‘ಸಕೂಚಿ’ ಚಿತ್ರದ ಟ್ರೇಲರ್ ಬಿಡುಗಡೆ

ನಿರ್ದೇಶಕ ಅಶೋಕ್ ಎಸ್ ಅವರ ಚೊಚ್ಚಲ ಚಿತ್ರ ‘ಸಕೂಚಿ’ಯ ಟ್ರೇಲರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

ಅಶೋಕ್ ಅವರು ಮಾತನಾಡಿ, ತಾವು ಕೊಪ್ಪದಲ್ಲಿದ್ದಾಗ ಸಿಡಿಲು ಬಡಿದ ಮನೆಯೊಂದರ ಒಳಗಿನಿಂದ ‘ಸಕೂಚಿ’ ಎನ್ನುವ ಶಬ್ದ ಕೇಳಿಸಿದ್ದನ್ನು ನೆನಪಿಸಿಕೊಂಡರು. ಇದೇ ತರಹ ಶಬ್ದ ವಡ್ಡರಪಾಳ್ಯದಲ್ಲೂ ಕೇಳಿಸಿತ್ತು. ಅದೊಂದು ವಾಮಾಚಾರದ ಶಬ್ದ ಎಂದು ಆಮೇಲೆ ತಿಳಿಯಿತು ಎಂದು ಹೇಳಿದರು. ಅಂಥದೊಂದು ಹೆಸರನ್ನು ಚಿತ್ರಕ್ಕೆ ಇರಿಸಿ ಚಿತ್ರೀಕರಣ ಶುರು ಮಾಡಿದ ಬಳಿಕ ಮಾವ ತೀರಿಕೊಂಡಿದ್ದು, ಆನಂತರ ತಂದೆಯ ಸಾವು ಎಲ್ಲವೂ ವಾಮಾಚಾರದ ಮೇಲೆ ನಂಬಿಕೆ ಮೂಡಿಸುವಂತೆ ಇತ್ತು ಎಂದರು.

ಪದ್ಮಾವತಿ ಸೀರಿಯಲ್ ನಲ್ಲಿ ನಾಯಕನಾಗಿದ್ದ ಸಾಮ್ರಾಟ್ ಈ ಚಿತ್ರದ ನಾಯಕ. ನೃತ್ಯ ಬಾರದ ನನ್ನಲ್ಲಿ ಡ್ಯಾನ್ಸ್ ಮಾಸ್ಟರ್ ಡ್ಯಾನ್ಸ್ ಮಾಡಿಸಿದ್ದಾರೆ ಎಂದು ಅವರು ಖುಷಿ ಪಟ್ಟರು. ಟಗರು ಸಿನಿಮಾ‌ ಖ್ಯಾತಿಯ ಆಂಟನಿ ದಾಸನ್ ಕಂಠದಲ್ಲಿ ಹಾಡು ಸೇರಿದಂತೆ ಟ್ರೇಲರ್ ಬಿಡುಗಡೆ ಮಾಡಲಾಯಿತು.

ನಾನು ಈ ಮೊದಲು ‘ಬೀಟ್ ಗುರು’ ತಂಡದಲ್ಲಿದ್ದೆ. ಮ್ಯೂಸಿಕ್ ಡೈರೆಕ್ಟರ್ ಆಗಿರು ಅನುಭವ ಇದೇ ಮೊದಲು ಎಂದು ಚಿತ್ರದ ಸಂಗೀತ ನಿರ್ದೇಶಕ ಗಣೇಶ್ ಗೋವಿಂದ ಹೇಳಿದರು.

ಡಯಾನ ಮೇರಿ ನಾಯಕಿಯಾಗಿದ್ದು ಮಾಡೆಲಿಂಗ್ ಕ್ಷೇತ್ರದಿಂದ ಬಂದಿದ್ದಾರೆ. “ನನಗಿದು ಮೊದಲ ಸಿನಿಮಾ, ಎಕ್ಸ್ ಪೀರಿಯನ್ಸ್ ಚೆನ್ನಾಗಿತ್ತು” ಎಂದರು.
40 ಜನ ಮಂಗಳಮುಖಿಯರನ್ನು ಬೇರೊಂದು ರೀತಿಯಲ್ಲಿ ತೋರಿಸಲಾಗಿದೆ. ಛಾಯಾಗ್ರಹಣ ಸುಂದರೇಶ್, ನಿರ್ಮಾಪಕ ಮಹಾವೀರ್ ಪ್ರಸಾದ್. ಸಾಹಿತಿ ಸಿ.ವಿ.ಶಿವಶಂಕರ, ನೀನಾಸಂ ಸತೀಶ್, ಕೆ.ಮಂಜು ಉಪಸ್ಥಿತರಿದ್ದರು.

This Article Has 4 Comments
  1. Pingback: 꽃계열 사이트

  2. Pingback: 호두코믹스

  3. Pingback: sex pistols holidays in sun

  4. Pingback: https://www.swissreplica.xyz/

Leave a Reply

Your email address will not be published. Required fields are marked *

Translate »
error: Content is protected !!