ಯಾಶ್ ಬೋರ್ಡ್ ನಲ್ಲಿ ಸಿದ್ಧಪಡಿಸಿದ್ದಾರೆ.
ಹೊಸ ಮುಖಗಳನ್ನು ಪತ್ತೆ ಹಚ್ಚಿ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸುವ ಕೆಲಸವನ್ನು ಶ್ರೀದೇವಿ ಸಂಸ್ಥೆ ಮಾಡುತ್ತಿದೆ. ಇದೊಂದು ರೀತಿ ವಿಭಿನ್ನವಾದ ಆಡಿಶನ್ ಆಗಿದ್ದು, ಮುಖ್ಯ ತಾರಾಗಣ ಮತ್ತು ತಾಂತ್ರಿಕ ವರ್ಗವನ್ನು ಮುಂದಿನ ದಿನಗಳಲ್ಲಿ ಪರಿಚಯಿಸಲಿದ್ದಾರೆ. ಸದ್ಯ ಕೊರೋನಾ ಹಾವಳಿಯಿಂದ ಎಲ್ಲರೂ ಮನೆಯಲ್ಲಿ ಇರುವುದರಿಂದ ಸ್ಟೇ ಹೋಂ… ಸ್ಟೇ ಸೇಫ್… ಎನ್ನುತ್ತಿದೆ ಚಿತ್ರತಂಡ.
Be the first to comment