ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೇವಂತಿ’ ಧಾರಾವಾಹಿಗೆ ಹೊಸ ನಾಯಕಿಯಾಗಿ ಮೇಘನಾ ಗೌಡ ಎಂಟ್ರಿ ಮೊದಲು ಸೇವಂತಿಯಾಗಿ ನಟಿಸುತ್ತಿದ್ದ ಪಲ್ಲವಿ ಗೌಡ ನಟನೆಗೆ ಬೈ ಹೇಳಿದ್ದು ಇದೀಗ ಆ ಜಾಗಕ್ಕೆ ಸುರಸುಂದರಿ ಮೇಘನಾ ಗೌಡ ಬರ್ತಿದ್ದಾರೆ
ಈ ಮೊದಲು ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ‘ಅವಳು ಕಥೆಯಾದವಳು’ ಧಾರಾವಾಹಿಯಲ್ಲಿ ನಾಯಕಿ ಮಾನಸಾ ಆಗಿ ನಟಿಸಿ ಮನೆ ಮಾತಾಗಿದ್ದ ಚೆಲುವೆಯೇ ಈ ಮೇಘನಾ ಗೌಡ. ನಂತರ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಮೇಘನಾ ಇದೀಗ ಸೇವಂತಿಯಾಗಿ ಮತ್ತೊಮ್ಮೆ ಕನ್ನಡದ ಕಿರುತೆರೆಗೆ ಮರಳಿದ್ದಾರೆ.
ಫೇಸ್ಬುಕ್ ನಲ್ಲಿ ಮೇಘನಾ ಫೋಟೋ ನೋಡಿದ ನಿರ್ದೇಶಕ ರವಿ ಗರಣಿ ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದ ಒಂದು ಪ್ರಶ್ನೆ ಇಂದು ಮೇಘನಾ ಅವರನ್ನು ಬಣ್ಣದ ಜಗತ್ತಿನಲ್ಲಿ ಮಿನುಗುವಂತೆ ಮಾಡಿದೆ ಉತ್ತರ ಕರ್ನಾಟಕ ಸೊಗಡಿನ ಭಾಷೆಯನ್ನೊಳಗೊಂಡ ‘ಅರಗಿಣಿ’ ಧಾರಾವಾಹಿಯಲ್ಲಿ ನಾಯಕಿ ಖುಷಿ ಆಗಿ ನಟಿಸಿ ಸೈ ಎನಿಸಿಕೊಂಡ ಮೇಘನಾ
ಅರಗಿಣಿ ಧಾರಾವಾಹಿಯ ಮುಗಿದ ನಂತರ ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡು ಸದ್ಯ ಕಿರುತೆರೆಯಲ್ಲಿ ಬ್ಯುಸಿ ಈ ನಟಿ ಇದರ ಜೊತೆಗೆ ಹಿರಿಯ ನಟ ಶಶಿಕುಮಾರ್ ಅವರ ಮಗ ಆದಿತ್ಯ ಶಶಿಕುಮಾರ್ ಅಭಿನಯದ ‘ಸೀತಾಯಾನಂ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮಹಾಪರದೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಾಗಿದ್ದಾರೆ.

MEGHANAGOWDA

Pingback: Digital transformation