ಶಿವರಾಜ್ ಕುಮಾರ್ ನಟನೆಯ ಆರ್ ಡಿ ಎಕ್ಸ್ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಇದು ಆರ್.ಡಿ.ಕ್ಸೇವಿಯರ್ ಎನ್ನುವ ಒಬ್ಬ ಪೊಲೀಸ್ ಅಧಿಕಾರಿಯ ಹೆಸರು! ಆತ ಎಷ್ಟು ಸ್ಟ್ರಾಂಗ್ ಎನ್ನುವುದಕ್ಕೋಸ್ಕರ ಆತನನ್ನು ಆರ್.ಡಿ.ಎಕ್ಸ್ ಎಂದು ಕರೆಯುತ್ತಾರೆ ಎಂದರು.
ಚಿತ್ರದಲ್ಲಿ ಸೆಂಟಿಮೆಂಟ್ ಗೆ ಕೊರತೆ ಇಲ್ಲ. ಫ್ರೆಂಡ್ ಶಿಪ್, ಫ್ಯಾಮಿಲಿ ಆಡಿಯನ್ಸ್ ಗೆ ಇಷ್ಟ ಆಗುತ್ತದೆ. ನಿರ್ದೇಶಕರು ಕತೆ ಹೇಳುವಾಗ ನಾನೇ ಪಾತ್ರದೊಳಗೆ ಹೋದಂತಹ ಅನುಭವವಾಗಿತ್ತು ಎಂದರು. ಶಿವರಾಜ್ ಕುಮಾರ್ ನಿರ್ಮಾಪಕರ ಬಗ್ಗೆ ಮಾತನಾಡುತ್ತಾ , ಈ ಸಿನಿಮಾದ ನಿರ್ಮಾಪಕರು ಕಮಲ್ ಹಾಸನ್ ಫಿಲ್ಮ್ ನ ಚಿತ್ರ ನಿರ್ಮಾಣದ ಮೂಲಕ ಚಿತ್ರರಂಗಕ್ಕೆ ಬಂದವರು. ‘ವಿಶ್ವಾಸಂ’ ಎನ್ನುವ ಅಜಿತ್ ನಟನೆಯ ರಿಮೇಕ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಆದರೆ ಒರಿಜಿನಲ್ ಕತೆ ಹೊಂದಿರುವ ಚಿತ್ರ ಮಾಡಿದರೆ ಒಳ್ಳೆಯದಿತ್ತು ಎಂದೆ.ಹಾಗಾಗಿ ಆರ್ ಡಿ ಎಕ್ಸ್ ಕತೆಯೊಂದಿಗೆ ಬಂದರು.ರಾಷ್ಟ ಮಟ್ಟದವರೆಗೆ ತಲುಪುವಂತಹ ಮೆಸೇಜ್ ಈ ಕತೆಯಲ್ಲಿದೆ ಎಂದುವಮ ಶಿವಣ್ಣ ಹೇಳಿದರು.
ತಮಿಳಿನ ಸತ್ಯಜ್ಯೋತಿ ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ.ತುಂಬಾ ವರ್ಷಗಳ ನಂತರ ನಾವು ಇಲ್ಲಿಗೆ ಬಂದಿದ್ದೇವೆ. ತಮಿಳಿನಲ್ಲಿ ನಮಗೆ ಒಳ್ಳೆ ಪ್ರಾಜೆಕ್ಟ್ ಗಳು ಸಿಕ್ಕಿದ್ದರಿಂದ ನಾವು ಅಲ್ಲಿ ಬ್ಯುಸಿ ಆದೆವು. ಎಂದು ಈ ಚಿತ್ರದ ನಿರ್ಮಾಪಕರಾದ ಸೆಂದಿಲ್ ತ್ಯಾಗರಾಜನ್ ಹೇಳಿದರು.ಅವರು ಅವರ ಮಗ ಅರ್ಜುನ್ ತ್ಯಾಗರಾಜನ್ ಅವರಜೊತೆ ಸೇರಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.
ಚಿತ್ರದ ನಿರ್ದೇಶಕ ರವಿ ಅರಸು ಅವರು ಮಾತನಾಡುತ್ತಾ, ಎಪ್ರಿಲ್ 6 ರಿಂದ ಸಿನಿಮಾ ಶೂಟಿಂಗ್ ನಡೆಯಲಿದೆ.ಮಧ್ಯ ಪ್ರದೇಶ, ಮಹಾರಾಷ್ಟ್ರ, ಭೋಪಾಲ್, ನೆಲಮಂಗಲ, ಬೆಂಗಳೂರು ಮೊದಲಾದ ಕಡೆ ಸಿನಿಮಾ ಚಿತ್ರೀಕರಿಸಲು ನಿರ್ಧರಿಸಿದ್ದೇವೆ ಎಂದರು.
ನಿರ್ದೇಶಕ ಉಲ್ಲಾಸ್, ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್, ಛಾಯಾಗ್ರಾಹಕ ಸರವಣನ್ ಅಭಿಮನ್ಯು, ತಮಿಳು ನಟ ಪವನ್ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸ್ ಕಮೀಷನರ್ ಭಾಸ್ಕರ ರಾವ್ , ಪುನೀತ್ ರಾಜ್ಕುಮಾರ್ ಅವರ ಉಪಸ್ಥಿತಿ ಯೊಂದಿಗೆ ಚಿತ್ರದ ಮುಹೂರ್ತವು ಸಾಂಗವಾಗಿ ನೆರವೇರಿತು.
Pingback: sekolah kejaksaan lulusan sma 2020
Pingback: CI-CD
Pingback: Click Here
Pingback: Driveway Repair Zanesville OH