ಚಿತ್ರ ವಿಮರ್ಶೆ : ಕೆಟ್ಟದ್ದರ ಸಂಹಾರಕ್ಕಾಗಿ ಒಂದೊಳ್ಳೆ ಪ್ರಯತ್ನ

ಕನ್ನಡದಲ್ಲಿ ಪ್ರತಿ ವಾರವೂ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅವುಗಳಲ್ಲಿ ಭರವಸೆ ಮೂಡಿಸುವುದು ಬೆರಳೆಣಿಕೆಷ್ಟೇ. ಆ ಸಾಲಿಗೆ ಈಗ ‘ಅಸುರ ಸಂಹಾರ’ ಕೂಡ ಸೇರಿದೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಈ ಚಿತ್ರ ಈ ವಾರ ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನಿರ್ದೇಶಕರು ಪ್ರದೀಪ್ ಕುಮಾರ್ ತಮ್ಮ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಇನ್ನು, ಹೀರೋ ಹರಿ ಪ್ರಸಾದ್, ಚಿತ್ರ ನಿರ್ಮಾಣದ ಒತ್ತಡವಿದ್ದರೂ, ತಮ್ಮ ಮೊದಲ ಚಿತ್ರದಲ್ಲೇ ಪ್ರಾಮಿಸಿಂಗ್ ಪರ್‌ಫಾಮೆನ್ಸ್ ನೀಡಿದ್ದಾರೆ.

ಕಥೆಯ ಬಗ್ಗೆ ಹೇಳೊದಾರೆ, ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಕುರಿತಾದ ಕಥೆ ‘ಅಸುರ ಸಂಹಾರ’ ಚಿತ್ರದ್ದು. ಪ್ರತಿನಿತ್ಯ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ, ಕಾನೂನು ಮಾತ್ರ ಕಠಿಣವಾಗಿಲ್ಲ. ಇಂತಹ ಪ್ರಕರಣಗಳಿಗೆ ತಕ್ಷಣವೇ ಶಿಕ್ಷೆಯಾಗುವಂತಹ ಕಾನೂನು ಜಾರಿಯಾಗಬೇಕು. ಎಂಬ ಸೂಕ್ಷö್ಮ ಸಂಗತಿಯನ್ನಿಟ್ಟುಕೊಂಡು ಪ್ರದೀಪ್ ಚಿತ್ರ ಮಾಡಿದ್ದಾರೆ. ಚಿತ್ರದ ವಿಶೇಷವೆಂದರೆ, ಒಂದು ಚೂರೂ ರಕ್ತಪಾತವಿಲ್ಲದೆ, ಅಶ್ಲೀಲತೆಯನ್ನು ವೈಭೀಕರಿಸದೆ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಯನ್ನು ತಿಳಿಸುವ ಚಿತ್ರ ಇದಾಗಿದೆ.

ನಾಯಕ ಕಮ್ ನಿರ್ಮಾಪಕ ಹರಿಪ್ರಸಾದ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡು ಚಿತ್ರಕ್ಕಾಗಿ ಸಾಕಷ್ಟು ರಿಸರ್ಚ್ ಮಾಡಿರೋದು ಚಿತ್ರದ ನಿರೂಪಣೆಯಲ್ಲಿ ಕಾಣುತ್ತದೆ. ನಾಯಕಿ ಹರ್ಷಲ ಚಾಲೆಂಜಿಂಗ್ ಪಾತ್ರವೊಂದನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ.

ವಾಸ್ತವತೆಗೆ ಹತ್ತಿರವಾಗಿರುವ ಕಥೆಯನ್ನು, ಭರ್ಜರಿ ಆ್ಯಕ್ಷನ್ ಮೂಲಕ ತೆರೆಗೆತಂದಿರುವ ಚಿತ್ರತಂಡ, ಅಣ್ಣ ತಂಗಿಯ ಕಥೆಯನ್ನೂ ಪರಿಣಾಮಕಾರಿಯಾಗಿ ಹೇಳಿದೆ. ಕಾಮಿಡಿ ಪಾತ್ರ ನಿರ್ವಹಿಸಿರುವ ರವಿಯವರು ಮುಂದಿನ ದಿನಗಳಲ್ಲಿ ಉತ್ತಮ ತರಬೇತಿ ಪಡೆದುಕೊಂಡರೆ ಕನ್ನಡ ಚಿತ್ರರಂಗಕ್ಕೆ ಒಬ್ಬ ಉತ್ತಮ ಹಾಸ್ಯ ನಟನಾಗಬಹುದು. ನೆಗೆಟಿವ್ ಶೇಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಂಗಭೂಮಿ ಪ್ರತಿಭೆಗಳಾದ ವಿನಯ್ ಮತ್ತು ಶಿವು ಬಾಲಾಜಿ ಅವರ ರಂಗಭೂಮಿಯ ಅನುಭವ ತೆರೆಯಮೇಲೆ ಕಾಣುತ್ತದೆ. ಹೀರೋ ತಂಗಿ ಪಾತ್ರ ಮಾಡಿರುವ ದೀಕ್ಷಾ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಸಾಕಷ್ಟು ಹೀರೊಗಳಿಗೆ ತಂಗಿಯಾಗಿ ನಟಿಸುವ ಸಾಧ್ಯತೆ ಇದೆ. ಲೋಕಿಯವರ ಸಂಗೀತ ಇಂಪಾಗಿದೆ. ವಿನಯ್ ಸಂಕಲನ ಇನ್ನಷ್ಟು ಶಾರ್ಪ್ ಆಗಿದ್ದರೆ ಚಿತ್ರ ಇನ್ನಷ್ಟು ಇಂಟ್ರೆಸ್ಟಿಂಗ್ ಆಗಿರುತ್ತಿತ್ತು. ಒಟ್ಟಿನಲ್ಲಿ ಒಂದು ಹೊಸ ಚಿತ್ರತಂಡ ಹೊಸ ಕಥೆಯೊಂದಿಗೆ ಎಂಟ್ರಿಕೊಟ್ಟು ಕನ್ನಡಿಗರಲ್ಲಿ ಭರವಸೆ ಮೂಡಿಸಿದ್ದಾರೆ.

This Article Has 1 Comment
  1. Pingback: buy dumps with pin 2021

Leave a Reply

Your email address will not be published. Required fields are marked *

Translate »
error: Content is protected !!