‘ಅಂಬಾನಿ ಪುತ್ರ’ ಎಂದರೆ ಧೀರುಬಾಯ್ ಅಂಬಾನಿ ನೆನಪಿಗೆ ಬರುತ್ತಾರೆ.ಆದರೆಇದೇ ಹೆಸರಿನಚಿತ್ರವುಅವರ ಕತೆ ಯಾಗಿರುವುದಿಲ್ಲ. ಹಳ್ಳಿ ಕಡೆಗಳಲ್ಲಿ ದುಡ್ಡು ಇದ್ದು, ತಲೆ ತಿರುಗುತ್ತಿದ್ದರೆ ಆಡು ಭಾಷೆಯಲ್ಲಿ ಅಲ್ಲಿನ ಜನರು ಈ ಹೆಸರಿನಿಂದಲೇ ಕರೆಯುತ್ತಾರಂತೆ. ಅದರಂತೆ ಊರಿನ ಹುಡುಗನೊಬ್ಬ ಶೀರ್ಷಿಕೆಯಂತೆ ಬಿಂದಾಸ್ ಆಗಿ ಚಂಚಲ ಮನಸ್ಸುಳ್ಳವನಾಗಿರುತ್ತಾರೆ. ಅವಳು ಸಿಕ್ಕರೆ, ಇವಳು ಅಂದುಕೊಂಡು ಬದುಕನ್ನು ಸಾಗಿಸುತ್ತಿರುತ್ತಾನೆ. ಪ್ರಪಂಚ ನಡಿತಾ ಇರೋದು ನಂಬಿಕೆ ಮೇಲೆ. ಇವುಗಳನ್ನು ಆಧರಿಸಿದ ಮತ್ತು ಕೆಲವೊಂದು ನೈಜ ಘಟನೆಗಳನ್ನು ಕಂಡಿದ್ದು-ಕೇಳಿದ್ದು-ನೋಡಿದ್ದು ಎಂಬಂತೆ ಇಂತಹ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ. ಅಡಿಬರಹದಲ್ಲಿ ಓದಿರೋದು ಕಾ…ಸೂತ್ರ…. ವೆಂದು ಹೇಳಿಕೊಂಡಿದೆ.ಇದನ್ನುಕಾದಂಬರಿ, ಕಾಮಿಡಿ ಎಂಬುದನ್ನುತೀರ್ಮಾನ ಮಾಡಲು ಜನರಿಗೆ ಬಿಡಲಾಗಿದೆ.ಚಿತ್ರರಂಗದಲ್ಲಿ ಅನುಭವ ಪಡೆದುಕೊಂಡಿರುವ ದೊರೆ ರಾಜ್‌ತೇಜ ಕತೆ,ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಸಲ ನಿರ್ದೇಶನ ಮಾಡಿದ್ದಾರೆ.
ಬಿಇ ಮುಗಿಸಿರುವ ಸುಪ್ರೀಂ ನಾಯಕನಾಗಿ ಹೊಸ ಅನುಭವ. ಇಬ್ಬರು ನಾಯಕಿಯರು ಇರಲಿದ್ದು, ಮೂಲತ: ಡ್ಯಾನ್ಸರ್ ಆಗಿರುವ ಆಶಾಭಂಡಾರಿ ಮುಗ್ದಹುಡುಗಿ. ಬೋಲ್ಡ್ ಆಗಿ ಮಾತಾಡುವ ಕಾವ್ಯ. ಉಳಿದಂತೆ ಪ್ರೀತಂ ಜೊತೆಗೆ ಹೊಸ ಪ್ರತಿಭೆಗಳು ಕಾಣಿಸಿಕೊಂಡಿದ್ದಾರೆ. ಹಾಸನ, ಮಂಡ್ಯಾ, ಹೊನ್ನಾವರ, ಮಹಾರಾಷ್ಟ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಧುದೇವಲಾಪುರು, ರೋಹಿತ್ ಆದಿತ್ಯ ಹಾಗೂ ನಿರ್ದೇಶಕರು ಬರೆದಿರುವಐದು ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ಅಭಿಮನ್‌ರಾಯ್ ಸಹೋದರ ಅಭಿಷೇಕ್‌ರಾಯ್ ಪ್ರಥಮ ಬಾರಿರಾಗ ಒದಗಿಸಿದ್ದಾರೆ.ಛಾಯಾಗ್ರಹಣ ವಿ.ರಾಮಾಂಜನೇಯ, ನೃತ್ಯ ಹೈಟ್ ಮಂಜು ನಿರ್ವಹಿಸಿದ್ದಾರೆ. ಕತೆ ಇಷ್ಟಪಟ್ಟು ಮಕ್ಕಳಾದ ಸುಪ್ರೀಂ,ಪ್ರೀತಂ ಸಲುವಾಗಿ ನಿರ್ಮಾಣ ಮಾಡಿರುವ ಹಾಸನದ ವೆಂಕಟೇಶ್.ಕೆ.ಎನ್. ಪತ್ನಿ ಸುಮಿತ್ರಾ ಸಹ ನಿರ್ಮಾಪಕರು ಹಾಗೂ ವರುಣ್‌ಗೌಡ ಪಾಲುದಾರರು. ಅಂದಹಾಗೆ ಚಿತ್ರವು ಸದ್ಯದಲ್ಲೆತೆರೆಗೆ ಬರುವ ಸಾದ್ಯತೆ ಇದೆ.
Pingback: game slot