‘ನರಗುಂದ ಬಂಡಾಯ’ ನಾಳೇ ತೆರೆಗೆ

ಎಂಬತ್ತರ ದಶಕದಲ್ಲಿ ಉತ್ತರ ಕರ್ನಾಟಕದ ನರಗುಂದಲ್ಲಿ‌ ನಡೆದ ರೈತರ ಹೋರಾಟ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದ ರಕ್ಷಿತ್ ಚಿತ್ರದ ಮೂಲಕ ಸಿನಿಮಾ ನಾಯಕರಾಗುತ್ತಿದ್ದಾರೆ. ಹಾಗಾಗಿ ಇಬ್ಬಿಬ್ಬರು ರಕ್ಷಿತ್ ಇರುವುದು ಬೇಡ ಎನ್ನುವ ಕಾರಣದಿಂದ ತಮ್ಮ ಹೆಸರನ್ನು ರಕ್ಷ್ ಎಂದು ಬದಲಾಯಿಸಿಕೊಂಡಿದ್ದಾರೆ. ಆದರೆ ಸಿನಿಮಾದಲ್ಲಿ ಸಾಕಷ್ಟು ಅವಕಾಶಗಳು ಬಂದಿದ್ದರೂ, ಅವೆಲ್ಲ ಸಾಮಾನ್ಯ ಲವ್ ಸ್ಟೋರಿಗಳಾಗಿದ್ದವು. ಆದರೆ ಪ್ರಥಮ ಚಿತ್ರ ವಿಭಿನ್ನವಾಗಿರಲಿ ಎಂದು ಕಾಯುತ್ತಿದ್ದೆ. ‘ನರಗುಂದ ಬಂಡಾಯ’ಅಂಥದೊಂದು ಅವಕಾಶವನ್ನು ನೀಡಿದೆ ಎಂದರು. ರೈತರ ಚಿತ್ರ ಅಥವಾ ಬಯೋಪಿಕ್ ಎನ್ನುವ ಕಾರಣ ನೀಡಿ ಸಾಮಾನ್ಯ ಪ್ರೇಕ್ಷಕರಿಗೆ ಇಷ್ಟವಾಗಲ್ಲ ಎನ್ನಲಾಗದು. ಯಾಕೆಂದರೆ ಇದು ರೈತರ ಹೋರಾಟದ ಕತೆಯಲ್ಲ. ಇತಿಹಾಸದಲ್ಲಿ‌ ನಡೆದಿರುವ ಘಟನೆ. ಐದಾರು ಹೊಡೆದಾಟಗಳು, ಹಾಡುಗಳು ಮೊದಲಾದ ಕಮರ್ಷಿಯಲ್ ಅಂಶ ಇರುವಂಥ ಸಿನಿಮಾ ಎನ್ನುವುದು ರಕ್ಷ್ ಅನಿಸಿಕೆಯಾಗಿತ್ತು.

ಚಿತ್ರದ ನಾಯಕಿ ಶುಭ ಪೂಂಜಾ ಅವರು, “ಈಗಾಗಲೇ ನಾವು ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡಿಕೊಂಡು ಬಂದಿದ್ದೇವೆ. ಕರೋನ ವೈರಸ್ ಬಗ್ಗೆ ಜನರಲ್ಲಿ ಆತಂಕವಿದ್ದರೂ, ನಮ್ಮ ಸಿನಿಮಾಗೆ ಜನ ಬಂದೇ ಬರುತ್ತಾರೆ ಎನ್ನುವ ನಂಬಿಕೆ ನನಗಿದೆ” ಎಂದು ಭರವಸೆ ವ್ಯಕ್ತಪಡಿಸಿದರು.

ನಟ ರವಿಚೇತನ್ ಮಾತನಾಡಿ,
“ಇದು ಉತ್ತರ ಕರ್ನಾಟಕದಲ್ಲಿ ನಡೆದಂಥ ರಾಜ್ಯ, ದೇಶದ ಗಮನ ಸೆಳೆದ ಕ್ರಾಂತಿಯ ಕತೆ. ನಾನು ಕೂಡ ಉತ್ತರ ಕರ್ನಾಟಕದವನೇ. ಐತಿಹಾಸಿಕ ಚಿತ್ರಗಳು ಅಪರೂಪವಾಗಿ ಬರುವಂಥವು. ಇಂಥ ಚಿತ್ರದಲ್ಲಿ ನನಗೆ ಒಂದು ಪಾತ್ರ ದೊರಕಿರುವುದಕ್ಕೆ ಖುಷಿಯಿದೆ. ರೈತರ ಹೋರಾಟದ ಕತೆಯನ್ನು ಹೇಳುವ ಸಿನಿಮಾ ಆದರೂ ಸಿನಿಮಾಗಳಲ್ಲಿ ಬರುವಂಥ ಕಮರ್ಷಿಯಲ್ ಗುಣಮಟ್ಟವನ್ನು ಹೊಂದಿರುವಂಥ ಸಿನಿಮಾ ಇದು” ಎಂದು ಭರವಸೆ ವ್ಯಕ್ತಪಡಿಸಿದರು.

ಚಿತ್ರವನ್ನು ಹ್ಯಾಟ್ರಿಕ್ ನಿರ್ದೇಶಕ ನಾಗೇಂದ್ರ ಮಾಗಡಿ ನಿರ್ದೇಶಿಸಿದ್ದಾರೆ. ಅವರು ತಾವು ನರಗುಂದ ಬಂಡಾಯ ನಡೆದಾಗ ಮೂರನೇ ಕ್ಲಾಸ್ ವಿದ್ಯಾರ್ಥಿಯಾಗಿದ್ದನ್ನು ಸ್ಮರಿಸಿಕೊಂಡರು. ತಾವು ಕಂಡು ಕೇಳಿ ಬೆಳೆದ ಕ್ರಾಂತಿಯ ಹೋರಾಟಕ್ಕೆ ಚಿತ್ರದ ಮೂಲಕ ನ್ಯಾಯ ಒದಗಿಸುವ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು. ಚಿತ್ರಕ್ಕಾಗಿ ಎಲ್ಲರೂ ಜೀವದ ಹಂಗು ತೊರೆದು ನಟಿಸಿದ್ದೇವೆ.
ನಾಯಕ ರಕ್ಷ್ ಕುದುರೆಯಿಂದ ಬಿದ್ದು ಏಟು ಮಾಡಿಕೊಂಡರೂ ಶೂಟಿಂಗ್ ಮುಂದುವರಿಸಿದ್ದಾರೆ. ಚಿತ್ರದಲ್ಲಿ ಪಾಲ್ಗೊಳ್ಳಲೇಬೇಕು ಎನ್ನುವ ಕರೆಗೆ ಮನ್ನಿಸಿ ಕುರುಕ್ಷೇತ್ರದ ಹೈದರಾಬಾದ್
ಸೆಟ್ ನಿಂದ ಖುದ್ದಾಗಿ ರಾತ್ರಿಯಿಡೀ ಡ್ರೈವ್ ಮಾಡಿಕೊಂಡು ಬಂದಂಥ ನಟ ರವಿಚೇತನ್ ಅವರು ತೆಗೆದುಕೊಂಡ ರಿಸ್ಕ್ ಮೆಚ್ಚಲೇಬೇಕು. ನಾಯಕಿ ಶುಭಾಪೂಂಜಾ ಅವರು ಕೂಡ ಕಾಲಿಗೆ ಏಟು ಮಾಡಿಕೊಂಡರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ನಾನು ಕೂಡ ಒಂದು ಪಾತ್ರ ಮಾಡಿ ಮಾಡಿಕೊಂಡಿರುವ ಏಟಿನಿಂದಾಗಿ ಇಂದಿಗೂ ಓಡಲು ಅಸಾಧ್ಯವೆನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಹೇಳುತ್ತಾ, ಸಿನಿಮಾದಲ್ಲಿ ಯಾವ ಮಟ್ಟಕ್ಕೆ ತೊಡಗಿಸಿಕೊಂಡಿದ್ದೇವೆ ಎನ್ನುವುದನ್ನು ವಿವರಿಸಿದರು.

ಓಂಕಾರ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿಯೇ ತೆರೆಗೆ ತರಲು ಸಿದ್ದವಾಗಿರುವುದಾಗಿ ನಿರ್ಮಾಪಕ ಎಸ್ ಜಿ ಸಿದ್ದೇಶ್ ಹೇಳಿದ್ದಾರೆ.

ಚಿತ್ರದಲ್ಲಿ ಸಾಧು ಕೋಕಿಲ, ಅವಿನಾಶ್, ಭವ್ಯಾ, ಸಂಗೀತಾ, ನೀನಾಸಂ ಅಶ್ವಥ್, ಶಿವಕುಮಾರ್, ಸುರೇಶ ರಾಜ್ ಮೊದಲಾದವರು ನಟಿಸಿದ್ದಾರೆ.
ಚಿತ್ರಕ್ಕೆ ಸಂಭಾಷಣೆಯನ್ನು ಕೇಶವಾದಿತ್ಯ ಬರೆದಿದ್ದು, ಗೀತರಚನೆಯಲ್ಲಿ ಅವರೊಂದಿಗೆ ಕೆ.ರಾಮ್ ನಾರಾಯಣ ಕೈ ಜೋಡಿಸಿದ್ದಾರೆ.
ಕೌರವ ವೆಂಕಟೇಶ ಮತ್ತು ವಿನೋದ್ ಅವರ ಸಾಹಸ ಹಾಗೂ ಯಶೋವರ್ಧನ್ ಸಂಗೀತ ಚಿತ್ರಕ್ಕಿದೆ. ಧರ್ಮ ವಿಷ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.

This Article Has 1 Comment
  1. Pingback: buy sig sauer firearms online

Leave a Reply

Your email address will not be published. Required fields are marked *

Translate »
error: Content is protected !!