ಇದೇ 13ಕ್ಕೆ ತೆರೆಗೆ ‘5ಅಡಿ 7ಅಂಗುಲ’

‘5 ಅಡಿ 7 ಅಂಗುಲ’ ಚಿತ್ರವುತಂತ್ರ‍್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ.ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು, ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅAತರವೇಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ 5.2 ಅಡಿಯಿಂದ 6.3ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿ ತೆಗೆದುಕೊಂಡಾಗ  ಟೈಟಲ್‌  ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆ ಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವ  ಉದ್ಯಮಿಯನ್ನು ಒಳಗೊಂಡ ಕೊಲೆ ರಹಸ್ಯವಾಗಿರುತ್ತದೆ. ಮುಂದೆ  ಇದು ದೊಡ್ಡ ತಿರುವನ್ನು ಪಡೆದು ನಂಬಲಾಗದ ಘಟನೆಗೆ ಸಾಕ್ಷಿಯಾಗುತ್ತದೆ.ಕೊನೆಗೆ ಆತನೇ ಅದರಲ್ಲಿ ಸಿಲುಕಿಕೊಂಡು ಪೋಲೀಸರಿಗೆ  ಅಪರಾಧಿಯನ್ನು ಹುಡುಕುವ ಸಂಕಷ್ಟ ಎದುರಾಗುತ್ತದೆ.ಆತನನ್ನು ಹುಡುಕುವುದು ಸಾಧ್ಯವೆ?ಅಥವಾ ಅಸಾಧ್ಯವೆಎಂಬುದು  ಸೆಸ್ಪನ್ಸ್, ಥ್ರಿಲ್ಲರ್‌  ಕತೆಯ ಸಾರಾಂಶವಾಗಿದೆ.ಮತ್ತೋಂದು ಮುಖ್ಯ ಪಾತ್ರದಲ್ಲಿ ಕಾಗೆ ಕಾಣಿಸಿಕೊಂಡಿರುವುದು ವಿಶೇಷ.

ಹುಡುಗಾಟದ ಉದ್ಯಮಿಯಾಗಿ ರಾಸಿಕ್‌  ಕುಮಾರ್ ನಾಯಕ.ಅದಿತಿ ನಾಯಕಿ. ಗೆಳಯನಾಗಿ ಭುವನ್‌ ನಾರಾಯಣ್‌ ಇವರೊಂದಿಗೆ ಸತ್ಯನಾಥ್, ಪ್ರಣವಮೂರ್ತಿ, ಚಕ್ರವರ್ತಿ ದಾವಣಗೆರೆ, ಮಹದೇವ, ಮಾ.ಮಹೇಂದ್ರಪ್ರಸಾದ್, ಕೃಷ್ಣಮೂರ್ತಿ.ವಿ, ನರೇಂದ್ರ‍್ರ, ವಿನಯ್‌ಕುಮಾರ್ ಮುಂತಾದವರು ನಟಿಸಿದ್ದಾರೆ. ನಂದಳಿಕೆ ನಿತ್ಯಾನಂದಪ್ರಭುಚಿತ್ರಕ್ಕೆರಚನೆ, ನಿರ್ಮಾಣ, ನಿರ್ದೇಶನಹಾಗೂ ಕೋಮಿಯೋ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿ.ವಿ.ಗೋಪಾಲ್ ಮತ್ತುಕಾರ್ತಿಕ್‌ಗುಬ್ಬಿ ಸಾಹಿತ್ಯದ ಮೂರು ಹಾಡುಗಳಿಗೆ ರಘುಠಾಣೆ ಸಂಗೀತವಿದೆ.ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹಿನ್ನಲೆ ಶಬ್ದ ಆರ್.ಎಸ್.ಗಣೇಶ್‌ನಾರಯಣ್ ನಿರ್ವಹಿಸಿರುತ್ತಾರೆ.

ಬೆಂಗಳೂರು, ನೆಲಮಂಗಲ, ತಡಿಯಾಂಡಮೋಲ್, ಸುಂಟಿಕೊಪ್ಪ ಮತ್ತು ಮಡಕೇರಿಯಲ್ಲಿಚಿತ್ರೀಕರಣ ನಡೆದಿದೆ.ಮಗನ ಚಿತ್ರಕ್ಕೆ ಸಹ ನಿರ್ಮಾಪಕರಾಗಿರುವುದು ನಂದಳಿಕೆ ಚಂದ್ರಶೇಖರ್‌ಪ್ರಭು.ಬಿಯಾನ್‌ಡ್ರೀಮ್ಸ್ಕ್ರಿಯೇಶನ್ಸ್ ಮೂಲಕ ಸಿದ್ದಗೊಂಡಿರುವ ೧.೫೩ ನಿಮಿಷದಚಿತ್ರವುಇದೇ ಶುಕ್ರವಾರದಂದು ಶುಕ್ರ ಫಿಲಿಂಸ್ ಮುಖಾಂತರ ಬಿಡುಗಡೆಯಾಗುತ್ತಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!