ಆಕ್ಟರ್‌ ಆದ ಆರ್ಕಿಟೆಕ್ಟ್

ಬಣ್ಣದ ಲೋಕ ಎಂಥವರನ್ನು ಸೆಳೆಯುತ್ತದೆ.ಅದು ಯಾರೇ ಆಗಿರಲಿ ಒಮ್ಮೆ ಅದರೊಳಗೆ ಹೊಕ್ಕರೆ ಹೊರಗೆ ಬರುವುದು ಕಷ್ಟವಾಗುತ್ತದೆ.ಇದನ್ನು ಹೇಳಲು ಪೀಠಿಕೆ ಇದೆ. ಹಾಸನ ಮೂಲದ ನಾಗರಾಜ್.ವೈ.ಎಸ್‌ ಆರ್ಕಿಟೆಕ್ಟ್ದಲ್ಲಿ ಪದವಿ ಪಡೆದು, ಮುಂದೆ ಸಿಡ್ನಿಗೆ ಪ್ರಯಾಣ ಬೆಳಸಿ ಅಲ್ಲಿ ಎರಡು ಮಾಸ್ಟರ್‌ ಡಿಗ್ರಿ ಮುಗಿಸಿ, ಒಂದು ವರ್ಷ ಉದ್ಯೋಗ ನಿರ್ವಹಿಸಿ, ಭಾರತಕ್ಕೆ ಮರಳಿದ್ದಾರೆ. ಸದ್ಯ ಎಸ್.ಜೆ.ಬಿ ಸ್ಕೂಲ್‌ ಆಫ್‌ ಆರ್ಟಿಟೆಕ್ಟ್ದಲ್ಲಿ ಪ್ರಾಧ್ಯಾಪಕ, ಓಡೆಸ್ಸಿ ಕಚೇರಿ ತೆರೆದು ಆರ್ಕಿಟೆಕ್ಟ್ ಪ್ರಾಕ್ಟಿಸ್ ಮಾಡುತ್ತಿದ್ದಾರೆ.

ಕಾಲೇಜು ದಿನಗಳಲ್ಲೆ ಪರಿಚಯವಾದ ನಟಿ ನಿವೇದಿತಾರೊಂದಿಗೆ ಬಾಳ್ವೆ ನಡೆಸುತ್ತಿದ್ದಾರೆ. ಇಬ್ಬರಿಗೂ ಮದುವೆ ಬಗ್ಗೆ ನಂಬಿಕೆ ಇಲ್ಲದೆ, ಅದರ ಬಗ್ಗೆ ಚಿಂತನೆ ನಡೆಸದೆ,ಆರು ವರ್ಷದಿಂದ ಒಟ್ಟಿಗೆ ಇದ್ದಾರೆ. ಕೆಲವೊಮ್ಮೆ ಅವರೊಂದಿಗೆ ಚಿತ್ರೀಕರಣಕ್ಕೆ  ಹೋಗಿದ್ದು ಉಂಟು.  ಹಾಗೆ ಸುಮ್ಮನೆ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರದ ಸೆಟ್ ಹೋದ ಸಂದರ್ಭದಲ್ಲಿ ನಟನೆ ಮಾಡಿತ್ತಿದ್ದ ನಿವೇದಿತಾ ಇವರ ಪೋಟೋ ನೀಡಿದ್ದಾರೆ. ನಿರ್ದೇಶಕ ಸೂರಿ ಇವರಿಗೆ ಅಂತಲೇ ಸೀಮಿತವಾಗಿ ಗ್ಯಾಂಗ್‌ಸ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿಸಿದ್ದಾರೆ.

ಹನ್ನೆರೆಡು ನಿಮಿಷ ಕಾಣಿಸಿಕೊಂಡಿರುವುದರಿಂದ ಸಹದ್ಯೋಗಿಗಳು ಸೋಜಿಗ ವ್ಯಕ್ತಪಡಿಸಿರುವುದು ಖುಷಿ ತಂದಿದೆಯಂತೆ. ಮುಂದೆ ಅವಕಾಶಗಳು ಬಂದಲ್ಲಿ ನಟಿಸಲು ಕಷ್ಟವೇನು ಆಗುವುದಿಲ್ಲ. ಹಾಗಂತ ವೃತ್ತಿಯನ್ನುತೊರೆಯಲಾರೆ.ಹೇಗಿದ್ದರೂ  ಅದಕ್ಕೆಅಂತಲೇ ಸಮಯಯಾವಾಗ ಬೇಕಾದರೂ ಸಿಗುತ್ತದೆ. ಮರ‍್ಲನ್‌ಬ್ರಾಂಡ್‌ ಇಷ್ಟದ ನಟ.ಕನ್ನಡದಲ್ಲಿ  ಡಾ.ರಾಜ್ ಪಾತ್ರಗಳು ಮನಸ್ಸಿಗೆ ಹತ್ತಿರವಾಗಿದ್ದು, ಶಂಕರ್‌ನಾಗ್ ನಿರ್ದೇಶನದ ಚಿತ್ರಗಳನ್ನು ಹಲವು ಬಾರಿ ನೋಡಿದ್ದು ಇದೆಯಂತೆ.ಯಾರಾದರೂ ನಟ-ನಟಿಯನ್ನು ನೋಡಿದ್ದೀರಾ ಅಂತ ಕೇಳಿದರೆ, ಎರಡು ಪ್ರಶಸ್ತಿಗಳನ್ನು ಪಡೆದಿರುವ ನಿವೇದಿತಾರನ್ನು ಪ್ರತಿ ದಿನ ಮನೆಯಲ್ಲಿ ನೋಡುತ್ತಿದ್ದೇನೆಂದು ಸಣ್ಣ ನಗು ಚೆಲ್ಲುತ್ತಾರೆ. ರವಿಚಂದ್ರನ್ ಸಿನಿಮಾಗಳನ್ನು ನೋಡುತ್ತಾ ಬೆಳದು, ಹಂಸಲೇಖಾ ಸಂಗೀತಕ್ಕೆ ಮನಸೋತಿದ್ದೇನೆ. ದೈನಂದಿನ ಪರಿಸರದಲ್ಲಿಗೊತ್ತಿದ್ದು,ಗೊತ್ತಲ್ಲದೆ ನಟನೆ ಮಾಡುತ್ತಿರುವುದರಿಂದ, ಅಭಿನಯ  ತರಭೇತಿಗೆ ಹೋಗುವ ಅವಶ್ಯಕತೆಇರುವುದಿಲ್ಲ. ಎಷ್ಟೇ ಬ್ಯುಸಿ ಆದರೂ  ಎರಡನ್ನು ನಿಭಾಯಿಸುವ ಸಾಮರ್ಥ್ಯವಿದೆ.  ಭವಿಷ್ಯದ ನಟನಾದರೆ  ಅಚ್ಚರಿಯೇನು ಆಗುವುದಿಲ್ಲ ಅಂತ ನಾಗರಾಜ್ ಮಾತು ಮುಗಿಸುತ್ತಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!