‘ಪುಷ್ಪಾ ಐ ಹೇಟ್ ಟಿಯರ್ಸ್’ ಈ ವಾರ ತೆರೆಗೆ

ಪುಷ್ಪಾ ಐ ಹೇಟ್ ಟಿಯರ್ಸ್ ಎನ್ನುವುದು ರಾಜೇಶ್ ಖನ್ನ ಅವರ ಚಿತ್ರದ ಜನಪ್ರಿಯ ಸಂಭಾಷಣೆ. ಅದನ್ನೇ  ಚಿತ್ರದ ಶೀರ್ಷಿಕೆ ಮಾಡಲಾಗಿದೆ ಎಂದರು ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಮ್. ಅವರು ತಮ್ಮ ಹಿಂದಿ ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಚಿತ್ರ ಹಿಂದಿಯಲ್ಲಿ ಚಿತ್ರೀಕರಣವಾಗಿದ್ದರೂ ಕನ್ನಡಕ್ಕೆ ಡಬ್ ಮಾಡಲಾಗಿದೆ. ಹಿಂದಿಯಲ್ಲಿ ಅಬ್ಬಾಸ್ ಮಸ್ತಾನ್  ಅವರ ಜೊತೆ ಕೆಲಸ ಮಾಡಿರುವ ದಿನಕರ್ ಕಪೂರ್ ಅವರ ಕತೆ ಚಿತ್ರಕತೆ ಇರುವ ಸಿನಿಮಾ ಇದು.
ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ತುಂಬಾ ಪ್ಯಾಷನೇಟ್ ಆಗಿದ್ದಾರೆ. ಅರ್ಜುಮನ್ ಮುಘಲ್ ಎಂಬ ಬಾಲಿವುಡ್ ನಟಿ ಈ ಸಿನಿಮಾದಲ್ಲಿ ಪುಷ್ಪಾ ಎನ್ನುವ ಪಾತ್ರ ಮಾಡಿದ್ದಾರೆ. ಸಂಗೀತ ರಾಮ್ ಜಿ ಗುಲಾಟಿ ನೀಡಿದ್ದಾರೆ. ಸಿನಿಮಾದ ಟೈಟಲ್ ಟ್ರ್ಯಾಕ ನ್ನು ಸಿನಿಮಾದ ಇನ್ನೊಬ್ಬ ನಾಯಕ ಕೃಷ್ಣ ಹಾಡಿದ್ದಾರೆ ಹಾಗೂ ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಡ್ರಾಮ. ನನಗೆ ಇಬ್ಬರು ನಾಯಕಿ ಯರು. ಒರಿಸ್ಸಾದ ಅಮೂಲ್ಯ ದಾಸ್ ಗುಪ್ತಾ ನಿರ್ಮಾಪಕಿ ಎಂದು ಜೆ.ಕೆ ಹೇಳಿದರು.
ಕಪಿಲ್ ಶರ್ಮಾ ಶೋ ಮೂಲಕ ಖ್ಯಾತಿ ಪಡೆದ ಕೃಷ್ಣ , ಈ ಸಿನಿಮಾದಲ್ಲಿ ನೆಗೆಟಿವ್ ರೋಲ್ ಇರುವ ಕಾಮಿಕ್ ಪಾತ್ರ ಮಾಡಿದ್ದಾರೆ. ವಿವಾಹೇತರ ಸಂಬಂಧದ ಕುರಿತಾದ ಕತೆ ಇದು. ನಾನು ಭೋಜ್ ಪುರಿಯಲ್ಲಿ 15 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೆ. ‘ಸಿಯಾ ಕೆ ರಾಮ್’ ಸೀರಿಯಲ್ ನಲ್ಲಿ ರಾವಣ ನ ಕ್ಯಾರೆಕ್ಟರ್ ನೋಡಿ ಇಷ್ಟಪಟ್ಟು ಜೆ.ಕೆಗೆ ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಕೊಟ್ಟಿದ್ದೇನೆ ಎಂದು ನಿರ್ದೇಶಕ ದಿನಕರ್ ಕಪೂರ್ ಹೇಳಿದರು.
ನನ್ನದು ನಾಯಕನ ಗೆಳತಿಯ ಪಾತ್ರ ಎಂದು ಬಾಲಿವುಡ್ ನಟಿ ಅನುಸ್ಮೃತಿ ತಿಳಿಸಿದರು.  ಚಿತ್ರವನ್ನು ಕರ್ನಾಟಕದಲ್ಲಿ  ವಿತರಿಸುತ್ತಿರುವ ನರ್ಗಿಸ್ ಬಾಬು ಮಾತನಾಡುತ್ತಾ,  ಕನ್ನಡ ಮತ್ತು ಹಿಂದಿ ಸೇರಿ ಒಟ್ಟು 50 ಚಿತ್ರಮಂದಿರಗಳಲ್ಲಿ ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಮುಂಬಯಿನಲ್ಲಿ ಸಿನಿಮಾಡ 25ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ ಎಂದರು.
This Article Has 2 Comments
  1. Pingback: primewire.top

  2. Pingback: sexy spanish teacher

Leave a Reply

Your email address will not be published. Required fields are marked *

Translate »
error: Content is protected !!