ಕನಸು ಯಾರ ಸ್ವತ್ತು ಅಲ್ಲ… ಮನುಷ್ಯ ಕನಸು ಕಾಣಬೇಕು, ಅದರ ಜೊತೆಗೆ ಕನಸನ್ನು ನನಸು ಮಾಡಿಕೊಳ್ಳುವ ಶಕ್ತಿ , ಬುದ್ಧಿವಂತಿಕೆಯ ಅವನಲ್ಲಿ ಇರಬೇಕು. ಕೆಸರಲ್ಲೆ ಕಮಲ ಅರಳೋದು ಎಂಬ ಕನ್ನಡ ಜನಪ್ರಿಯ ನಾಣ್ಣುಡಿಯಂತೆ ಕಷ್ಟಗಳನ್ನೆ ಸಾಧನೆಯ ಮೆಟ್ಟಿಲಾಗಿಸಿಕೊಂಡು ಇಂದು ಸಾಧಕರ ಹಾದಿಯಲ್ಲಿರುವ ಬರವಸೆಯ ಯುವ ನಿರ್ದೇಶಕನಾಗಿ ಪ್ರಭಾಕರ್ ಶೇರ್ ಖಾನೆ ತಮ್ಮ ಚೊಚ್ಚಲ ನಿರ್ದೇಶನದ ಕೌಟಿಲ್ಯ ಚಿತ್ರದ ಮುಖಾಂತರ ಸಿನಿ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ನಾಗನೂರು ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಸಿನಿಮಾದಲ್ಲಿ ಆಸಕ್ತಿ ಬೆಳೆಸಿಕೊಂಡರು. ಮುಂದಿನ ದಿನಗಳಲ್ಲಿ ಇವರ ಈ ಆಸಕ್ತಿಯೇ ಅವರನ್ನು ಯಾರು ಪರಿಚಿತರಿಲ್ಲದ ಬೃಹತ್ ಬೆಂಗಳೂರಿನ ಗಾಂಧಿ ನಗರಕ್ಕೆ ಕರೆತರುತ್ತದೆ.
ದೊಡ್ಡ ಕನಸನ್ನು ಹೊತ್ತಿದ್ದ ಇವರಿಗೆ ಯಾರ ಸಹಾಯವು ಸಿಗದೆ ಅನೇಕ ಅವಮಾನಗಳನ್ನ ಅನುಭವಿಸುತ್ತಾರೆ ಬೆಟ್ಟದಂತಹ ಕನಸು ಮಂಜಿನಂತೆ ಕರಗುವಾಗ ವಿಷ್ಣು ಭಂಡಾರಿ ಎಂಬುವವರಿಂದ ಆಧರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ ನ ಪರಿಚಯವಾಗುತ್ತದೆ.
ನಂತರ ಅಲ್ಲಿಯೇ ನಿರ್ದೇಶನದ ತರಬೇತಿ ಪಡೆಯುತ್ತಾರೆ. ನಂತರ ಗಾಳಿಪಟ ಎಂಬ ಧಾರವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಾರೆ. ತದ ನಂತರ ಗೊಂಬೆಗಳ ಲವ್, ನಾನು ಲವರ್ ಆಫ್ ಜಾನು, ಕೆಂಡ ಸಂಪಿಗೆ ಹೀಗೆ ಅನೇಕ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿ ನಿರ್ದೇಶನದಲ್ಲಿ ಪರಿಣಿತಿ ಪಡೆದ ಇವರು ಇಂದು ತಮ್ಮ ಕನಸಿನ ಕೂಸಾದ ಕೌಟಿಲ್ಯ ಚಿತ್ರ ನಿರ್ದೇಶನದ ಮುಖಾಂತರ ಸಿನಿ ಲೋಕದಲ್ಲಿ ತಮ್ಮ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ.
ಇವರ ಚೊಚ್ಚಲ ನಿರ್ದೇಶನದ ಕೌಟಿಲ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಮುಗಿಸಿ ರಿಲೀಸ್ ಹಂತಕ್ಕೆ ಬಂದಿದೆ. ಪ್ರಭಾಕರ್ ಶೇರ್ ಖಾನೆ ಯ ಈ ಕನಸಿನ ಚಿತ್ರ ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ರಾರಾಜಿಸಲಿ.
Pingback: like it