‘ಶಿವಾರ್ಜುನ’ ಟ್ರೇಲರ್ ಬಿಡುಗಡೆ

ಚಿರಂಜೀವಿ ಸರ್ಜ ನಟನೆಯ ‘ಶಿವಾರ್ಜುನ’ ಸಿನಿಮಾದ ಟ್ರೇಲರನ್ನು ಸಂಸದ ತೇಜಸ್ವಿ ಸೂರ್ಯ ಬಿಡುಗಡೆಗೊಳಿಸಿದರು.

‘ಮಳೆ’ ಚಿತ್ರದ ನಿರ್ದೇಶಕ ಶಿವ ತೇಜಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಿನಿಮಾಗಳಿಗೆ ಪ್ರೊಡಕ್ಷನ್ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದ ಶಿವಾರ್ಜುನ ಅವರು ತಮ್ಮದೇ ಹೆಸರಿನ ಚಿತ್ರವನ್ನು ನಿರ್ಮಿಸಿದ್ದಾರೆ.

ಚಿತ್ರದ ನಾಯಕ ಚಿರು ಸರ್ಜ ಮತ್ತು ಮೂವರು ನಾಯಕಿಯರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತನ್ನ ತಾಯಿಯ ಜನ್ಮ ದಿನ ಹಾಗೂ ತಾನು ಪಾತ್ರ ಮಾಡಿದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಬಿಡುಗಡೆ ದಿನವೇ ಶಿವರಾತ್ರಿ ದಿನವಾಗಿದ್ದು, ಅಂದೇ ಈ ಟ್ರೇಲರ್ ಕೂಡ ಹೊರಬರುತ್ತಿರುವುದು ತುಂಬ ಖುಷಿ ತಂದಿದೆ ಎಂದು ನಾಯಕಿ ಅಮೃತಾ ಅಯ್ಯಂಗಾರ್ ಹೇಳಿದರು.
ಸಿನಿಮಾದಲ್ಲಿ ನಾಯಕನೊಂದಿಗೆ ಮತ್ತು ಸಾಧುಕೋಕಿಲ ಜೊತೆಗೆ ಹೆಚ್ಚಿನ ದೃಶ್ಯಗಳಲ್ಲಿ ನಟಿಸಿದ್ದೇನೆ ಎಂದು ಸಿನಿಮಾದ ಮತ್ತೋರ್ವ ನಾಯಕಿ ಅಕ್ಷತಾ ಶ್ರೀನಿವಾಸ್ ಹೇಳಿದರು.

ನಿರ್ಮಾಪಕ ಉದಯ್ ಕೆ ಮೆಹ್ತ, ನಿರ್ಮಾಪಕಿ ಮಂಜುಳಾ ಶಿವಾರ್ಜುನ್, ಅಕ್ಷಿತಾ ಬೋಪಯ್ಯ, ಶಿವರಾಜ್ ಕೆ.ಆರ್.ಪೇಟೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೇಣು ಛಾಯಾಗ್ರಹಣ, ಹಾಗೂ ನನ್ನ ಮಗ ಕೃಷ್ಣ ಮೊದಲ ಬಾರಿಗೆ ಬಾಲನಟನಾಗಿ ಅಭಿನಯಿಸಿದ್ದಾನೆ ಎಂದು ತಾರಾ ಹೇಳಿದರು.
ಅತಿಥಿ ಯಾಗಿ ಆಗಮಿಸಿದ್ದ ಧ್ರುವ ಸರ್ಜಾ ಸನ್ಮಾನ ನೆರವೇರಿಸಿದರು. ತೇಜಸ್ವಿ ಸೂರ್ಯ ಅವರನ್ನು ಸನ್ಮಾನಿಸಲಾಯಿತು. ಪೋಸ್ಟರ್ ಅಂಟಿಸುವವರು, ಸಿನಿಮಾ ಮಂದಿರದೊಳಗೆ ಕೆಲಸ ಮಾಡುವವರನ್ನು ಸನ್ಮಾನ ಮಾಡಲಾಯಿತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!