‘ಎಲ್ಲಿ ನನ್ನ ವಿಳಾಸ’ ಟ್ರೇಲರ್ ಲಾಂಚ್

ಡಿ.ಎಸ್.ಮ್ಯಾಕ್ಸ್ ನ ಎಕ್ಸಿಕ್ಯುಟಿವ್ ಡೈರೆಕ್ಟರ್ ದಯಾನಂದ್ ಅವರು “ಈ ತಂಡ ಉತ್ತರ ಕರ್ನಾಟಕದಿಂದ ಬಂದಿರೋದು. ನಾನು ಅಲ್ಲಿಯವನೇ. ಹಾಗಾಗಿ ಈ ಸಿನಿಮಾ ತಂಡಕ್ಕೆ ಸಪೋರ್ಟ್ ಮಾಡುವುದು ನನ್ನ ಕರ್ತವ್ಯವಾಗಿದೆ ‘ ಎಂದರು.

ರಕ್ಷಣಾ ವೇದಿಕೆಯ ಎಲ್ಲಾ ಕಾರ್ಯಕರ್ತರಿಗೆ ಸಿನಿಮಾವನ್ನು ಪ್ರೋತ್ಸಾಹಿಸಬೇಕೆಂದು ,ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯದರ್ಶಿ ಬಸವರಾಜ್ ಪಡುಕೋಟೆ ಹೇಳಿದರು.

ವಯಸ್ಸಿರುವಾಗ ಯಾರ ಮಾತನ್ನು ಕೇಳದೆ ಇದ್ದರೆ, ಅದರ ನಂತರ ಬದುಕು ಹೇಗಿರುತ್ತದೆ ಎಂದು ಸಿನಿಮಾದ ನಾಯಕ ಅಜಯ್ ಅದಿತ್ ತಮ್ಮ ಪಾತ್ರದ ಸಾರಾಂಶ ದ ಬಗ್ಗೆ ಹೇಳಿದರು.
ವಿಳಾಸ ಕೇಳ್ಕೊಂಡು ಅರಣ್ಯ ಕ್ಕೆ ಯಾಕೆ ಹೋಗುತ್ತಾರೆ ಎಂದು ಚಿತ್ರದ ಟ್ರೇಲರ್ ನೋಡಿದವರಿಗೆ ಕಾಡುವ ಪ್ರಶ್ನೆ. ಉತ್ತರ ಚಿತ್ರದಲ್ಲಿದೆ ಎಂದು ನಾಯಕಿ ಪವಿತ್ರ ನಾಯಕ್ ಹೇಳಿದರು.

ಸ್ನೇಹಿತರ ನಡುವೆ ವಿಮರ್ಶಕನಾಗಿದ್ದೆ. ಸಹಾಯಕ ನಿರ್ದೇಶಕ ನಾಗಿ ಯಾರ ಬಳಿಯೂ ಕೆಲಸ ಮಾಡಿಲ್ಲ. ಈ ಚಿತ್ರದಲ್ಲಿ ತಂದೆ ಮತ್ತು ಮಕ್ಕಳ ಮಧ್ಯೆ ಇರುವ ಪ್ರೀತಿಯ ಬಗ್ಗೆ ಸಂದೇಶ ಇದೆ. ವಿಳಾಸ ಎನ್ನುವುದು ಒಂದು ಪಾತ್ರದ ಹೆಸರು ಎಂದರು. ಸಿನಿಮಾದಲ್ಲಿ ಎರಡು ಕ್ಲೈಮ್ಯಾಕ್ಸ್ ಇದೆ. ಪ್ರೇಕ್ಷಕರಿಗೆ ಗೊಂದಲಗಳಾಗುವುದಿಲ್ಲ . ಸಮಾಜದಲ್ಲಿ ಯುವ ಜನತೆ ದಾರಿ ತಪ್ಪದಂತೆ ಅವರಿಗೆ ಅರಿವಾಗುವ ರೀತಿಯಲ್ಲಿ ಹೇಳಿ ದಾರಿಗೆ ತರುವುದು ಎಂದು ಈ ಚಿತ್ರದ ಉದ್ದೇಶ ಎಂದು ಚಿತ್ರದ ನಿರ್ದೇಶಕರಾದ ಸಾಗರ್ ಗಾವಡೆ ಹೇಳಿದರು.

ನನ್ನದು ನಾಯಕಿಯ ತಂದೆಯ ಪಾತ್ರ. ಚಿತ್ರೀಕರಣದ ಬಳಿಕ ತಾಳಿಕೋಟೆ ಯಲ್ಲಿ ಜನ ಸನ್ಮಾನಿಸಿದ್ದು ಅವರ ಕಲಾಭಿಮಾನವನ್ನು ಮುಚ್ಚಬೇಕು ಎಂದು ಗಣೇಶ್ ಕೇಸರ್ಕರ್ ಹೇಳಿದರು.

ಚಿತ್ರದ ನಿರ್ಮಾಪಕರಾದ ಲತೀಫ್ ಎನ್ ನದಾಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Be the first to comment

Leave a Reply

Your email address will not be published. Required fields are marked *

Translate »
error: Content is protected !!