ಹೆಣ್ಣಿನ ಬಗ್ಗೆ ಮಾಡಿರುವಂತಹ ಕಲಾತ್ಮಕ ಚಿತ್ರ ಇದು ನಿರ್ದೇಶಕ ಅಶೋಕ್ ಕಡಬ ಹೇಳಿದರು. ಸಿನಿಮಾ ನೋಡಿದವರಿಗೆ ಮಲಯಾಳಿ ಸಿನಿಮಾನೋಡಿದ ಅನುಭವ ಆಗುತ್ತದೆ ಎಂದ ಅವರು ತಮ್ಮ ನಿರ್ದೇಶನದ ‘ಸೀತಮ್ಮ ಬಂದಳು ಸಿರಿ ಮಲ್ಲಿಗೆ ತೊಟ್ಟು’ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಮಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ಮಾಡಿದ್ದೇವೆ. ಅಶೋಕ್ ಕಡಬ ನಿರ್ದೇಶಕರ ಜೊತೆ ಇದು ನನ್ನ ಎರಡನೇ ಚಿತ್ರ. ಕಲಾತ್ಮಕ ರೀತಿಯಲ್ಲಿದೆ ಈ ಸಿನಿಮಾ ಎಂದು ಸಂಹಿತಾ ಹೇಳಿದರು.
ಆಗುಂಬೆ ಘಾಟಿಯಲ್ಲಿ ಚಿತ್ರೀಕರಣ, ಮರಗಳು ಹಾವುಗಳ ಮಧ್ಯೆ ಚಿತ್ರದ ಕತೆ ತೊಂಬತ್ತರ ದಶಕದಲ್ಲಿ ನಡೆದ ಘಟನೆಯಂತೆ ತೋರಿಸಿದ್ದಾರೆ. ಸಿನಿಮಾದಲ್ಲಿ ಮೊಬೈಲ್ ಫೋನ್ ಬಳಕೆ ಇಲ್ಲ. ಕತೆ ತುಂಬಾ ಇಷ್ಟ ಆಯಿತು. ಫ್ರೆಂಡನ್ನು ಹುಡುಕಿಕೊಂಡು ಬರುವವನಿಗೆ ಆತ ಸತ್ತಿದ್ದಾನೆ ಎಂದು ಗೊತ್ತಾಗುತ್ತದೆ ಅದರ ನಂತರ ಏನು ನಡೆಯುತ್ತೆ ಎನ್ನುವುದೇ ಪ್ರಮುಖ ಕತೆ ಎಂದು ರಂಗಭೂಮಿ ನಟ ನಂದೀಶ್ ಹೇಳಿದರು.
ಸ್ನೇಹಿತರ ಒತ್ತಾಯದ ಮೇರೆಗೆ ಸಿನಿಮಾಮಾಡಿದೆ. ಇನ್ನು ಮುಂದೆ ವರ್ಷಕ್ಕೆ ಒಂದು ಸಿನಿಮಾಮಾಡುವ ಯೋಜನೆಇದೆ ಎಂದು ನಿರ್ಮಾಪಕ ಬಿ.ಹನುಮಂತ ರಾಜು ಹೇಳಿದರು.
45 ಥಿಯೇಟರ್ ನಲ್ಲಿ ಫೆ.21ರಂದು ಶುಕ್ರ ಫಿಲಮ್ಸ್ ಮೂಲಕ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರ ತಂಡ ತಿಳಿಸಿದೆ.
Be the first to comment