ರಾಜ್ ಹೆಸರಲ್ಲಿ ಇದೆಂತಹ ಅಸಹ್ಯ ಪತ್ರಕರ್ತರು ಬಿಕ್ಷುಕರಾ?
ಕನ್ನಡ ಚಿತ್ರರಂಗಕ್ಕೆ ‘ಸಂಚಾರಿ’ಯಾಗಿ ಬಂದು ‘ಜಟಾಯು’ವಾಗಿ ಹಾರಡುವ ಇರಾದೆಯಿದ್ದ ರಾಜ್ ಎಂಬ ನಟನ ರಕ್ಕೆ ಮುರಿದು ಕನ್ನಡಿಗರು ಮೂಲೆಗೆ ಕೂರಿಸಿದ್ದು ನಿಮ್ಗೇ ಗೊತ್ತೇ ಇದೆ. ಆದರೆ, ಕಳೆದುಕೊಂಡನ್ನು ಶತಾಯ ಗತಾಯ ಕಳೆದುಕೊಂಡ ಜಾಗದಲ್ಲೇ ಪಡೆದೇ ತೀರುತ್ತೇನೆ ಎಂದು ನಿರ್ಧಾರ ಮಾಡಿದಂತಿರುವ ರಾಜ್, ರಾಜ್ ಸೂರ್ಯನ್ ಎಂದು ಹೆಸ್ರು ಬದಲಾಯಿಸಿಕೊಂಡು ‘ಮೈ ನೇಮ್ ಈಸ್ ರಾಜ್’ ಚಿತ್ರ ಮೂಲಕ ಮತ್ತೆ ಕನ್ನಡಿಗರ ಎದುರು ಬರಲು ಸಿದ್ಧರಾಗಿದ್ದಾನೆ. :ಟೀಸರ್ ಮತ್ತು ಸಾಂಗ್ಸ್ ಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರ ಹುಬ್ಬೇರಿಸಿರೋ ಸಿನಿಮಾ ಮಾಡುತ್ತೇನೆ’’ ಎಂದು ಹೊರಟ ರಾಜ್ ಟೇಸ್ಟ್ ನೋಡಿ ಕನ್ನಡಿಗರು ವಾಕ್ ಥೂ ಎಂದು ಉಗಿಯುತ್ತಿದ್ದಾರೆ.
ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಸಿದ್ಧವಾಗಿರೋ ಈ ಹಾರರ್ ಸಸ್ಪೆನ್ಸ್ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಅಮೋಘ್ ಎಂಟರ್‌ಪ್ರೈಸಸ್ ಲಾಂಛನದ ಅಡಿಯಲ್ಲಿ, ಪ್ರಭಾಕರ್ ರೆಡ್ಡಿ, ಕಿರಣ್ ರೆಡ್ಡಿ ನಿಮಿಸಿದ್ದಾರೆ. ಈ ಇಬ್ಬರು ರೆಡ್ಡಿಗಳ ರಾಜ್‌ನ ಹುಚ್ಚಾಟಕ್ಕೆ ಬೆಸೆತ್ತು ಅಬೇಸ್ ಆಗಿರುವ ಸುದ್ದಿ ಬಂದಿದೆ. ತಾನು ಉಗಿಸಿಕೊಳ್ಳುವುದಲ್ಲಿ ಸ್ವಲ್ಪ ಶೇರ್ ತೆಗೆದುಕೊಳ್ಳಲಿ ಎಂದು, ನಾಮಾಕಾವಸ್ಥೆಗೆ ಅಶ್ವಿನ್ ಕೃಷ್ಣ ಎಂಬ ‘ತಲೆಯ ಹೊರಗೂ ಖಾಲಿ, ಒಳಗೂ ಖಾಲಿ’ಯಾಗಿರುವನನ್ನು ಡೈರೆಕ್ಟರ್ ಮಾಡಿದ್ದಾನೆ.
ರಾಜ್‌ಗೆ ಆಕರ್ಷಿಕ ಮತ್ತು ನಸ್ರೀನ್ ನಾಯಕಿಯರಾಗಿ ಸಿಕ್ಕಾಪಟ್ಟೆ ಸಾಥ್ ಕೊಟ್ಟಿದ್ದಾರೆ! ಕೊಟ್ಟಿರುವ ಸಾಥ್ ಪ್ರತೀ ಫ್ರೇಮ್‌ನಲ್ಲೂ ‘ಎದ್ದು’ ಕಾಣುತ್ತದೆ. ”ಹಾರರ್, ಸಸ್ಪೆನ್ಸ್, ಆಕ್ಷನ್, ರೊಮ್ಯಾನ್ಸ್ ಹೀಗೆ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಮೈ ನೇಮ್ ಈಸ್ ರಾಜಾ ಸಿನಿಮಾದಲ್ಲಿದೆ’’ ಅನ್ನುವ ರಾಜ್ ಜನರಿಗೆ ಇಲ್ಲಿವರೆಗೆ ತೋರಿಸ್ತೀರೋದು ಬರೀ ಸೊಂಟದ ಕೆಳಗಿನ ಟ್ಯಾಲೆಂಟ್. ಇನ್ನು, ಇಂತಹ ಥರ್ಡ್ ರೇಟೆಡ್ ಚಿತ್ರದ ಟೈಟಲ್‌ನಲ್ಲಿ ರಾಜ್ ಹೆಸರನ್ನು ಸೇರಿರೋದು ನಟಸಾರ್ವಭೌಮ ಡಾ.ರಾಜ್‌ಗೆ ಮಾಡಿದ ಅವಮಾನ.
ಡಾ.ರಾಜ್ ಅವರ ಚಿತ್ರಗಳನ್ನು ನೋಡುವ ರಾಜ್ ಯಾನೆ ರಾಜ್ ಸೂರ್ಯನ್, ಚಿತ್ರ ಗೆಲ್ಲುವುದಕ್ಕಾಗಿ ಅಡ್ಡದಾರಿ ಹಿಡಿದಿರುವುದು ಇತ್ತೀಚಿಗೆ ಇವನು ಯೂಟ್ಯೂಬ್ ಚಾನೆಲ್‌ಗೆ ಒಂದಕ್ಕೆ ಕೊಟ್ಟ ಸಂದರ್ಶನವೇ ಸಾಕ್ಷಿ. ಸಂದರ್ಶನದಲ್ಲಿ ರಾಜ್ ಪ್ರಕರ್ತರನ್ನು ಹೀಯಾಳಿಸಿ ಮಾತನಾಡಿದ್ದಾನೆ. ‘ಪತ್ರಕರ್ತರು ಬರ್ತಾರೆ…. ನಾವಾಕ್ಕಿದ್ದನ್ನು.. ಮಾರ್ಯಾದೆ ಇಲ್ಲದೆ ಮುಕ್ತಾರೆ.. ಐನೂರೋ.. ಸಾವಿರ.. ಕೊಟ್ರೆ.. ಇಸ್ಕೋತ್ತಾರೆ.. ಆದರೆ ಒಂದಕ್ಷರ ಬರೆಯೊಲ್ಲ’’ ಎಂಬರ್ಥದಲ್ಲಿ ಮಾತನಾಡಿದ್ದಾನೆ. ಸೋತು ಸುಣ್ಣವಾಗಿರುವ ರಾಜ್ ಹತಾಶೆಯಲ್ಲಿ ಮಾತಾನಾಡುವ ಮುಂಚೆ ಎರಡು ಬಾರಿ ಯೋಚಿಸಬೇಕಿತ್ತು. ಇಟ್ಟಿಗೆ ಮಾರಿ ಸಿನಿಮಾ ಮಡುತ್ತಿರುವ ರಾಜ್, ತಾನು ಕಟ್ಟಿಕೊಂಡಿರುವ ಭ್ರೆಮೆಯ ಗೋಡೆಯಿಂದ ಹೊರಗೆ ಬರಬೇಕಿದೆ. ಗೆಲುವು ಸಿನಿಮಾ ಮೇಲಿನ ತೀಟೆಯಿಂದ ಬರುವುದಿಲ್ಲ, ಬದಲಾಗಿ ಸಿನಿಮಾವನ್ನು ಒಂದು ತಪಸ್ಸು ಅಂತ ಸ್ವೀಕರಿಸದರೆ ಮಾತ್ರ ಬರುತ್ತದೆ ಅನ್ನವುದನ್ನು ರಾಜ್ ಅರ್ಥ ಮಾಡಿಕೊಳ್ಳಬೇಕಿದೆ.
ರಾಜ್ ಮಾತನಾಡಿರುವ ಕಾಂಟ್ರವರ್ಷಿಯಲ್ ವಿಡಿಯೋ ಲಿಂಕ್-👇
Pingback: What is DevSecOps
Pingback: Balfour Plumbing Giant