ಚಿತ್ರೋದ್ಯಮದ ಕಾರ್ಮಿಕರಿಗೆ ರಿಲಯನ್ಸ್ ಸಂಸ್ಥೆಯಿಂದ ಗಿಫ್ಟ್ ವೋಚರ್!

ಬಣ್ಣದ ಬದುಕನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದೆ. ಆ ಎಲ್ಲಾ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿದೆ. ಇದನ್ನು ಗಮನಿಸಿದಂತ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಹಾಯ ಹಸ್ತವನ್ನು ನೀಡಿದ್ದಾರೆ. ರಿಲಯನ್ಸ್ ಸಂಸ್ಥೆ ನೀಡಿದ 2 ಕೋಟಿ ದೇಣಿಗೆಯನ್ನು ಗಿಫ್ಟ್ ವೋಚರ್ ಮೂಲಕ ನಿನ್ನೆ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ಸಿನಿಮಾ ಮಂದಿಗೆ ಸಹಾಯ ಮಾಡಲು ಆಲೋಚಿಸಿ, ಸಹಕಾರಿಯಾಗಿ ನಿಂತವರು ಸಿ.ಎಂ. ಸುಪುತ್ರ ವಿಜಯೇಂದ್ರ ಅವರು. ನಿನ್ನೆ ಸಿ.ಎಂ. ಅಧಿಕೃತ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಿಫ್ಟ್ ಕೂಪನ್ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ , ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ , ಉಪಾಧ್ಯಕ್ಷ ಉಮೇಶ್ ಬಣಕಾರ್ , ಕಲಾವಿದರ ಸಂಘದ ಜಂಟಿ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್, ಅಕಾಡೆಮಿ ಮಾಜಿ ಅಧ್ಯಕ್ಷೆ ತಾರಾ ಅನುರಾಧಾ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಈ ಒಂದು ಗಿಫ್ಟ್ ವೋಚರ್ ಸರ್ಕಾರದ ಅಂಗ ಸಂಸ್ಥೆಯಾದಂತ ಚಲನಚಿತ್ರ ಅಕಾಡೆಮಿ ಮೂಲಕ ವಿತರಿಸಲಾಗುವುದಂತೆ.ಈ ಒಂದು ಜವಾಬ್ದಾರಿಯನ್ನು ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ವಹಿಸಿಕೊಂಡಿದ್ದು , ಚಿತ್ರೋದ್ಯಮದ ಕಾರ್ಮಿಕರು , ಒಕ್ಕೂಟದ ಅಂಗ ಸಂಸ್ಥೆಗಳು , ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಛಾಯಾಗ್ರಾಹಕರ ಸಂಘ, ಸೇರಿದಂತೆ ಅನೇಕ ಅಂಗ ಸಂಸ್ಥೆಗಳು ಹಾಗೂ ಕಿರುತೆರೆಯಲ್ಲಿ ಇರುವಂತಹ ಎಲ್ಲ ಕಾರ್ಮಿಕರ ವಿಭಾಗಗಳಿಗೂ ಈ ಒಂದು ಗಿಫ್ಟ್ ವೋಚರ್ ತಲುಪಿಸಲು ಸಿದ್ಧವಾಗಿದೆ.

ಸರಿ ಸುಮಾರು 6 ಸಾವಿರ ಕಾರ್ಮಿಕರಿಗೆ 3 ಸಾವಿರದ ದಿನಸಿ ಗಿಫ್ಟ್ ಕೂಪನ್ ಗಳನ್ನು ನೀಡುವ ಉದ್ದೇಶ ಇದಾಗಿದ್ದು, ಬಹಳ ಪಾರದರ್ಶಕವಾಗಿ ಎಲ್ಲ ಸಂಸ್ಥೆಗಳ ಸದಸ್ಯರ ಪಟ್ಟಿಯನ್ನು ಪಡೆದುಕೊಂಡು ಪರಿಶೀಲಿಸಿ ನಂತರ ಸಂಸ್ಥೆಯ ಅಧ್ಯಕ್ಷರ ಮೂಲಕ ಹಸ್ತಾಂತರ ಮಾಡಲಿದ್ದಾರಂತೆ.

ಕೊರೋನಾ ಹಾವಳಿಯಿಂದ ಇಡೀ ಚಿತ್ರೋದ್ಯಮ ಸ್ತಬ್ಧವಾಗಿದ್ದು, ಬಹಳಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ಈ ಒಂದು ಕೆಲಸ ಉತ್ತಮವಾಗಿದ್ದು , ಸಂಕಷ್ಟದಲ್ಲಿ ಇರುವರಿಗೆ ತುಂಬಾ ಅನುಕೂಲವಾಗಲಿದೆ. ಸರ್ಕಾರದ ಈ ಒಂದು ಉತ್ತಮ ಪ್ರಯತ್ನಕ್ಕೆ ಚಿತ್ರೋದ್ಯಮದ ಮಂದಿಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!