ತರಕಾರಿ ಮಾರಿ ಉಪಕಾರಿಯಾದ ಪ್ರಥಮ್!

‘ಬಿಗ್ ಬಾಸ್’ ದಿನಗಳಿಂದಲೇ ದೊಡ್ಡ ಮಟ್ಟಕ್ಕೆ ಸುದ್ದಿ ಮಾಡಿದ್ದ ಪ್ರಥಮ್ ಇದೀಗ ತಮ್ಮ ಕೆಲಸ ಕಾರ್ಯಗಳ ಮೂಲಕ ಜನ ಮೆಚ್ಚುಗೆ ಗಳಿಸುತ್ತಿದ್ದಾರೆ. ಅದಕ್ಕೊಂದು ದೊಡ್ಡ ಉದಾಹರಣೆ ಕಳೆದ ಕೆಲಸವು ದಿನಗಳಿಂದ ತುಮಕೂರಿನ ಜನತೆಗೆ ಅಗ್ಗದ ದರದಲ್ಲಿ ತರಕಾರಿಗಳನ್ನು ಮನೆ ಮನೆಗೆ ತಲುಪಿಸುತ್ತಿರುವ ರೀತಿ.

ಪೂರ್ತಿ ದೇಶವೇ ಲಾಕ್ಡೌನ್ ಆಗಿರುವಾಗ ನಮ್ಮ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ಸಂಕಷ್ಟದಲ್ಲಿದೆ. ಕರ್ಫ್ಯೂ ಇರುವುದರಿಂದ ಜನರು ದಿನ ನಿತ್ಯದ ಅಗತ್ಯ ವಸ್ತುಗಳಿಗಾಗಿ ಮನೆಯಿಂದ ಹೊರ ಬರುವುದಕ್ಕೂ ಭಯ ಪಡುತ್ತಿದ್ದಾರೆ. ಕೆಲವರು ಆಹಾರ ಹಂಚುತ್ತಿದ್ದರೂ ಅದು ಎಲ್ಲರ ಕೈಗೆ ಸೇರುತ್ತಿಲ್ಲ. ತರಕಾರಿ ಪದಾರ್ಥಗಳನ್ನಂತೂ ದುಪ್ಪಟ್ಟು ಬೆಲೆಗೆ ಮಾರುವವರು ಕಾಣಿಸುತ್ತಿದ್ದಾರೆ. ಇದರ ನಡುವೆ ಮಾರುಕಟ್ಟೆಗಿಂತಲೂ ಅಗ್ಗದ ಬೆಲೆಯಲ್ಲಿ ಮನೆ ಮನೆಗೆ ತರಕಾರಿ ತಲುಪಿಸುವ ಪ್ರಥಮ್ ಪ್ರಯತ್ನಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಥಮ್ ಅವರ ನಿರೀಕ್ಷೆಯ ಚಿತ್ರಗಳಲ್ಲಿ ‘ನಟ ಭಯಂಕರ’. ಅದರ ನಿರ್ಮಾಪಕ ನೀಲೇಶ್ ಅವರು ಚಿತ್ರತಂಡದ ಮೂಲಕ ಹೀಗೊಂದು ಸಮಾಜ ಸೇವೆಗೈಯ್ಯುವ ಯೋಜನೆಯನ್ನು ಪ್ರಥಮ್ ಜತೆಗೆ ಹಂಚಿಕೊಂಡಿದ್ದೇ ತಡ, ಪ್ರಥಮ್ ಕೊಳ್ಳೇಗಾಲದಿಂದ ನೇರ ಬೆಂಗಳೂರಿಗೆ ಬಂದಿದ್ದಾರೆ. ಕಳೆದ ನಾಲ್ಕುದಿನಗಳಿಂದ ತುಮಕೂರಿನ ಜನಗಳಿಗೆ ತರಕಾರಿ ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ‘ಅಗತ್ಯ ಸೇವೆಗಳಲ್ಲಿ ನಿರತರು’ ವಿಭಾಗದಲ್ಲಿ ಜಿಲ್ಲಾಡಳಿತದಿಂದ ಪರವಾನಗಿ ಪಡೆದುಕೊಂಡಿದ್ದಾರೆ. ಹತ್ತರಿಂದ ಹನ್ನೆರಡರಷ್ಟು ವಾಹನಗಳ ಮೂಲಕ ತರಕಾರಿ ಸರಬರಾಜು ಮಾಡಲಾಗುತ್ತಿದೆ. ಖುದ್ದಾಗಿ ಸಹ ನಿಂತುಕೊಂಡು ಮನೆಮನೆಗೂ ತಲುಪಿಸುತ್ತಿದ್ದಾರೆ. ಪ್ರಥಮ್ ಅವರ ಈ ಪ್ರಯತ್ನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!