ರೂಪಿಕಾ ನಾಯಕಿಯಾಗಿ ನಟಿಸಿರುವ ನಟನೆಯ ಥರ್ಡ್ ಕ್ಲಾಸ್ ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ.
ನಿರ್ದೇಶಕರಾದ ಅಶೋಕ್ ದೇವ್ ಮಾತನಾಡುತ್ತಾ ಒಂದು ವಾರ ಥಿಯೇಟರ್ ನಲ್ಲೊ ಚಿತ್ರ ಓಡುವುದು ಕಷ್ಟ ಎನ್ನುವ ಕಾಲದಲ್ಲಿ ಚಿತ್ರ ಮೂರು ವಾರಕ್ಕೆ ಮುಂದುವರಿದಿರುವುದು ಯಶಸ್ಸಿನ ಸಂಕೇತ ಎಂದರು. ಹೆಣ್ಣು ಮಕ್ಕಳು ಕ್ಲೈಮ್ಯಾಕ್ಸ್ ನಲ್ಲಿ ಕಣ್ಣಲ್ಲಿ ನೀರು ಬರುತ್ತೆ ಎನ್ನುತ್ತಾರೆ. ಸಿನಿಮಾ ನೋಡಿ ತುಂಬಾ ಮಂದಿ ಚೆನ್ನಾಗಿಲ್ಲ ಎಂದು ಹೇಳಿದ್ದರೆ ನಾನೇ ಥಿಯೇಟರ್ ನಿಂದ ಸಿನಿಮಾ ತೆಗೆಯುತ್ತಿದ್ದೆ ಎಂದು ಚಿತ್ರದ ನಿರ್ದೇಶಕ ಮತ್ತು ನಾಯಕರಾದ ನಮ್ ಜಗದೀಶ್ ಹೇಳಿದರು.
ನಮ್ ಜಗದೀಶ್ ಮಾತನಾಡುತ್ತಾ, 50 ಸಾವಿರ ಆಟೋ ಡ್ರೈವರ್ ಗಳಿಗೆ ಫ್ರೀಯಾಗಿ ಇನ್ಸೂರೆನ್ಸ್ ಮಾಡಿದ್ದೇನೆ, ನೂರು ಚಿತ್ರಮಂದಿರದಲ್ಲಿ ಇದ್ದ ಸಿನಿಮಾ ಈಗ35 ಸಿನಿಮಾ ಚಿತ್ರಮಂದಿರಗಳಲ್ಲಿ ಇದೆ. ಸಮಾಜಸೇವೆ ಮಾಡಿದ್ದೇನೆ ಅದಕ್ಕೆ ಜನ ಬರಬೇಕೆಂದು ಅಲ್ಲ, ಆ ಸೇವೆಗಳನ್ನು ಆತ್ಮತೃಪ್ತಿಗೆ ಮಾಡಿದ್ದೇನೆ ಎಂದರು.
ನಾಯಕಿ ರೂಪಿಕಾ ಮಾತನಾಡಿ, “ಚಿತ್ರದಲ್ಲಿ ನನ್ಮ ನಟನೆಯ ಬಗ್ಗೆ ವಿಮರ್ಶಕರಿಂದ ಹಿಡಿದು ಪ್ರತಿಯೊಬ್ಬರು ಹೊಗಳಿದ್ದಾರೆ. ಥಿಯೇಟರ್ ಮುಂದೆ ನನ್ನ ಕಟೌಟ್ ನೋಡಿ ನನ್ನ ಅಮ್ಮ ಮತ್ತು ಮನೆ ಮಂದಿಗೆ ಖುಷಿಯಾಗಿತ್ತು. ಚೆಲುವಿನ ಚಿಲುಪಿಲಿ ನಂತರ ಸಕ್ಸಸ್ ಕಂಡ ಚಿತ್ರ ಎಂದರೆ ಇದೇ. ನಾನು ನಾಯಕಿಯಾಗಿ ನಟಿಸಿರುವ ಚಿತ್ರ ಅಪರೂಪಕ್ಕೆ ಸಕ್ಸಸ್ ಮೀಟ್ ಮಾಡಿರುವುದು ಖುಷಿಯಾಗಿದೆ ಎಂದು ರೂಪಿಕಾ ಭಾವುಕರಾಗಿ ನುಡಿದರು.
ಪೋಷಕ ನಟ ವಸಂತ್ ಉಪಸ್ಥಿತರಿದ್ದರು. ಆರ್. ಜೆ. ಅನಿಲ್ ಸಮಾರಂಭವನ್ನು ನಿರೂಪಿಸಿದರು.
Be the first to comment