‘ದಾರಿ ಯಾವುದಯ್ಯ ವೈಕುಂಠಕೆ’ ಚಿತ್ರದ ಮುಹೂರ್ತ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ಬೆಳಗ್ಗೆ ನಡೆಯಿತು.
‘ಒಬ್ಬ ಕ್ರಿಮಿನಲ್ ವ್ಯಕ್ತಿಯನ್ನು ಭಾವನೆಗಳ ಮೂಲಕ ಹೊಡೆಯುವ ಕತೆ ಇದಾಗಿದ್ದು, ಕ್ರಿಮಿನಲ್ ವ್ಯಕ್ತಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಎನ್ನುವುದು ಎನ್ನುವುದು ನನ್ನ ಪಾತ್ರ” ಎಂದು ಚಿತ್ರದ ನಾಯಕ ವರ್ಧನ್ ತೀರ್ಥಹಳ್ಳಿ ಹೇಳಿದರು. ಹಫ್ತ ಚಿತ್ರದ ನಂತರ ಕೆಲವು ಕತೆಗಳು ಬಂದರೂ ಯಾವುದೂ ಒಪ್ಪಿರಲಿಲ್ಲ. ಈ ಕತೆ ನಿರ್ದೇಶಕ ಸಿದ್ದು ಪೂರ್ಣ ಚಂದ್ರ ಹೇಳಿದ ಕೂಡಲೇ ಒಪ್ಪಿ ಕೊಂಡೆ’ ಎಂದು ವರ್ಧನ್ ಹೇಳಿದರು.
ನಿರ್ದೇಶಕ ಸಿದ್ದು ಪೂರ್ಣ ಚಂದ್ರ ಅವರು ಚಿತ್ರದ 80 ರಷ್ಟು ಚಿತ್ರೀಕರಣ ಸ್ಮಶಾನದಲ್ಲೇ ನಡೆಯುತ್ತೆ. ರಾಮನಗರ ಸ್ಮಶಾನದಲ್ಲಿ ಚಿತ್ರೀಕರಣ ನಡೆಯುತ್ತೆ. ನಾಯಕಿಗೆ ಸ್ಮಶಾನ ಚಿತ್ರೀಕರಣದಲ್ಲಿ ನಟಿಸಲು ಯಾವುದೇ ಅಂಜಿಕೆ ಇರಲಿಲ್ಲ. ಪ್ರೇಕ್ಷಕರಿಗೆ ಮನರಂಜನೆಗೆ ಕೊರತೆ ಇಲ್ಲ ಎಂದರು.
ಅತಿಥಿ ಗಳಾಗಿ ವೀರಣ್ಣ ಮತ್ತಿಕಟ್ಟೆ , ಅಭಯಚಂದ್ರ ಜೈನ್ ಮೊದಲಾದ ಹಿರಿಯ ರಾಜಕಾರಣಿ ಗಳು ಬಂದಿದ್ದರು
Be the first to comment