ಚರಿತ್ರೆ ಸೃಷ್ಟಿಸುವ ಅವತಾರದಲ್ಲಿ ಎಂ.ಬಿ.ಶ್ರೀನಿವಾಸ್ ಇನ್ನೊಮ್ಮೆ ಬಂದಿದ್ದಾರೆ. ಓಲ್ಡ್ ಮಾಂಕ್ ಚಿತ್ರದ ನಿರ್ದೇಶಕ ಮತ್ತು ನಾಯಕ ಎರಡೂ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೇವಲೋಕದಲ್ಲಿ ಶ್ರೀಮನ್ನಾರಾಯಣ ಮತ್ತು ಲಕ್ಷ್ಮೀ ಸರಸ ಸಲ್ಲಾಪದಲ್ಲಿರುವ ಸಂದರ್ಭ. ಅಲ್ಲಿಗೆ ನಾರದ ಮುನಿಗಳ ಪ್ರವೇಶವಾಗುತ್ತದೆ. ತಮಗೆ ರಸಭಂಗ ಉಂಟು ಮಾಡಿದ್ದರಿಂದ ಕೋಪಗೊಂಡ ನಾರಾಯಣನು ನಾರದ ಮುನಿಗೆ ಶಾಪ ನೀಡುತ್ತಾನೆ. ಅದರ ಪ್ರಕಾರ ನಾರದನು ಮನುಷ್ಯರೂಪದಲ್ಲಿ ಭೂಲೋಕದಲ್ಲಿ ಜನಿಸಬೇಕಾಗುತ್ತದೆ. ಕಂಡ ಕಂಡ ಹುಡುಗಿಯರಲ್ಲೆಲ್ಲ ಪ್ರೀತಿ ಹುಟ್ಟಿ ಪಾಡು ಪಡಬೇಕೆಂದು ಶಪಿಸಿಬಿಡುತ್ತಾನೆ. ಅದಕ್ಕೆ ಪರಿಹಾರ ಕೇಳಿದ ನಾರದನಲ್ಲಿ ಯಾವಾಗ ನೀನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುತ್ತೀಯೋ ಅಲ್ಲಿಗೆ ನಿನ್ನ ಶಾಪ ವಿಮೋಚನೆ ಆಗುತ್ತದೆ ಎಂದು ತಿಳಿಸಲಾಗುತ್ತದೆ. ಭೂಮಿಗೆ ಬಂದ ನಾರದ ಎಷ್ಟು ಹುಡುಗಿಯರ ಪ್ರೀತಿಗೆ ಬೀಳುತ್ತಾನೆ, ಮದುವೆ ಆಗುತ್ತದಾ ಎನ್ನುವುದೇ ಚಿತ್ರದ ಕತೆ ಎನ್ನುತ್ತಾರೆ ಶ್ರೀನಿವಾಸ್.
ಚಿತ್ರದ ನಾಯಕಿ ಅದಿತಿ ಮಾತನಾಡಿ ಸನ್ಯಾಸಿ ಎಂದು ಈ ಹೆಸರಿನ ಅರ್ಥ ಅಂದುಕೊಂಡಿದ್ದೆ. ನಂತರ ಇದರ ಅರ್ಥ ತಿಳಿಯಿತು ಎಂದರು. ನನ್ನ ಪಾತ್ರ ಪಕ್ಕದ್ಮನೆ ಹುಡುಗಿ ತರಹ.ಕಾಮಿಡಿ ಇರುವಂತಹ ಚಿತ್ರ. ಎಂದರು.
ಗಣೇಶ್ ಕೇಸರ್ಕರ್ ಖಳನಾಗಿ ಅಭಿನಯಿಸಿದ್ದಾರೆ. ಛಾಯಾಗ್ರಹಣ ಭರತ್ ಪರಶುರಾಮ್, ಪ್ರದೀಪ್ ಶರ್ಮ ನಿರ್ಮಾಣ, ಸಂಗೀತ ಸೌರಭ್ ವೈಭವ್ ನೀಡಲಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಶೇಷಾದ್ರಿ ಪುರದ ಮಹಾಲಕ್ಷ್ಮಿ ಮಂದಿರದಲ್ಲಿ ನಡೆಯಿತು. ಧ್ರುವ ಸರ್ಜಾ ಕ್ಲ್ಯಾಪ್ ಮಾಡಿದರು.
Be the first to comment