’99ಲಕ್ಷಕ್ಕೊಬ್ಬ’ ಟೀಸರ್ ಲಾಂಚ್

ಪ್ರಥಮ್ ಅವರ ಹೊಸ ’99 ಲಕ್ಷಕ್ಕೊಬ್ಬ’ ಚಿತ್ರದ ಸಿನಿಮಾ ದ ಫಸ್ಟ್‌ ಲುಕ್ ಬಿಡುಗಡೆ ಮಾಡಿದ ಅಭಿಷೇಕ್,  ಪ್ರಥಮ್ ಅವರ ಜನ್ಮದಿನಕ್ಕೆ ಶುಭ ಕೋರಿದರು.
ಬೆಟ್ಟಿಂಗ್ ಇವತ್ತು ಎಲ್ಲರಿಗೂ ಹಬ್ಬಿದೆ. ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಸಿನಿಮಾ. ಬಾಲಿವುಡ್ ನ ಸೂಪರ್ ಸ್ಟಾರ್ ಈ ಸಿನಿಮಾದಲ್ಲಿ ನಟಿಸುತ್ತಾರೆ. ಎಲ್ಲಾ ಕನ್ಫರ್ಮ್ ಆದ ಕೂಡಲೇ ಹೇಳ್ತೇನೆ ಎಂದು ಪ್ರಥಮ್ ತಮ್ಮ ಹೊಸಚಿತ್ರ 99 ಲಕ್ಷಕೊಬ್ಬ  ಟೀಸರ್ ಲಾಂಚ್ ಸಮಾರಂಭದಲ್ಲಿ ಹೇಳಿದರು.
ಒಂದೂವರೆ ವರ್ಷಗಳಿಂದ ಪ್ರಥಮ್ ಜೊತೆ ಪ್ಲ್ಯಾನ್ ಮಾಡಿ ಮಾಡಿದ ಚಿತ್ರ, ಒಳ್ಳೆ ಕ್ವಾಲಿಟಿ ಇರೋ ಸಿನಿಮಾ ಎಂದು ನಿರ್ಮಾಪಕ ನೀಲೇಶ್ ಹೇಳಿದರು. ಪ್ರಥಮ್ ಅವರು ನನಗೆ ರಿಯಾಲಿಟಿ ಶೋ ಮೂಲಕ ಪರಿಚಯ ಆದವರು.‌ಅವರ ಜತೆ ನಟ ಭಯಂಕರ ಸಿನಿಮಾ ಮಾಡಿದ್ದೆ, ಇದು ಎರಡನೇ ಸಿನಿಮಾ ಎಂದು ಚಿತ್ರದಲ್ಲಿನ ಇಬ್ಬರು ನಾಯಕಿಯರಲ್ಲಿ ಒಬ್ಬರಾದ ನೀಹಾರಿಕಾ ಶೆಣೈ ಹೇಳಿದರು.
ತೆಲುಗಿನ ರಾಮ್ ಗೋಪಾಲ್ ವರ್ಮ ಅವರ ‘ಐಸ್ಕ್ರೀಂ’ ಸಿನಿಮಾ ಕ್ಕೆ ಸಂಗೀತ ನೀಡಿ ಅನುಭವ ಇರುವ ಪ್ರದ್ಯೋತನ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.ಅಭಿಷೇಕ್ ಅವರು ಹಿರಿಯ ನಟ ಉಮೇಶ್ ಅವರನ್ನು ಸನ್ಮಾನಿದರು. ಈ ಸಿನಿಮಾದಲ್ಲಿ ಉಮೇಶ್ ಅವರ ಪಾತ್ರ ಇದೆ. ನಂತರ ಪ್ರಥಮ್ ಅವರ ಬರ್ತ್ ಡೇ ಕೇಕ್ ಕತ್ತರಿಸಲಾಯಿತು.
This Article Has 3 Comments
  1. Pingback: love dolls for women

  2. Pingback: 호호툰

  3. Pingback: dumps + pin shop

Leave a Reply

Your email address will not be published. Required fields are marked *

Translate »
error: Content is protected !!