‘ಅಂತ್ಯವಲ್ಲ, ಆರಂಭ’ ಬಿಡುಗಡೆಗೆ ದಿನಗಣನೆ ಆರಂಭ

ಅಂತ್ಯವೆಂಬುದು ಇಲ್ಲ,ಅಂತ್ಯವೆಂಬುದು ಇನ್ನೊಂದರ ಆರಂಭ.ಕೊನೆಯೆಂಬುದು ಕೊನೆ ಇಲ್ಲದುದರ ಆರಂಭ. ಇದೇ ಅರ್ಥವನ್ನು ನೀಡುವಂತಹ ಚಿತ್ರದಲ್ಲಿ ಸಂಚಾರಿ ವಿಜಯ್ ಶ್ರುತಿ ಹರಿಹರನ್ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪರಿವರ್ತನ ಟ್ರಸ್ಟ್ ನ ನಾಡಹಳ್ಳಿ ಶ್ರೀಪಾದರಾವ್  ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು, ಮತ್ತೋರ್ವ ನಿರ್ದೇಶಕರಾಗಿರುವ ಎನ್. ಬಿ.ಜಯಪ್ರಕಾಶ್ ಯಕ್ಷಗಾನ ಪಾತ್ರಧಾರಿಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದಲ್ಲಿ ಸಂಚಾರಿ ವಿಜಯ್ ಶ್ರೀಮಂತಿಕೆಯಿದ್ದರೂ ಜಿಪುಣನಾಗಿ ವರ್ತಿಸುವ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಪತ್ನಿಯಾಗಿ ಶ್ರುತಿ ಹರಿಹರನ್ ನಟಿಸಿದ್ದಾರೆ. ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಅವರ ಮೊಮ್ಮಗ ವೆಂಕಟರಾಜು , ಶಿಶಿರ್, ಹರ್ಷ, ನಚಿಕೇತನ್, ದೀಪಕ್ ಮತ್ತು ಮಂಗಳೂರು ರಂಗಭೂಮಿಯ ಹಿನ್ನೆಲೆಯಿಂದ ಬಂದ ಒಂದಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ. ಚಿತ್ರದ ಎಂಬತ್ತರಷ್ಟು ಭಾಗ ಸಾಗರ ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಸಿನಿಮಾದ ಹಾಡು ಮತ್ತು ಸಂಭಾಷಣೆಗಳನ್ನು ವಸುಮತಿ ಉಡುಪ ರಚಿಸಿದ್ದಾರೆ. ಸುಹಾಸ್ ಅವರ ಸಂಗೀತ, ಸುರೇಶ್ ಅರಸು ಅವರ ಸಂಕಲನ , ನಾಗೇಶ್ ಆಚಾರ್ಯ ಮತ್ತು ಮಲ್ಲಿಕಾರ್ಜುನಅವರ ಛಾಯಾಗ್ರಹಣ ಚಿತ್ರಕ್ಕಿದೆ. ಟಿ.ಕೆ.ಜಯರಾಂ ಅವರ ಕತೆಯನ್ನು ಆಧರಿಸಿದ  ಈ ಚಿತ್ರದ ಹಾಡುಗಳಿಗೆ ಮದನ್ ಮತ್ತು ಹರಿಣಿಯವರು ನೃತ್ಯ ಸಂಯೋಜಿಸಿದ್ದಾರೆ. ಒಳ್ಳೆಯ ದಂಪತಿಗಳಾದರೂ ಪರಸ್ಪರ ಪ್ರೀತಿ ಪ್ರೇಮ ಆಕರ್ಷಣೆ ಇಲ್ಲದಿರುವುದಿಲ್ಲ. ಇಬ್ಬರಿಗೂ ಸಮಸ್ಯೆ ಗಳು ಎದುರಾಗುತ್ತದೆ. ಗಂಭೀರ ವಾದ ಸಮಸ್ಯೆಯೊಂದು ದಂಪತಿಯನ್ನು ಕಾಡುತ್ತದೆ. ಕಲ್ಪನೆಗಳಿಗೆ ಕೊನೆಯಿರುವುದಿಲ್ಲ. ಇವೆಲ್ಲದಕ್ಕೆ ಆತ್ಮಹತ್ಯೆ ಉತ್ತರವಲ್ಲ. ಹಾಗಾಗಿ ಒಂದು ಹೊಸ ಜೀವನದ ಆರಂಭ ಆಗಬೇಕಿರುತ್ತದೆ. ಅದುವೇ ಚಿತ್ರದ ಮುಖ್ಯ ಎಳೆ.
ಈಗಾಗಲೇ 1500 ಎಪಿಸೋಡ್ ಗಳಷ್ಟು ಧಾರಾವಾಹಿ ಕಂತುಗಳನ್ನು ಕಿರುತೆರೆಗೆ ನೀಡಿರುವ ಗಣೇಶ್ ಕುಮಾರ್ ಈ ಚಿತ್ರದ ನಿರ್ಮಾಪಕರು. ಲಯನ್ಸ್ ಕ್ಲಬ್ ಮತ್ತು ಟೆಕ್ಕಿ ಸಂಸ್ಥೆಗಳು ಚಿತ್ರ ಬಿಡುಗಡೆಯ ವೇಳೆ ಸಹಾಯ ಹಸ್ತ ಚಾಚಿವೆ. ಈಗಾಗಲೇ 5 ಶೋಗಳ ಟಿಕೆಟ್ ಗಳು ಬುಕ್ಕಿಂಗ್ ಆಗಿವೆ. ಪ್ರಚಾರದ ಪ್ರಥಮ ಹಂತವಾಗಿ ಆಡಿಯೋ ಸಿಡಿ ಬಿಡುಗಡೆಗೊಳಿಸಲಾಗಿದೆ. ಸಮಾರಂಭದಲ್ಲಿ ಇಬ್ಬರು ದೇವದಾಸಿಯರನ್ನು ಸನ್ಮಾನಿಸಲಾಯಿತು. ಶಿವಣ್ಣ ಗೌಡ ಎಸ್ , ನಾಗನ ಗೌಡರ್ ಮತ್ತು ಉಮೇಶ್ ಎಂ. ಶಿರಹಟ್ಟಿ ಚಿತ್ರದ ಸಹನಿರ್ಮಾಪಕರು.
This Article Has 1 Comment
  1. Pingback: คาสิโน

Leave a Reply

Your email address will not be published. Required fields are marked *

Translate »
error: Content is protected !!