ಶಿವಾಜಿ ಸೂರತ್ಕಲ್ ಈಗ ಓಟಿಟಿಯಲ್ಲಿ

ನಟ, ನಿರ್ದೇಶಕ ರಮೇಶ್ ಅರವಿಂದ ಅಭಿನಯದ ಪತ್ತೇದಾರಿ ಕಥಾನಕ ಹೊಂದಿದ ಚಿತ್ರ ಶಿವಾಜಿ ಸುರತ್ಕಲ್ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಲಿದ್ದು, ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮೊಬೈಲ್‍ಗಳಲ್ಲಿ ನೋಡಲು ಸಿಗಲಿದೆ. ಲಾಕ್ಡೌನ್‍ಗೆ ಕೆಲ ದಿನಗಳ ಮುಂಚೆ ಬಿಡುಗಡೆಯಾಗಿದ್ದ ಕೆಲವು ಚಿತ್ರಗಳು ಲಾಭಾಂಶ ನೋಡುವ ವೇಳೆಗೆ ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ನಿರ್ಮಾಪಕರಲ್ಲಿ ನಿರಾಸೆ ಮೂಡಿಸಿದ್ದವು. ಅವುಗಳ ಪೈಕಿ ಶಿವಾಜಿ ಸೂರತ್ಕಲ್ ಚಿತ್ರವೂ ಒಂದು.

ಲಾಕ್ಡೌನ್‍ಗೆ ಮುನ್ನ ಚಿತ್ರಮಂದಿರಗಳಲ್ಲಿದ್ದ, ಪ್ರೇಕ್ಷಕರಿಂದ, ವಿಮರ್ಶಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ಶಿವಾಜಿ ಸೂರತ್ಕಲ್ ಚಿತ್ರವೂ ಸಹ ಲಾಕ್ಡೌನ್‍ನಿಂದಾಗಿ ತೊಂದರೆ ಅನುಭವಿಸಿದೆ. ಈಗ ಅದೇ ಶಿವಾಜಿ ಸೂರತ್ಕಲ್ ಓಟಿಟಿಗೆ ಶೀಘ್ರದಲ್ಲಿಯೇ ಬರುವ ಸಾಧ್ಯತೆ ಇದೆ.

ಫೆಬ್ರವರಿ 21ರಂದು ಬಿಡುಗಡೆಯಾಗಿದ್ದ ಶಿವಾಜಿ ಸೂರತ್ಕಲ್, ಮೂರು ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ನೀಡಿ, ಲಾಭದತ್ತ ಹೊರಳುವ ವೇಳೆಗೆ ಚಿತ್ರಮಂದಿರ ಬಂದ್ ಆಯಿತು. ಚಿತ್ರಮಂದಿರಗಳು 30-40 ದಿನಗಳಲ್ಲಿ ಪುನರಾರಂಭವಾಗುತ್ತದೆ ಎಂಬ ತಂಡದ ನಂಬಿಕೆ ಹುಸಿಯಾಗಿದೆ.

ಈಗ ಓಟಿಟಿಯಲ್ಲಿ ಒಳ್ಳೇ ಆಫರ್ ಬಂದ ಕಾರಣ ಸಿನಿಮಾವನ್ನು ಝೀ5ಗೆ ಚಿತ್ರದ ನಿರ್ಮಾಪಕರು ಮಾರಾಟ ಮಾಡುವ ಮೂಲಕ ಒಂದಷ್ಟು ಲಾಭಾಂಶವನ್ನು ಕಾಣುತ್ತಿದ್ದಾರೆ. ಈ ತಿಂಗಳ ಅಂತ್ಯದ ವೇಳೆಗೆ ಓಟಿಟಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇಂಥಾ ದಿನವೇ ಬಿಡುಗಡೆ ಮಾಡುತ್ತಾರೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ಶಿವಾಜಿ ಸೂರತ್ಕಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಹಿಟ್ ಎನಿಸಿಕೊಂಡಿತ್ತು. ರಮೇಶ್ ಅರವಿಂದ್, ಆರೋಹಿ ನಾರಾಯಣ್, ರಾಧಿಕಾ ನಾರಾಯಣ್ ಅವಿನಾಶ್ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿತ್ತು.

ಅದೇ ಸಮಯದಲ್ಲಿ ಯಶಸ್ವಿಯಾಗಿದ್ದ ದಿಯಾ, ಲವ್ ಮಾಕ್ಟೆಲ್‍ನಂಥ ಹಲವು ಸಿನಿಮಾಗಳು ಲಾಕ್ಡೌನ್ ಕಾರಣದಿಂದ ಓಟಿಟಿಯಲ್ಲಿ ಬಿಡುಗಡೆ ಕಾಣುತ್ತಿವೆ. ಚಿತ್ರಮಂದಿರಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ಕಾಣದಿದ್ದ ದಿಯಾ, ಲವ್ ಮಾಕ್ಟೇಲ್ ಸಿನಿಮಾಗಳು ಅಮೆಜಾನ್ ಪ್ರೈಂನಲ್ಲಿ ಭಾರಿ ಹಿಟ್ ಎನಿಸಿಕೊಂಡವು.

ಇನ್ನು ಚಿತ್ರಮಂದಿರಗಳಲ್ಲಿಯೇ ಯಶಸ್ವಿಯಾಗಿದ್ದ ಶಿವಾಜಿ ಸೂರತ್ಕಲ್ ಚಿತ್ರ ಓಟಿಟಿಯಲ್ಲಿ ಯಾವ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

This Article Has 2 Comments
  1. Pingback: best cvv website

  2. Pingback: Rescue Tow Broken Arrow

Leave a Reply

Your email address will not be published. Required fields are marked *

Translate »
error: Content is protected !!