6 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ 3D ಸಿನಿಮಾ ‘ಸಾಲ್ಮನ್’

ಶಲೀಲ್ ಕಲೂರ್ ನಿರ್ದೇಶಿಸಿರುವ 3ಡಿ ಸಿನಿಮಾ ಸಾಲ್ಮನ್​ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿ ಒಟ್ಟು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ದಕ್ಷಿಣ ಭಾರತದಲ್ಲೇ ಪ್ರತಿಭಾನ್ವಿತ ನಿರ್ದೇಶಕ ಎಂದೇ ಭರವಸೆ ಮೂಡಿಸಿರುವ ಶಲೀಲ್ ಕಲೂರ್ ಈ ಚಿತ್ರದ ನಿರ್ದೇಶಕರು.

ಇದೊಂದು ರೊಮ್ಯಾಂಟಿಕ್ ಸಸ್ಪೆನ್ಸ್ ಚಿತ್ರವಾಗಿದ್ದು, ಬಹುತೇಕ ಭಾಗದ ಚಿತ್ರೀಕರಣವು ಆಕರ್ಷಕ ತಾಣಗಳಾದ ಕುಲು -ಮನಾಲಿ, ರಾಮೋಜಿರಾವ್ ಫಿಲಂಸಿಟಿ , ದುಬೈ, ಮಲೇಷ್ಯಾ ಮುಂತಾದ ಕಡೆ ಪೂರ್ಣಗೊಂಡಿದೆ.

ಈ ಚಿತ್ರವು ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲೂ ತೆರೆಕಾಣಲಿದೆ. ಎಂ.ಜೆ.ಎಸ್.ಮೀಡಿಯಾ ಬ್ಯಾನರ್ ಈ ಚಿತ್ತವನ್ನು ಸುಮಾರು 12 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಡಾ. ಟಿ.ಎನ್.ವಿನೀತ್ ಭಟ್, ಶಾಜು ಥಾಮಸ್, ಜೋಸ್.ಡಿ.ಪೇಕಾಟ್ಟಿಲ್ ಮತ್ತು ಜಾಯಿಸ್.ಟಿ.ಪೇಕಾಟ್ಟಿಲ್ ಇದರ ನಿರ್ಮಾಪಕರಾಗಿದ್ದಾರೆ.

ಹುಟ್ಟಿದ ತಕ್ಷಣವೇ ಅನಾಥವಾಗುವ ವೈಶಿಷ್ಯತೆಯನ್ನು ಹೊಂದಿರುವ ಸಾಲ್ಮನ್ ಮೀನಿನ ಹೆಸರನ್ನು ಈ ಚಿತ್ರಕ್ಕೆ ಇಡಲಾಗಿದ್ದು, ಅದು ತನ್ನ ಬದುಕಿನಲ್ಲಿ ಎದುರಾಗುವ ಪ್ರತಿಕೂಲ ಪರಿಸ್ಥಿತಿಗಳನ್ನು ದಾಟಿ ಹಲವಾರು ಉಪಖಂಡ ಪ್ರದೇಶಗಳನ್ನು ಹೇಗೆ ಸೇರುತ್ತದೆಯೋ, ಅದೇರೀತಿ ಕಥಾನಾಯಕನ ಜೀವನದ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಘಟನಾವಳಿಗಳೇ ಈ ಸಿನೇಮಾದ ಕಥಾವಸ್ತುವಾಗಿದೆ.

ದುಬೈನಲ್ಲಿ ತನ್ನ ಕುಟುಂಬ ಸಮೇತ ನೆಲೆಸಿ ಒಮ್ಮೆ ಹುಟ್ಟೂರಿಗೆ ಆಗಮಿಸಿದ ವೇಳೆ ಅನಿರೀಕ್ಷಿತವಾಗಿ ನಡೆಯುವ ದಾರುಣ ಸಾವು, ಆ ಬಳಿಕ ಅನಾವರಣಗೊಳ್ಳುವ ಆತ್ಮದ ಹಿನ್ನೆಲೆಯು ಈ ಸಿನೇಮಾದ ಕಥಾಹಂದರವಾಗಿದೆ.

ಖ್ಯಾತ ಗಾಯಕರಾದ ಜೇಸುದಾಸ್ ಅವರ ಪುತ್ರ ವಿಜಯ್ ಜೇಸುದಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ರಾಹುಲ್ ಮೆನನ್ ಕ್ಯಾಮರಾ ನಿರ್ವಹಿಸಿದ್ದು, ಜೀಮೋನ್ ಪಲ್ಲೇಲಿ 3 ಡಿ ಸ್ಟೀರಿಯೋಸ್ಕಾಪಿಕ್ ಜವಾಬ್ದಾರಿಯನ್ನೂ ಹೊತ್ತಿದ್ದು, ಈ ಚಿತ್ರವು ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗಲಿದೆ.

This Article Has 1 Comment
  1. Pingback: lowongan cpns 2021 lulusan sma

Leave a Reply

Your email address will not be published. Required fields are marked *

Translate »
error: Content is protected !!