‘ದ ಚಕ್ ಮೇಟ್’ ಟೀಸರ್ ಬಿಡುಗಡೆ

ನಗರದ ಸಿಟಡಲ್ ಹೋಟೆಲ್ ನಲ್ಲಿ ದ ಚೆಕ್ ಮೇಟ್ ಸಿನಿಮಾದ ಟೀಸರ್ ಲಾಂಚ್ ಕಾರ್ಯಕ್ರಮ ನಡೆಯಿತು.

ಚಿತ್ರದ ಕತೆ ಮತ್ತು ನಿರ್ದೇಶನವನ್ನು ಇಬ್ಬರು ಹಂಚಿಕೊಂಡಿದ್ದಾರೆ. ಭಾರತೀಶ್ ವಸಿಷ್ಠ ಮತ್ತು ಸಂತೋಷ್ ಚಿತ್ಪಾಡಿ.ಚಿತ್ರೀಕರಣ ಪೂರ್ತಿ ಬೆಂಗಳೂರಿನಲ್ಲಿ ಆಗಿದೆ. ಬ್ರೇಕಪ್ ಪಾರ್ಟಿ ಮಾಡಲು ಹೋದ ನಾಲ್ಕು ಜನ ಫ್ರೆಂಡ್ಸ್ ಚದುರಂಗದ ಬಲೆಯಲ್ಲಿ ಸಿಕ್ಕಿ ಬೀಳುತ್ತಾರೆ. ನಂತರ ನಡೆಯೋದೇನು ಇದೇ ಕತೆ. ಲವ್, ಕಾಮಿಡಿ ಎಲ್ಲಾ ಇದೆ ಈ ಸಿನಿಮಾದಲ್ಲಿ. ಸೆನ್ಸಾರ್ ಹಂತದಲ್ಲಿದೆ ಸಿನಿಮಾ ಎಂದು ನಿರ್ದೇಶಕ ಭಾರತೀಶ್ ವಸಿಷ್ಠ.

ಚಿತ್ರದ ಇನ್ನೊಬ್ಬ ನಿರ್ದೇಶಕ ಸಂತೋಷ್ ಚಿತ್ಪಾಡಿ ಮಾತನಾಡಿಈ ಚಿತ್ರದಲ್ಲಿ ಫ್ಲ್ಯಾಶ್ ಬ್ಯಾಕ್ ಕತೆ ಬರುತ್ತಾ ಇರುತ್ತದೆ. ನಾನು ಒಂದೆರಡು ಶಾರ್ಟ್ ಮೂವೀಸ್ ಮಾಡಿದ್ದೆ ಅಷ್ಟೇ. ನಿರ್ದೇಶನದ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಎಂದರು.

ಗಾಂಧಿ ನಗರದಲ್ಲಿ ಸಿನಿಮಾ ಮಾಡಿ ಪಾಠ ಕಲಿತಿದ್ದೇನೆ. ಪಾರು ಐ ಲವ್ ಯು ಫಿಲ್ಮ್ ಮಾಡಿದ್ದೆ.ಗೆಲುವು ಬರಲಿಲ್ಲ. ನಂತರ ಭಾರತೀಶ್ ವಸಿಷ್ಠ ಅವರ ಕತೆ ನನ್ನ ಬಜೆಟ್ ಗೆ ಸರಿಹೊಂದಿತು ಎಂದು ಚಿತ್ರದ ನಿರ್ಮಾಪಕ ಹಾಗೂ ನಾಯಕ ರಂಜನ್ ಹಾಸನ್ ಹೇಳಿದರು. ಚಿತ್ರದಲ್ಲಿ ವಿಶ್ವ ವಿಜೇತ್, ಕಾಕ್ರೋಚ್ ಸುಧಿ, ಪ್ರದೀಪ್ ಪೂಜಾರಿ, ಕೆ.ಎಲ್ ರಾಜಶೇಖರ್,ಸರ್ದಾರ್ ಸತ್ಯ ಮೊದಲಾದವರಿದ್ದಾರೆ.

ಕುಡುಕನಾಗಿ ನನ್ನ ಪಾತ್ರ, ಸಾತ್ವಿಕ್ ನನ್ನ ಪಾತ್ರದ ಹೆಸರು ಎಂದು ಪ್ರದೀಪ್ ಹೇಳಿದರು. ನಾಯಕನ ಸ್ನೇಹಿತನ ಪಾತ್ರದಲ್ಲಿ ಕೆ.ಎಲ್ ರಾಜಶೇಖರ್ ನಟಿಸಿದ್ದಾರೆ. ‘ಆದಿ’ ಎನ್ನುವ ಆದಿಮಾನವನ ಪಾತ್ರದಲ್ಲಿ ವಿಜಯ್ ಚೆಂಡೂರು ನಟಿಸಿದ್ದಾರೆ. ನಾಲ್ಕು ಪ್ರಮುಖ ಕ್ಯಾರೆಕ್ಟರ್ ನಲ್ಲಿ ನನ್ನದು ಒಂದು ಎಂದು ಅವರು ತಿಳಿಸಿದರು.

ನನ್ನ ಹೆಸರು ಮೌನ, ನಾನು ಮೂಕಿಯಾಗಿ ನಟಿಸುತ್ತಿದ್ದೇನೆ ಎಂದು ಸಿನಿಮಾದ ನಾಯಕಿ ಪ್ರೀತು ಹೇಳಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!