ಸಾರಾ ವಜ್ರ ಎನ್ನುವುದು ಚಿತ್ರದ ಹೆಸರು. ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್ ಅವರ ವಜ್ರಗಳು ಕಾದಂಬರಿ ಆಧಾರಿತ ಚಿತ್ರ ಇದು.
ಅನು ಪ್ರಭಾಕರ್ ನಾಯಕಿ. ತುಂಬಾ ಸಮಯದ ಬಳಿಕ ಅನುಪ್ರಭಾಕರ್ ನಾಯಕನಟಿಯಾಗಿ ನಟಿಸುತ್ತಿದ್ದಾರೆ. ವಿ.ಮನೋಹರ್ ಸಂಗೀತ ನೀಡಿದ್ದಾರೆ. ಪತ್ರಕರ್ತ ಬಿ.ಎಂ.ಹನೀಫ್ ಹಾಡೊಂದನ್ನು ಬರೆದಿದ್ದಾರೆ. “ಮಂಗಳೂರಿನ ಬ್ಯಾರಿಗಳ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ ಅದರ ನೈಜತೆ ಚಿತ್ರದಲ್ಲಿ ಎದ್ದು ಕಾಣುತ್ತಿದೆ. ಚಿತ್ರದಲ್ಲಿ ಒಟ್ಟಿಗೆ 9 ಹಾಡುಗಳಿವೆ” ಎಂದು ವಿ.ಮನೋಹರ್ ಹೇಳಿದರು.
ಅನುಪ್ರಭಾಕರ್ ಅವರು ಕಲ್ಪನಾ, ಆರತಿ, ಸರಿತಾ ಅವರ ಸಾಲಿನಲ್ಲಿ ಇರುವ ನಟಿಯಾಗಿ ಕಾಣುತ್ತಾರೆ ಎಂದು ರಮೇಶ್ ಭಟ್ ಹೇಳಿದರು.
“ಆರ್ನಾ ಸಾಧ್ಯ ಎನ್ನುವ ಮಹಿಳಾ ನಿರ್ದೇಶಕಿಯ ಬಳಿಯಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು. ನಾನು ಕವಿತಾ ಲಂಕೇಶ್ ಅವರ ಸಿನಿಮಾದಲ್ಲಿ ನಟಿಸಿದ್ದೇನೆ. ಅರ್ನಾಸಾಧ್ಯ ಅವರ ಕಾರ್ಯವೈಖರಿ ಮತ್ತು ಸೆಲೆಕ್ಟ್ ಮಾಡಿರೋ ಕಾದಂಬರಿ ನನ್ನ ನಟನೆಗೆ ಪ್ರೇರೇಪಿಸಿತು” ಎಂದು ಅನು ಪ್ರಭಾಕರ್ ಹೇಳಿದರು.
ಬಳಿಕ ಮಾತನಾಡಿದ ಆರ್ನಾ ಸಾಧ್ಯ, “ಸಾರಾ ಅವರ ಕೆಲವು ಕಾದಂಬರಿಗಳನ್ನು ಓದಿದ್ದೇನೆ. ನನಗೆ ಇಷ್ಟವಾದ ಕತೆ ಇದು. ಚಿತ್ರದ ರೈಟ್ಸ್ ಪಡೆಯೋಕೆ ಒಂದು ವರ್ಷ ಬೇಕಾಯಿತು. ನಾನು ತುಂಬಾ ಜನ ನಟಿಯರನ್ನು ಭೇಟಿಯಾದೆ, ಆದರೆ ಯಾರೂ ಒಪ್ಪಲಿಲ್ಲ. ಅನು ಮೇಡಂ ಒಪ್ಪಿಕೊಂಡರು. ಮತ್ತು ಚೆನ್ನಾಗಿ ನಟಿಸಿದ್ದಾರೆ ಕೂಡ” ಎಂದರು.
ಬಿಗ್ ಬಾಸ್ ಖ್ಯಾತಿಯ ರೆಹಮಾನ್ ಕಾರ್ಯಕ್ರಮವನ್ನು ನಿರೂಪಿಸಿ, ಈ ಸಿನಿಮಾದಲ್ಲಿ ತಾವು ಕೂಡ ಬದ್ರುದ್ದೀನ್ ಎನ್ನುವ ಪ್ರಮುಖ ಪಾತ್ರ ಮಾಡಿದ್ದೇನೆ ಎಂದರು.
Pingback: sexton dental clinic florence sc white
Pingback: sexual orientation meaning in urdu