ಈ ವರ್ಷದ ಸೆಲೆಬ್ರಿಟಿ ಕ್ಯಾಲೆಂಡರ್ ನ್ನು ಡಿಸೈನರ್ ಲಕ್ಷ್ಮೀಕೃಷ್ಣ ಅವರು ಹೊರಗೆ ತಂದಿದ್ದಾರೆ. ಈ ವರ್ಷದ ಮಾರ್ಚ್ ನಿಂದ ಮುಂದಿನ ವರ್ಷದ ಮಾರ್ಚ್ ವರೆಗೆ ದಿನಾಂಕಗಳು ಇವೆ.
ಇದೊಂದು ಫ್ಯಾಷನ್ ನಿಂದ ಕೂಡಿದ ಕ್ಯಾಲೆಂಡರ್. ನಾಯಕ ನಟರಿಗೂ ಕ್ಯಾಲೆಂಡರ್ ಬರಲಿ. ಫ್ಯಾಷನ್ ಕಾಸ್ಟ್ಯೂಮ್ ಅವರು ಕೂಡಾ ಹಾಕಲಿ ಎಂದು ಅತಿಥಿ ಯಾಗಿ ಆಗಮಿಸಿದ್ದ ಪ್ರಿಯಾಂಕ ಉಪೇಂದ್ರ ಹೇಳಿದರು.
ನಿರ್ಮಾಪಕ ರ ಕ್ಯಾಲೆಂಡರ್ ಬರಲಿ.ನಟ ನಟಿಯರ ಕ್ಯಾಲೆಂಡರ್ ಹೊಸದೇನಲ್ಲ. ನಿರ್ಮಾಪಕರ ಬಗ್ಗೆ ಕ್ಯಾಲೆಂಡರ್ ಬಂದರೆ ಒಳ್ಳೆದಿರುತ್ತೆ ಎಂದು ನೀರ್ ದೋಸೆ ಚಿತ್ರದ ನಿರ್ಮಾಪಕ ಪ್ರಸನ್ನ ಹೇಳಿದರು.
ವಾರ್ಡ್ 11 ಚಿತ್ರಕ್ಕೆ ಲಕ್ಷ್ಮೀ ಕೃಷ್ಣ ಅವರು ವಸ್ತ್ರ ವಿನ್ಯಾಸಕಿಯಾಗಿದ್ದರು. ಇದು ಇವರ ಎರಡನೇ ಕ್ಯಾಲೆಂಡರ್ ಬಿಡುಗಡೆ. ಕಾಸ್ಟ್ಯೂಮ್ ಡಿಸೈನರ್ ಸೋಮು ಉಪಸ್ಥಿತರಿದ್ದರು.
ಕ್ಯಾಲೆಂಡರ್ ನಲ್ಲಿ ಕಾರುಣ್ಯ ರಾಮ್, ಸಿಂಧು ಲೋಕನಾಥ್, ರಾಧಿಕಾ ಚೇತನ್ ಮುಂತಾದವರ ಚಿತ್ರಗಳಿದ್ದವು. ಸಮಾರಂಭಕ್ಕೆ ಸುಮನ್ ನಗರ್ಕರ್ ದಂಪತಿ, ವೈನಿಧಿ ಜಗದೀಶ್, ಸ್ಪರ್ಶ ರೇಖಾ ಅತಿಥಿ ಗಳಾಗಿ ಆಗಮಿಸಿದ್ದರು.
Be the first to comment