‘ಮಾಂಜ್ರಾ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ, ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರು ಆಡಿಯೋ ಸಿ.ಡಿ ಬಿಡುಗಡೆ ಮಾಡಿದರು.
ಚಿತ್ರದ ನಿರ್ದೇಶಕರಾದ ಮುತ್ತುರಾಜ್ ಮಾತನಾಡಿ, “ಚಿತ್ರದ ಟೈಟಲ್ ಅಪರೂಪ ಅನಿಸಬಹುದು. ಇದು ನಮ್ಮ ನದಿಯೊಂದರ ಹೆಸರು. ಅದರೆ ಚಿತ್ರದಲ್ಲಿ ನದಿಯಂತೆ ಏರಿಳಿತ ಹೊಂದಿರುವ ನಿಜ ಘಟನೆಯನ್ನು ಆಧಾರಿಸಿದ ಕತೆ ಇದೆ ಎಂದರು.
ತೆಲುಗಿನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದ ಮುತ್ತುರಾಜ್ ರೆಡ್ಡಿ ನಿರ್ದೇಶನದ ಮೊದಲ ಚಿತ್ರ ಇದಾಗಿದ್ದು, ನೈಜ ಘಟನೆ ಯನ್ನು ತರುವುದು ಕಷ್ಟಕರವಾಗಿತ್ತು ಎಂದರು.
ಮೂಲತಃ ಬೆಳಗಾವಿಯವರಾದ ಶಂಕರ್ ಎನ್ನುವವರ ಜೀವನದ ನೈಜ ಘಟನೆ ಇದಾಗಿದ್ದು, ಪ್ರೀತಿಸಿ ಮದುವೆಯಾದ ಹುಡುಗಿಯ ಸಾವು ಅವರನ್ನು ಇಂದು ಮನೋರೋಗಿ ಮಾಡಿದೆ. ಆ ನಂತರ ಇಲ್ಲಿಯವರೆಗೆ ಅವರು ಮಾತನಾಡುತ್ತಿಲ್ಲ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಘಟನೆಗೆ ಸಿನಿಮೀಯ ಬದಲಾವಣೆ ನೀಡಿ ಚಿತ್ರ ಮಾಡಿದ್ದಾರೆ ನಿರ್ದೇಶಕರು.
ಚಿತ್ರದ ನಾಯಕಿಗೆ ಶಂಕರ್ ನ ನಿಜವಾದ ಪ್ರೇಯಸಿಯ ಹೆಸರಿಟ್ಟಿದ್ದಾರೆ. ಪದ್ಮ ಎನ್ನುವ ಆ ಹುಡುಗಿ ಇದ್ದ ಮನೆಯಲ್ಲಿ ಯೇ ಚಿತ್ರೀಕರಣ ಮಾಡಿದ್ದಾರೆ. ನಾಯಕಿ ಯಾಗಿ ಅಪೂರ್ವ ಎನ್ನುವ ನವನಟಿ ಅಭಿನಯಿಸಿದ್ದು, ಮರಾಠಿ ಪಾತ್ರವಾಗಿದ್ದರಿಂದ ಸಿನಿಮಾದಲ್ಲಿ 20% ಮರಾಠಿ ಭಾಷೆಯನ್ನು ಬಳಸಲಾಗಿದೆ.
ನಾಯಕನಾಗಿ ರೈಸಿಂಗ್ ಸ್ಟಾರ್ ರಂಜೀತ್ ಸಿಂಗ್ ನಟಿಸಿದ್ದಾರೆ.
ಸಮಾರಂಭದಲ್ಲಿ ಚಿತ್ರಕ್ಕೆ ಸ್ಪೂರ್ತಿ ಯಾದ ಪ್ರೇಮಿ ಶಂಕರ್, ನವನಟಿ ನಾಯಕಿ ಪಿ.ಅಪೂರ್ವ, ಲಹರಿ ಸಂಸ್ಥೆಯ ಲಹರಿ ವೇಲು ಅವರು ಉಪಸ್ಥಿತರಿದ್ದರು.
Be the first to comment