ಡಾ.ರಾಜ್ ಕುಮಾರ್ ಅವರ ಚಿತ್ರ ಜೀವನವಷ್ಟೇ ಅಲ್ಲ.. ಇಡೀ ಕನ್ನಡ ಚಿತ್ರರಂಗ ಭಾರತೀಯ ಚಿತ್ರರಂಗದಲ್ಲಿ ಸ್ಮರಣೀಯವಾದ ವರ್ಷ1972..
ರಾಜ್ ಕುಮಾರ್ ಅವರು ಸಿನಿಮಾ ಇತಿಹಾಸದಲ್ಲಿ ವರ್ಣರಂಜಿತ ದಾಖಲೆ ಮಾಡಿದ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ಬಂಗಾರದ ಮನುಷ್ಯ ಅಭೂತಪೂರ್ವ ದಾಖಲೆ ವಷ೯….”ಬಂಗಾರದ ಮನುಷ್ಯ “ಎಲ್ಲ ಚಿತ್ರಗಳಿಗಿಂತಲೂ ಅದೆಷ್ಟು ಎತ್ತರದ ಯಶಸ್ಸನ್ನು ಕಂಡು ತನ್ನದಾಗಿಸಿಕೊಂಡು ಇಂದಿಗೂ ಮುರಿಯಲಾಗದೆ ದಾಖಲೆ ನಿರ್ಮಿಸಿತ್ತು… .. ಡಾ. ರಾಜ್ ಕುಮಾರ್ ಅವರ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಚಿತ್ರ. ಟಿ.ಕೆ ರಾಮರಾವ್ ಕಾದಂಬರಿ ಆಧಾರಿತಶ್ರೇಷ್ಠ ನಿರ್ದೇಶಕ ಸಿದ್ಧಲಿಂಗಯ್ಯನವರ ಪ್ರೌಢ ಮಟ್ಟದ ಶ್ರೇಷ್ಠ ನಿರ್ದೇಶನದ ಬಂಗಾರದ ಮನುಷ್ಯ ಚಿತ್ರ …. ಈ ಸಿನಿಮಾದಿಂದ ಭಾರತದಲ್ಲೇ ರಾಜ್ ಕುಮಾರ ಅಗ್ರಗಣ್ಯ ನಟರಾದರು “ಬಂಗಾರದ ಮನುಷ್ಯ”ಬೆ೦ಗಳೂರಿನ ” ಸ್ಟೇಟ್( states) ಚಿತ್ರಮಂದಿರದಲ್ಲಿ ಎರಡು ವರ್ಷಕ್ಕಿಂತ ಮೇಲೆ ನಡೆದು ಭಾರಿ ಲಾಭ ಗಳಿಸಿತು.. ರಾಜೀವನ ಪಾತ್ರದಲ್ಲಿ ರಾಜ್ ನಟಿಸಿದರೂ …ರಾಜೀವ ಊರಿಗೆ ಉಪಕಾರಿ ಆದರೆ ಅವನ ತ್ಯಾಗ ಸೇವಾ ಮನೋಭಾವ ಅರಿಯದ ಅವರ ಅಕ್ಕನ ಮಕ್ಕಳು ಅವರ ವಿರುದ್ಧವೇ ತಿರುಗಿ ಬೀಳುತ್ತಾರೆ .ರಾಜೀವ ಎಲ್ಲರನ್ನು ತ್ಯಜಿಸಿ ಬಹುದೂರ ಹೋಗಿ ಬಿಡುತ್ತಾರೆ.. .. ಬಂಗಾರದ ಮನುಷ್ಯ ಸಿನಿಮಾದ ಚಿತ್ರದ ಕೊನೆಯಲ್ಲಿ ರಾಜ್ ಕುಮಾರ ನಿರ್ವಹಿಸಿದ ಪಾತ್ರವು ಮನೆಯವರಿಂದ ಕಟಿಕಿಯಾಡಿಸಿಕೊಂಡು.. ಊಟದ ತಟ್ಟೆಯಲ್ಲಿ ಅನ್ನವನ್ನು ಬಿಟ್ಟು ಒಬ್ಬರೇ ಅನಾಥರಂತೆ ಹೋಗುವ ದೃಶ್ಯವಿದೆ.ಅದೊಂದು ವಿಷಾದ ಭಾವದ ದೃಶ್ಯ ..ಬಿಡುಗಡೆಗೆ ಮುಂಚೆ ಏರ್ಪಡಿಸಿದ ಪ್ರದರ್ಶನವನ್ನು ನೋಡಿದ ವಿತರಕರು ಒಳಗೊಂಡಂತೆ ಕೆಲವರು ಪ್ರೇಕ್ಷಕರು ರಾಜ್ ಕುಮಾರ ಅವರನ್ನು ಹೀಗೆ ನೋಡೋಕ್ಕೆ ಇಷ್ಟ ಪಡುವುದಿಲ್ಲ ..ಕೊನೆಯ ದೃಶ್ಯ ಬದಲಾಯಿಸಬೇಕು ಇಲ್ಲದಿದ್ದರೆ ಸಿನಿಮಾ ಸೋಲುತ್ತೆ ಎಂದು ಅಭಿಪ್ರಾಯಪಟ್ಟರು… ರಾಜಕುಮಾರ್ ಅವರಿಗೂ ಸ್ಪಷ್ಟಪಡಿಸಿದ್ದರು.. ಆದರೆ ರಾಜ್ ಕುಮಾರ ಅವರಿಗೆ ಈ ಅಭಿಪ್ರಾಯ ಸಮ್ಮತವಾಗಲಿಲ್ಲ” ಕಥೆ ಬಯಸಿದಂತೆ ದೃಶ್ಯಗಳ ಇರಬೇಕು ಎಂಬುದು ಅವರ ಅಭಿಪ್ರಾಯ” ..ನಿರ್ದೇಶಕ ಸಿದ್ದಲಿಂಗಯ್ಯ .. ಅವರಂತೂ ಪಟ್ಟು ಬಿಡದ ವ್ಯಕ್ತಿ ಸಿನಿಮಾದ ಅಂತ್ಯ ಹೀಗೇ ಇರಬೇಕು ಎಂದರು ..
ರಾಜ್ ಕುಮಾರ್ ನಿರ್ದೇಶಕರ ತೀರ್ಮಾನವೇ ಅ೦ತಿಮ ಎಂದು ಬೆಂಬಲಿಸಿದರೂ ..ಬಂಗಾರದ ಮನುಷ್ಯ ಬಿಡುಗಡೆ ಮೇಲೆ ಉಂಟು ಮಾಡಿದ ಪರಿಣಾಮದಿಂದ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರ ದೃಷ್ಟಿಕೋನ ತಪ್ಪು ಎಂದು ಸಾಬೀತಾಯಿತು.. ಸಿನಿಮಾ ನೋಡಿದ ಅನೇಕರು ಅದರ ಪ್ರಭಾವಕ್ಕೊಳಗಾಗಿ ಕೃಷಿಗೆ ಆದ್ಯತೆ ಕೊಟ್ಟು ನಗರ ಬಿಟ್ಟು ಹಳ್ಳಿಗೆ ಮರಳಿದರು … ಆ ಸಿನಿಮಾದ ಅ೦ತಿಮ ದೃಶ್ಯವನ್ನು ನೋಡಿದರೆ ಎಂಥವರ ಹೃದಯ ಕೂಡ ಕರಗಿ ನೀರಾಗುವುದು ..ಅವರು ಚಪ್ಪಲಿಯನ್ನು ಬಿಟ್ಟು ಹೋಗುವ ದೃಶ್ಯವನ್ನು ನೋಡಿದರೆ ಕಣ್ಣೀರು ಬರುತ್ತದೆ .ಡಾ.ರಾಜ್‌ಕುಮಾರ್
ಅಭಿನಯಕ್ಕೆ ಸಾಟಿಯೇ ಇಲ್ಲ .ಆಗದು ಎಂದು ಎಂಬ ಹಾಡು ಸೋಮಾರಿಗಳಿಗೆ ಒಂದು ಪಾಠ ಕಲಿಸುತ್ತದೆ .ಹನಿ ಹನಿಗೂಡಿದರೆ ಹಳ್ಳ ಎಂಬ ಸಾಮೂಹಿಕ ಗೀತೆ ..ಹಳ್ಳಿಯ ಬದುಕನ್ನು ಸುಂದರವಾಗಿ ಸೆರೆ ಹಿಡಿಯುತ್ತದೆ . ರಾಜಕುಮಾರ್ ಮತ್ತು ಭಾರತಿ ಅವರ ಜೋಡಿ ಅಂದಿನ ಕಾಲಕ್ಕೆ ಸೂಪರ್ ಜೋಡಿಯಾಗಿತ್ತು .
ಡಾ.ರಾಜ್ ಕುಮಾರ ಅವರನ್ನು ಅದೇ ಅಭಿಮಾನಿಗಳು ಅದೇ ಅಭಿಮಾನದಿಂದ ಅಂದರೆ” ಬಂಗಾರದ ಮನುಷ್ಯ” ಎಂದು ಕರೆಯವ೦ತಾಯಿತು..💐🙏
Be the first to comment