ರಾಜ ಅಲ್ಲ ಕೋಜ! ಚಿತ್ರ 👇
‘ಕನ್ನಡದ ಮೋಸ್ಟ್ ಕಾಂಟ್ರವರ್ಷಿಯಲ್ ಸಿನಿಮಾ’ ಎಂಬ ಹಣೆಪಟ್ಟಿ ಕಟ್ಟಿಯಾದರೂ ಚಿತ್ರವನ್ನು ಯೂತ್ಸ್ ನೋಡುವಂತೆ ಮಾಡಬೇಕು ಎಂಬ, ರಾಜಾಧಿರಾಜ ಕೊತ್ತಂಬರಿ ಬೀಜ… ನಟಭಯಂಕರ… ರಾಜ್ ಕನಸು ಭಗ್ನವಾಗಿದೆ. ಗಾಂಧಿನಗರದಲ್ಲಿ ಅಬ್ಬರಿಸಿಸುವ ಹುಮ್ಮಸ್ಸಿನ್ನಿಂದ, ಪತ್ರಕರ್ತ ರೊಡನೆ ರೊಳ್ಳೆ ತೆಗೆದು ‘ಮೈ ನೇಮ್ ಈಸ್ ರಾಜ’ ಎಂಬ ಥರ್ಡ್ ರೇಟೆಡ್ ಚಿತ್ರ ಬಿಡುಗಡೆಮಾಡಿರು ರಾಜ್ ಕಲೆಕ್ಷನ್ ನೋಡಿ ಕರೋನಾ ಅಟ್ಯಾಸ್ಕೊಂಡವರಂತೆ ಆಡ್ತಿದ್ದಾರೆ.
ಟೀಸರ್ ಮತ್ತು ಸಾಂಗ್ಸ್ ಗಳಿಂದಲೇ ಸ್ಯಾಂಡಲ್ವುಡ್ನಲ್ಲಿ ವಾಕ್-ಥೂ ಎಂದು ಉಗಿಸಿಕೊಂಡ ಸಿನಿಮಾ ಮೈ ನೇಮ್ ಈಸ್ ರಾಜ. ಸಿನಿಮಾ ರಿಲೀಸ್ಗೂ ಮುಂಚೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕೂತು….”ನನ್ನ ಚಿತ್ರದಲ್ಲೀ ಬರೀ ಸೊಂಟದ ಕೆಳಗಿನ ವಿಷ್ಯ ಮಾತ್ರ ಇರೋದಲ್ಲ, ಇದೊಂದು ಹಾರರ್ ಸಸ್ಪೆನ್ಸ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ.. ಚಿತ್ರ ನೋಡಿದ್ರೆ ನಿಮ್ಗೆ ಅರ್ಥ ಆಗುತ್ತೆ.. ಕನ್ನಡದಲ್ಲಿ ಈ ಸಬ್ಜೆಕ್ಟ್ ಇಲ್ಲಿವರಗೇ ಯಾರೂ ಮುಟ್ಟಿಲ್ಲ..’’ ಅಂತೆಲ್ಲಾ ರಾಜ್ ಮೈ ಪರಚಿಕೊಂಡದ್ದು ವೇಸ್ಟ್ ಆಗಿದೆ.
ಅಮೋಘ್ ಎಂಟರ್ಪ್ರೈಸಸ್ ಲಾಂಛನದ ಅಡಿಯಲ್ಲಿ, ರಾಜ್ ಸೂರ್ಯನ್, ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ನಿರ್ಮಾಣದ ಚಿತ್ರ ಮೈ ನೇಮ್ ಈಸ್ ರಾಜಾ. ಚಿತ್ರದ ಕಲೆಕ್ಷನ್ ನೋಡಿ, ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ರಾಜ್ ಕಿವಿ ಮೇಲೆ ಮುಡಿಸಿದ್ದ ಕಲರ್ಫುಲ್ ಲಾಲ್ಬಾಗ್ ನೆನೆದು ತತ್ತರಿಸಿಹೋಗಿದ್ದಾರೆ. ರಾಜ್ ಸೂರ್ಯನ್ ನಾಯಕನಾಗಿ ಮೂರು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಕೇವಲ ಬಟ್ಟೆ ಬರೆ ಮಾತ್ರ ಬದಲಾಗುತ್ತೆ.. ರಾಜ್ ಸೇಮ್ ಟು ಸೇಮ್ ಅವನೇ!
ಆಕರ್ಷಿಕ ಮತ್ತು ನಸ್ರೀನ್ ಚಿತ್ರದ ನಾಯಕಿಯರಾ.. ಇಲ್ಲಾ ಬೇರೆನೋ ಅಂತ ಡೌಟ್ ಬರುತ್ತೆ. ಅಷ್ಟರ ಮಟ್ಟಿಗೆ ರಾಜ್ನನ್ನು ಉಜ್ಜಿ ಉಜ್ಜಿ ಸಾಥ್ ಕೊಟ್ಟಿದ್ದಾರೆ. ಚಿತ್ರದ ಕಥೆ ಬಗ್ಗೆ ಹೇಳುವಂತಹ ಇಟ್ರೆಸ್ಟಿಂಗ್ ಅಂಶಗಳು ಏನೂ ಇಲ್ಲ. ಸೋ ಕಥೆಯ ತಂಟೆಗೆ ಹೋಗೋದೆ ಬೇಡ. ಹಾರರ್, ಸಸ್ಪೆನ್ಸ್, ಆಕ್ಷನ್, ರೊಮ್ಯಾನ್ಸ್ ಹೀಗೆ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಗಳನ್ನು ಲೋಡುಗಟ್ಟಲೆ ತುರುಕಿ ಚಿತ್ರವನ್ನು ನೋಡಿದವರು ವಾಂತಿ ಮಾಡುವಂತೆ ಮಾಡಿದ್ದಾರೆ ನಿರ್ದೇಶಕ ಅಶ್ವಿನ್ ಕೃಷ್ಣ. ಈತ ನಿರ್ದೇಶಕ ಅನ್ನಿಕೊಳ್ಳೋಕೆ ಇನ್ನೋಂದ ಐದು ಶತಮಾನಗಳದಾರೂ ಬೆಕಾಗಬಹುದೇನೋ. ಚಿತ್ರದಲ್ಲಿ ಹಸಿಬಿಸಿ ದೃಶ್ಯಗಳು, ಕಿಸ್ಸಿಂಗ್ ದೃಶ್ಯಗಳು ರ್ರಾಂಬರ್ರಿ ಇದ್ದು, ಇದನ್ನು ನೋಡುಗರು ಜಸ್ಟ್ ರೊಮಾನ್ಸ್ ಅಷ್ಟೇ ಎಂದು ಪರಿಗಣಿಸಬೇಕು.
ನೇಪಾಳದ ಸುಂದರಿ ಆಯುಶ್ರೀ ಎಂಬ ಬೋಲ್ಡ್ &’… ……’ ನಟಿಯನ್ನು ರಾಜ್ ನೇಪಾಳದಿಂದ ಕರೆಸಿದ್ದ ಉದ್ದೇಶ ಈಡೇರಿದೆ! ಇರಾನ್ ದೇಶದ ಮಾಡೆಲ್ ಏವಾ ಸಫಾಯಿ ಅವರ ಅದ್ಭುತ ಅಭಿನಯವನ್ನು ಕನ್ನಡಿಗರು ನೋಡಲೇ ಬೇಕು, ಸೀನ್ನಿಂದ ಸೀನ್ಗೆ ಅವರ ಅಭಿನಯ ಬೇಜಾನ್ ಇಂಪ್ರೂ ಆಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಅಂತೂ….. ಥೂ ನೋಡೋಕ್ಕಾಗಲ್ಲ!
ಅಶ್ವಿನ್ ಕೃಷ್ಣ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರೋ ಸಿನಿಮಾ ಮೈ ನೇಮ್ ಈಸ್ ರಾಜಾ ನೋಡಿದ ಮೇಲೆ, ನಿರ್ದೇಶಕರು ಈ ಹಿಂದೆ ಬ್ಲೂಫಿಲ್ಮ್ ಡೈರೆಕ್ಟ್ ಮಾಡ್ತಿದ್ರಾ ಅನ್ನೋ ಸಂದೇಹ ಬರೋದು ಸಹಜ. ಎಲ್ವಿನ್ ಜೋಶ್ವ ಸಂಗೀತ ನಟೀಮಣಿಯರ ಕಾಮದಾಟದ ಮಧ್ಯೆ ಕಳೆದು ಹೋಗಿದೆ. ವೆಂಕಟ್ ಇಡಬಾರದ ಜಾಗದಲ್ಲೆಲ್ಲಾ ಕ್ಯಾಮರಾ ಇಟ್ಟು ಮನರಂಜಿಸುತ್ತಾರೆ. ಒಟ್ಟಿನಲ್ಲಿ ಸಂಚಾರಿ, ಜಟಾಯು ಮೂಲಕ ಸೋತು ಸುಣ್ಣವಾಗಿದ್ದ ರಾಜ್ ಪಾಪ, ಈಗ ಸೆಕ್ಸ್ ಅನ್ನು ಬೇಸ್ ಆಗಿಟ್ಟುಕೊಂಡ ಚಿತ್ರಕೂಡ ಕೈಕೊಟ್ಟಿದೆ. ಇದರಿಂದ ಸಹಜವಾಗಿ ಕನ್ನಡಿಗರಿಗೆ ರಾಜ್ ಅವರ ಮುಂದಿನ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ!!!!
@ಬಿಸಿನಿಮಾಸ್ ಡಾಟ್ ಇನ್
Be the first to comment