ಈಗಾಗಲೇ ಕೊರೋನಾ ವಾರಿಯರ್ಸ್ಗೆ ಆಹಾರ ಕಿಟ್ ಗಳನ್ನು ನೀಡುವ ಮೂಲಕ ಬೆಂಬಲಕ್ಕೆ ನಿಂತ ಓಗರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕನ್ನಡದಲ್ಲಿ ಆಕ್ಕ್ಸಿಡೆಂಟ್, ಹೆಬ್ಬುಲಿ, ಜಿಗರ್ಥಂಡದಂತಹ ಚಲನಚಿತ್ರಗಳನ್ನು ನಿರ್ಮಿಸಿದ ಶ್ರೀ ರಘುನಾಥ್ ಇವರ ಪುತ್ರ ವಾಗ್ಮಿ ಎನ್ನುವುದು ವಿಶೇಷ.
ಬಾವಲಿ ಮತ್ತು ಜೋಕರ್ ಎನ್ನುವ ಎರಡು ಕಾಲ್ಪನಿಕ ಪಾತ್ರಗಳನ್ನಿಟ್ಟುಕೊಂಡು ತಯಾರಾಗಿರುವ ಈ ಕಿರುಚಿತ್ರ, ಈ ಹೊತ್ತಿನ ಕೊರೋನಾ ಸನ್ನಿವೇಶಗಳನ್ನು ಮನಮುಟ್ಟುವಂತೆ ಕಟ್ಟಿಕೊಡಲಾಗಿದೆ. ಸಾಹಸ ಮತ್ತು ರೋಚಕತೆ ಈ ಕಿರುಚಿತ್ರದ ಪ್ರಧಾನ ಅಂಶಕೂಡ ಆಗಿದೆ.
ಈಗಾಗಲೇ ವೈದ್ಯರು, ನರ್ಸ್, ಪ್ಯಾರಾ ಮೆಡಿಕಲ್ ಸ್ಟಾಪ್ ಸೇರಿದಂತೆ ವೈದ್ಯಕೀಯ ವಲಯದ ನಾನಾ ವಿಭಾಗಗಳು ಹಗಲಿರುಳು ಕೆಲಸ ಮಾಡುತ್ತಿವೆ. ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆಗಳು ನಡೆದರೂ, ಅವರು ಮತ್ತೆ ಸೇವೆಯಲ್ಲಿ ನಿರತರಾಗಿದ್ದಾರೆ.
ಅಂತಹ ಮಹಾನ್ ಸಿಬ್ಬಂದಿಗಳಿಗೆ ತಮ್ಮ ಕಿರುಚಿತ್ರ ಗೌರವ ಅರ್ಪಿಸುತ್ತಿದೆ. ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸುತ್ತದೆ ಎಂದಿದ್ದಾರೆ ನಿರ್ದೇಶಕರು.ಎಸ್ ಆರ್ ವಿ ರಘುನಾಥ್ ಮತ್ತು ವಿಆರ್ ವೈ ಎಂಟರ್ಟೈನ್ಮೆಂಟ್ ಅರ್ಪಿಸುವ ಈ ಕಿರುಚಿತ್ರ, ವಿಆರ್ ವೈ ಮೂವ್ಹೀಸ್ ಪ್ರೊಡಕ್ಷನ್ ಜತೆ ಸಿಎಸ್ ಜೆ ಆರ್ಟ್ಸ್ ಸಹಯೋಗದೊಂದಿಗೆ ನಿರ್ಮಾಣ ಆಗಿದೆ.
ದ ಡಾರ್ಕ್ ಸ್ಪ್ರೆಡ್ ನಲ್ಲಿ ಚಿಂತನ್ ಮತ್ತು ವಾಗ್ಮಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕಲ್ಪನೆ, ನಿರ್ದೇಶನ, ಸಿನಿಮಾಟೋಗ್ರಫಿ, ಸಂಕಲನ, ಸಂಗೀತ ವಾಗ್ಮಿ ಆರ್ ಯಜುರ್ವೇದಿ ಅವರದ್ದು. ಕಥೆ, ಚಿತ್ರಕಥೆ ಚಿಂತನ್ ಎಸ್ ಜೋಯಿಸ್ ಬರೆದಿದ್ದರೆ, ವಾಣಿ ಶ್ರೀ ಕಾರ್ಯಕಾರಿ ನಿರ್ಮಾಪಕರು. ಜತೆಗೆ ಮೇಕಪ್ ಮತ್ತು ಕಾಸ್ಟ್ಯೂಮ್ ಕೂಡ ಇವರದ್ದೆ. ಇಂಗ್ಲೀಷ್ ನಲ್ಲಿ ತಯಾರಾಗಿರುವ ಈ ಕಿರುಚಿತ್ರ ಈಗಾಗಲೇ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ.
Be the first to comment