ಜನ ಸಾಮಾನ್ಯರಿಗೆ ಬಹಳ ಆಪ್ತವೆನಿಸುವ, ಹಾಗೂ ಅವರುಗಳ ಅನುಭವಕ್ಕೆ ನಾಟುವಂತಹ, ಒಂದು ಗಟ್ಟಿಯಾದ ಕಥಾ ವಸ್ತುವನ್ನ ಒಳಗೊಂಡ ಚಿತ್ರ ಲಕ್ಷ್ಯ ಪ್ರಾದೇಶಿಕ ಸೆನ್ಸಾರ್ ಮಂಡಳಿಯವರು “ಯೂ” ಸರ್ಟಿಫಿಕೆಟ್ ನೀಡಿ, ಚಿತ್ರತಂಡದ ಮುಂದಿನ ಕೆಲಸಗಳಿಗೆ ಅಸ್ತು ಎಂದಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಅಧಿಕಾರಿಗಳಾದ ಶ್ರೀನಿವಾಸಪ್ಪನವರು ಮತ್ತು ಇತರ ಜ್ಯೂರಿ ಸದಸ್ಯರು, ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿ ಮೆಚ್ಚುಗೆ ಸೂಚಿಸಿದ್ದು,
ಇತ್ತೀಚಿಗೆ ಬಹಳಷ್ಟು ಕನ್ನಡ ಚಿತ್ರಗಳು ವಿಭಿನ್ನವಾದ ರೀತಿಯ ಕಥಾ ವಸ್ತುವಿನೊಂದಿಗೆ ಕನ್ನಡ ಚಿತ್ರೊಧ್ಯಮಕ್ಕೆ ಬರುತ್ತಿದ್ದು, ತಮ್ಮ ಪ್ರತಿಭೆಯನ್ನ ಸಾಭೀತು ಮಾಡಲು ಬಹಳ ಕಠಿಣ ಪರಿಶ್ರಮವನ್ನು ಪಡುತ್ತಾರೆ, ಅಂತಹ ಸಾಲಿಗೆ ಸೇರುವ ಮತ್ತೊಂದು ಅಪ್ಪಟ ಕನ್ನಡದ ಮನೋರಂಜನೆಯ ಚಿತ್ರವೇ ಈ “ಲಕ್ಷ್ಯ”
ಪ್ರಾಯ ಪ್ರಾಯ ಪ್ರಾಯ ಚಿತ್ರದ “ಭೂಮಿತಾಯಾಣೆ ನೀ ಇಷ್ಟ ಕಣೆ” ಎಂಬ ಅಧ್ಬುತವಾದ ಹಾಡಿಗೆ ಹೆಜ್ಜೆ ಹಾಕಿ, ಅಂದಿನ ಕಾಲ ಘಟ್ಟದಲ್ಲಿ ತಮ್ಮದೇದ ವಿಭಿನ್ನ ಮ್ಯಾನರಿಸಮ್ ಮತ್ತು ನಟನೆಯಿಂದ ಹೆಸರು ಮಾಡಿದ್ದ, ಹಿರಿಯ ನಟ ರಾಮಕೃಷ್ಣರನ್ನ ಈ ಚಿತ್ರದಲ್ಲಿ ಬಹಳ ವಿಶೇಷ ಪಾತ್ರದಲ್ಲಿ ತೋರಿಸಿದ್ದಾರೆ.
ಇನ್ನುಳಿದಂತೆ ಚಿತ್ರದ ತಾರಾಬಳಗದಲ್ಲಿ, ಸುಮಾರು ೨೫ ಮೆಘಾ ಸೀರಿಯಲ್‌ಗಳಲ್ಲಿ ನಾಯಕ ನಟನಾಗಿ ಮೆರೆದಕಿರುತೆರೆಯ ಪ್ರಸಿದ್ದ ಮೂಡಲ ಮನೆಯ ಶ್ರೀಹರಿ, ಬಂಗಾರಖ್ಯಾತಿಯ ಡಿ.ಸಿ ಎಂದೇಕರೆಯಲ್ಪಡುವ ಸಂತೋಷ್‌ರಾಜ್‌ಝಾವರೆ, ಯುವ ಪ್ರತಿಭೆ ನಿತಿನದ್ವಿ, ಹಿರಿಯ ನಟಿ ಮಾಲತಿಶ್ರೀ, ಶರ್ಮಿಳಾ ಚಂದ್ರಶೇಖರ್, ಮತ್ತುಕಿನ್ನರಿಖ್ಯಾತಿಯ ಬೇಬಿ ಗಮನ ಮುಂತಾದವರಿದ್ದಾರೆ.
ಮೇಘಾ ಕಂಬೈನ್ಸ್ ಬ್ಯಾನರ್‌ಅಡಿಯಲ್ಲಿ ಸಿದ್ದವಾಗಿರುವ “ಲಕ್ಷ್ಯ” ಚಿತ್ರದ ನಿರ್ಮಾಪಕರಾಗಿ, ಮಹಾಂತೇಶ ತಾಂವಶಿ, ಸಹ ನಿರ್ಮಾಪಕರಾಗಿ, ಪ್ರಕಾಶ್‌ಕೊಲ್ಹಾರ್, ಸುಧೀರ್‌ದೇವೇಂದ್ರ ಹಂಲ್ಲೋಳಿ, ಆನಂದ ಶಿವಯೋಗಪ್ಪ ಕೊಳಕಿ, ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಸಂತೋಷ್‌ರಾಜ್ ಝಾವರೆ, ಚಿತ್ರತಂಡಕ್ಕೆಆಧಾರ ಸ್ಥಂಭಗಳಾಗಿ ನಿಂತಿದ್ದಾರೆ.
ಕಥೆ – ನಿರ್ದೇಶನದಜವಾಬ್ದಾರಿ ಹೊತ್ತಿರುವ ಸಾಸನೂರ್‌ರವರಿಗೆಚಿತ್ರಕಥೆ – ಸಹ ನಿರ್ದೇಶನ – ಸಂಕಲನ ಮಾಡುವದರ ಮೂಲಕ ಸಾಥ್‌ಕೊಟ್ಟಿರುವುದು ಶಿವ ಸರ್ವಮ್. ಜುವಿನ್ ಸಿಂಗ್ ಸಂಗೀತ, ಆನಂದುಚಂದ್ರ ಸುಬ್ಬು ಛಾಯಾಗ್ರಹಣ, ಭವ್ಯ ಪ್ರದೀಪ್ ಮತ್ತು ಸತ್ಯನಾಥ್‌ರ ಸಾಹಿತ್ಯವಿದೆ. ಹಾಡುಗಳನ್ನು ಅನುರಾಧಾ ಭಟ್, ಜೆಸ್ಸಿ ಗಿಫ್ಟ್, ಕೆ.ಎಸ್. ಹರಿಶಂಕರ್, ವಿಶಾಕ್ ನಾಗಲಾಪುರ ಮುಂತಾದವರು ಹಾಡಿದ್ದು ಆಡಿಯೋ ಹಕ್ಕುಗಳನ್ನು ಖ್ಯಾತ ಸಂಸ್ಥೆ ಲಹರಿ ಪಡೆದುಕೊಂಡಿದೆ.
Pingback: Unicc