ಸಂಗೀತದ ಮೂಲಕ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಕೆಪಿ ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಗೋದ್ರಾ ಚಿತ್ರಕ್ಕೆ ಕೆಪಿ ಅವರು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ವಿಚಾರವನ್ನು ಚಿತ್ರದ ನಿರ್ದೇಶಕ ನಂದೀಶ್ ಖಚಿತಪಡಿಸಿದ್ದಾರೆ.
ಕೆಪಿ ಅವರು ಈಗಾಗಲೇ ಹಿನ್ನೆಲೆ ಹಿನ್ನೆಲೆ ಸಂಗೀತ ಸಂಯೋಜನೆ ಹಾಗೂ ರೀರೆಕಾರ್ಡಿಂಗ್ ಆರಂಭಿಸಿದ್ದಾರೆ. ವಿಶೇಷವೇನೆಂದರೆ ಕೆಪಿ ಅವರು ಗೋದ್ರಾ ಚಿತ್ರದ ನಾಲ್ಕನೇ ಸಂಗೀತ ನಿರ್ದೇಶಕರಾಗಿದ್ದಾರೆ. ಜುಧಾ ಸ್ಯಾಂಡಿ, ನವೀನ್ ಸಜ್ಜು ಟೋನಿ ಜೋಸೆಫ್ ಚಿತ್ರದ ಹಾಡುಗಳಿಗೆ ಸಂಗೀತವನ್ನು ಸಂಯೋಜಿಸುತ್ತಿರುವ ಇತರೆ ಮೂವರು ಸಂಗೀತ ನಿರ್ದೇಶಕರು. ಕೆಪಿ ಅವರು ಹಿನ್ನಲೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಗೋದ್ರ ಚಿತ್ರವು ಪೊಲಿಟಿಕಲ್ ತ್ರಿಲ್ಲರ್ ಆಗಿದ್ದೂ, ವಾಸ್ತವಕ್ಕೆ ಹತ್ತಿರವಾಗಿದೆ. ಸರ್ಕಾರ್ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ ಅವರು ಸಂಯೋಜನೆ ಮಾಡಿಸಿದ್ದ ರೀತಿಯಲ್ಲಿ ಗೋದ್ರಾ ಚಿತ್ರಕ್ಕೂ ಹಿನ್ನೆಲೆ ಸಂಗೀತವಿರಬೇಕೆಂಬುದು ನಿರ್ದೇಶಕರ ಆಶಯ. ಕೆಪಿ ಅವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ತುಂಬಾ ಬ್ಯುಸಿ ಸಂಗೀತ ನಿರ್ದೇಶಕರಾಗಿದ್ದಾರೆ. ಹಿನ್ನೆಲೆ ಸಂಯೋಜನೆ ಮಾಡುವುದಕ್ಕೆ ಒಪ್ಪಿಗೆ ನೀಡುವ ಮುನ್ನ ಕೆಪಿ ಅವರು ಗೋದ್ರಾ ಚಿತ್ರವನ್ನು ಒಮ್ಮೆ ವೀಕ್ಷಣೆ ಮಾಡಿದರು.
ಚಿತ್ರದಲ್ಲಿ ಬರುವ ದೃಶ್ಯ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಸಂಗೀತ ಸಂಯೋಜಿಸಬೇಕು ಎಂಬುದು ಚಿತ್ರ ನಿರ್ದೇಶಕರ ಉದ್ದೇಶವಾಗಿದ್ದು. ಈ ವಿಚಾರದಲ್ಲಿ ವಿಶೇಷ ಕಾಳಜಿಯನ್ನು ವಹಿಸಲಾಗಿದೆ. ಜುಧಾ ಸ್ಯಾಂಡಿ ಅವರು ರೋಮ್ಯಾಂಟಿಕ್ ಮೆಲೋಡಿ ಹಾಡುಗಳಿಗೆ ಹೆಸರುವಾಸಿ. ಅವರು ಎರಡು ಹಾಡು ಸಂಯೋಜಿಸಿದ್ದರೆ, ನವೀನ್ ಸಜ್ಜು ಒಂದು ಹಾಡು ಸಂಯೋಜಿಸಿದ್ದಾರೆ. ಟೋನಿ ಜೋಸೆಫ್ ಅವರಿಗೆ ಇದು ಚೊಚ್ಚಲ ಚಿತ್ರವಾಗಿದೆ. ತುಂಬಾ
ಪ್ರಯೋಗಾತ್ಮಕವಾಗಿ ಚಿತ್ರದ ಎರಡು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.
ಕೆ.ಪಿ ತಮಿಳು ಚಿತ್ರರಂಗದಲ್ಲಿ ಪ್ರಖ್ಯಾತ ಕೀಬೋರ್ಡ್ ಪ್ರೋಗ್ರಾಮರ್ ಆಗಿದ್ದರು. ಎಲ್ಲಾ ಪ್ರಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಕೆಪಿ ಕೆಲಸ ಮಾಡಿದ್ದಾರೆ. ಬೋಧಯ್ ಎರಿ ಭೂದಿ ಮಾರಿ ಚಿತ್ರದಿಂದ ಸಂಗೀತ ನಿರ್ದೇಶಕರಾದರು.
ಗೋದ್ರಾ ಚಿತ್ರದಲ್ಲಿ ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್ ವಸಿಷ್ಟ ಸಿಂಹ, ಅಚ್ಯುತ್ ಕುಮಾರ್ ನಟಿಸಿದ್ದಾರೆ. ಜೇಕಬ್ ವರ್ಗೀಸ್ ಅವರ ಬಳಿ ಸುಮಾರು 10 ವರ್ಷ ಕಾಲ ನಂದೀಶ್ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನ. ಲೀಡರ್ ಫಿಲ್ಮ್ ಪ್ರೊಡ್ಯೂಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ ಗೋದ್ರಾ ಚಿತ್ರ ನಿರ್ಮಾಣವಾಗಿದೆ.
Pingback: Triad Tree Removal Tree Service Clayton NC