೧೨ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ

ಹನ್ನೆರಡನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಬೆಂಗಳೂರಿನಲ್ಲಿ ನಡೆಯಲಿದೆ. ಉತ್ಸವದ ಉದ್ಘಾಟನೆ ಫೆಬ್ರವರಿ ೨೬, ೨೦೨೦ ರಂದು ಬುಧವಾರ ಹಾಗೂ ಪ್ರಶಸ್ತಿ ವಿತರಣೆ ಮತ್ತು ಸಮಾರೋಪ ಸಮಾರಂಭ ಮಾರ್ಚ್ ೪ ರಂದು ಗುರುವಾರ ನಡೆಯಲಿದೆ.  ಉದ್ಘಾಟನಾ ಸಮಾರಂಭವು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರಾಷ್ಟಿಯ, ಅಂತರರಾಷ್ಟಿಯ ಚಲನಚಿತ್ರ ಪ್ರತಿನಿಧಿಗಳು, ಚಲನಚಿತ್ರ ನಿರ್ಮಾಪಕರು ಮತ್ತಿತರ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ.

ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದ್ದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ವಜುಭಾಯ್ ವಾಲಾ ಅವರು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ವಿದೇಶಿ ಪ್ರತಿನಿಧಿಗಳ ಸಮೂಹದಲ್ಲಿ ಚಲನಚಿತ್ರ ನಿರ್ಮಾಪಕರ ಅಂತಾರಾಷ್ಟ್ರೀಯ ಮಹಾ ಒಕ್ಕೂಟದ ಪ್ರತಿನಿಧಿ ಚಿತ್ರೋತ್ಸವ ನಿರ್ದೇಶಕಿ ಫ್ರಾನ್ಸಿನ ಫ್ಲೋರೆನ್ಸ್ ಗಿರೊಟ್, ಎಸ್ತೋನಿಯಾದ ಚಿತ್ರ ನಿರ್ದೇಶಕ ತಾನೆಲ್ ಟೂಮ್, ಆಸ್ಟೆಲಿಯಾದ ಮೆಲ್ಬೋರ್ನ್ ಅಂತಾರಾಷ್ಟ್ರೀಯ ಚಿತ್ರೋತ್ಸವದ ಚಿತ್ರಕಥಾ ಸಲಹೆಗಾರ್ತಿ/ಸಂಕಲನಗಾರ್ತಿ ಕ್ಲೇರ್ ಡೊಬಿನ್, ಇಂಡೋನೇಶ್ಯಾದ ನಿರ್ದೇಶಕ ರೇಜಾ ಫಹ್ರಿಯಾನ್ಸ್ಯಾ, ತಜಕಿಸ್ತಾನದ ಶರಾಫತ್ ಅರಬೊವ, ಇಟಲಿಯಿಂದ ಇಟೆಲೊ ಸ್ಪಿನೆಲ್ಲಿ, ಇಸ್ರೇಲ್‌ನಿಂದ ಇವ್ಗೆನಿ ರುಮಾನ್, ಚಲನಚಿತ್ರ ವಿಮರ್ಶಕರಾದ, ಆಸ್ಟಿಯಾದ ಆಂಡ್ರಿಯಾಸ್ ಅಂಗರ್ಬೊಯೆಕ್, ಇಟಲಿ/ಸ್ಲೊವೇನಿಯಾದಿಂದ ಗಿಯೊವಾನ್ನಿ ವಿಮರ್ಕಟಿ, ಇಂಡೊನೇಶ್ಯಾದ ಚಿತ್ರ ನಿರ್ಮಾಪಕ ಮತ್ತು ಚಿತ್ರೋತ್ಸವ ಕಾರ್ಯಕ್ರಮ ಯೋಜಕ ಜಾನ್ ಬದಾಲು, ರಶ್ಯಾದಿಂದ ಚಿತ್ರೋತ್ಸವ ಕಾರ್ಯಕ್ರಮ ಯೋಜಕಿ ಸಾಶಾ ಅಹಮದ್‌ಸಚಿನ, ಅಂತರರಾಷ್ಟಿಯ ತೀರ್ಪುಗಾರ ಸಮನ್ವಯಕಾರ ಶ್ರೀಲಂಕಾದ ಆಶ್ಲೆ ರತ್ನವಿಭೂಷಣ, ಹಾಗೂ ಏಶ್ಯಾ ದ ಸ್ಪರ್ಧೆಯಲ್ಲಿರುವ ಪಿಲಿಪೀನ್ಸ್, ಸಿಂಗಾಪುರ, ಹಾಂಗ್‌ಕಾಗ್, ಇಂಡೋನೇಶ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಕೊರಿಯ, ಕಜಕಿಸ್ತಾನ ದೇಶಗಳಿಂದ ಸಂಬAಧಪಟ್ಟ ನಿರ್ಮಾಪಕರು, ನಿರ್ದೇಶಕರು ಸೇರಿದ್ದಾರೆ.

ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‌ನ ಪಿವಿಆರ್ ಸಿನಿಮಾದ ೧೧ ಪರದೆಗಳು, ರಾಜಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರಮಂದಿರ, ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿರುವ ರಾಜ್ ಭವನ, ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಚಿತ್ರಸಮಾಜದಲ್ಲಿ ಪ್ರತಿನಿಧಿಗಳಿಗೆ ಫೆಬ್ರವರಿ ೨೭, ೨೦೧೯ ರಿಂದ ಪ್ರದರ್ಶನ ಆರಂಭವಾಗಲಿದೆ.

ಉತ್ಸವದ ವಿವಿಧ ವಿಭಾಗಗಳಲ್ಲಿ ೬೦ ರಾಷ್ಟ ಸುಮಾರು ೨೦೦ ಚಿತ್ರಗಳು ಪ್ರದರ್ಶನವಾಗಲಿವೆ.
ಸಿನಿಮೋತ್ಸವದ ಪ್ರಮುಖ ಅಂಶಗಳು:
೧. ಸ್ಪರ್ಧಾ ವಿಭಾಗ (Competition Section)
• ಏಶ್ಯಾ ಚಿತ್ರಗಳ ಸ್ಪರ್ಧೆ
• ಭಾರತೀಯ ಚಿತ್ರಗಳ ಸ್ಪರ್ಧೆ
• ಕನ್ನಡ ಚಿತ್ರಗಳ ಸ್ಪರ್ಧೆ
• ಕನ್ನಡ ಜನಪ್ರಿಯ ಮನೋರಂಜನಾ ಚಿತ್ರಗಳ ಸ್ಪರ್ಧೆ

(ಸ್ಪರ್ಧೆಯಲ್ಲಿರುವ ಚಿತ್ರಗಳ ವಿವರ ಉತ್ಸವದ ಜಾಲತಾಣ www.biffes.in  ನಲ್ಲಿ ಫೆಬ್ರವರಿ ೧೫ರಂದು ಲಭ್ಯ)
೨. ಸಮಕಾಲೀನ ವಿಶ್ವ ಸಿನಿಮಾ (www.biffes.in)
೩. ದೇಶ ಕೇಂದ್ರಿತ (Country Focus):
ಪಿಲಿಪೀನ್ಸ್, ಜರ್ಮನಿ ಮತ್ತು ಆಸ್ಟ್ರೇಲಿಯ ಚಿತ್ರಗಳು
೪. ಪುನರಾವಲೋಕನ (Retrospective)
• ಆಂದ್ರೆ ತಾರ್ಕೊವ್‌ಸ್ಕಿ – ರಶ್ಯಾದ ಹೆಸರಾಂತ ನಿರ್ದೇಶಕ, ಸಿನಿಶಾಸ್ತ್ರಜ್ಞ
• ಅನಂತನಾಗ್ – ಭಾರತದ ಬಹುಭಾಷಾ ಕಲಾವಿದ

೫. ದೇಶದಲ್ಲಿ ಹೆಚ್ಚು ಪರಿಚಿತವಲ್ಲದ ಉಪಭಾಷೆಗಳಾದ ತುಳು, ಬಂಜಾರ, ಕೊಡವ, ಕೊಂಕಣಿ (ಕರ್ನಾಟಕ), ಪನಿಯ(ಕೇರಳ), ಇರುಳ(ತಮಿಳುನಾಡು), ಖಾಸಿ, ಪಂಗ್ಚನ್ಪಾ (ಅಸ್ಸಾಂ), ಭಾಷೆಗಳಲ್ಲಿ ತಯಾರಾದ ಚಿತ್ರಗಳ ವಿಶೇಷ ವಿಭಾಗ. ಕೇಳರಿಯದ ಅನೂಹ್ಯ ಭಾರತ.(Unsung Incredible India)
೬. ಸಿನಿಮಾದ ೧೨೫ನೇ ವರ್ಷದ ನೆನಪಿಗೆ ವಿಶ್ವ ಸಿನಿಲೋಕದ ಖ್ಯಾತನಾಮರಾದ ರಶ್ಯಾದ ಐಸೆನ್‌ಸ್ಟೆನ್, ಅಮೆರಿಕದ ಚಾರ್ಲಿ ಚಾಪ್ಲಿನ್, ಬಸ್ಟರ್ ಕೀಟನ್, ಜಪಾನ್ನ ಅಕಿರಾ ಕುರಸೋವಾ, ಇಂಗ್ಮರ್ ಬರ್ಗ್ಮನ್, ಸ್ವೀಡನ್, , ವಿಟ್ಟೋರಿಯೊ ದಿ ಸಿಕಾ ,ಇಟಲಿ, ಜೀನ್ ಲೂಕ್ ಗೊದಾರ್ಡ್, ಫ್ರಾನ್ಸ್ ಮತ್ತು ಭಾರತದ ಸತ್ಯಜಿತ್ ರೇ ಅವರ ಮಹಾನ್ ಚಿತ್ರಗಳ ಪ್ರದರ್ಶನ.
೭. ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾ ವಿಷಯಾಧಾರಿತವಾದ ವಿಭಾಗದಲ್ಲಿ ತ್ಯಾಗರಾಜರು, ಪುರಂದರದಾಸರು, ಸ್ವಾತಿ ತಿರುನಾಳ್, ತಾನಸೇನ್, ಮೀರಾ ಸೇರಿದಂತೆ ಸಂಗೀತಪ್ರಧಾನ ಚಿತ್ರಗಳು.
• ಏಷ್ಯಾ ವಿಭಾಗ ಮತ್ತು ವಿಶ್ವ ಸಿನಿಮಾ ವಿಭಾಗಗಳಿಗೆ ಆಯ್ಕೆಯಾಗಿರುವ ಬಹುತೇಕ ಚಿತ್ರಗಳು ಬರ್ಲಿನ್, ಕಾನ್, ಟೊರೆಂಟೊ, ಗೋವಾ, ಮುಂಬೈ, ಕೇರಳ ಸೇರಿದಂತೆ ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡವುಗಳು.

• ಯುಕೆಯ ಕೆನ್ ಲೋಚ್, ಗ್ರೀಸ್ನ ಕೊಸ್ಟಾ ಗವರಸ್, ಪೋಲೆಂಡ್‌ನ ರೊಮನ್ ಪೊಲಾನಿಸ್ಕಿ, ಸ್ವೀಡನ್‌ನ ರಾಯ್ ಆಂಡರ್ಸನ್, ಇಸ್ರೇಲ್/ಫ್ರಾನ್ಸ್ ನ ಎಲಿ ಸುಲೇಮಾನ್, ಬೆಲ್ಜಿಯಂನ ಡಾರ್ಡನ್ ಸೋದರರು, ಕೊರಿಯದ ಬೊಂಗ್ ಜೂನ್ ಹೊ, ಸ್ಪೆöÊನ್‌ನ ಅಲ್ಮೊಡವರ್, ಜಪಾನಿನ ತಕಾಶಿ ಮೀಕಿ, ಬ್ರೆಜಿಲ್‌ನ ಫೆರ್ನಾಂಡೊ ಮಿರೆಲ್ಲೆಸ್, ಪೋರ್ಚುಗಲ್‌ನ ಪೆಡ್ರೊ ಕೊಸ್ಟಾ, ಟಿಬೆಟ್ ನ ಪೆಮ ಸೆಡನ್, ತೆರೆನ್ಸ್ ಮಲಿಕ್ ಮುಂತಾದ ವಿಶ್ವಖ್ಯಾತ ನಿರ್ದೇಶಕರ ಚಿತ್ರಗಳ ಪ್ರದರ್ಶನ.
• ಅಂತಾರಾಷ್ಟಿಯ ಚಲನಚಿತ್ರ ವಿಮರ್ಶಕರ ಒಕ್ಕೂಟ(FIPRESCI) ಪ್ರಶಸ್ತಿವಿಜೇತ ಹಾಗೂ ಏಷ್ಯಾ ಚಲನಚಿತ್ರ ಪ್ರಚಾರ ಜಾಲ (ಓಇಖಿPಂಅ) ಪ್ರಶಸ್ತಿವಿಜೇತ ಆಯ್ದ ಚಿತ್ರಗಳ ಪ್ರದರ್ಶನ ಈ ಉತ್ಸವದ ವಿಶೇಷತೆಗಳಲ್ಲಿ ಸೇರಿದೆ.
• ಆತ್ಮಕಥೆ – ವ್ಯಕ್ತಿಚಿತ್ರಗಳು (Bio –pics) : ಈ ವಿಭಾಗದಲ್ಲಿ ಚಲನಚಿತ್ರ ನಿರ್ಮಾತೃಗಳು, ಸಾಹಿತಿಗಳು, ಕಲಾವಿದರು, ಸಂಗೀತಗಾರರು ಮುಂತಾದವರ ಕುರಿತ ಚಿತ್ರಗಳ ಪ್ರದರ್ಶನವಿರುತ್ತದೆ. ರಶ್ಯಾದ ಹೆಸರಾಂತ ನಿರ್ದೇಶಕ ಆಂದ್ರೆ ತಾರ್ಕೊವ್‌ಸ್ಕಿ ಅವರ ನಿರ್ದೇಶನದ, ರಶ್ಯಾದ ಚಿತ್ರಕಲಾವಿದ ಆಂದ್ರೆ ರುಬ್ಲೇವ ಕುರಿತ ಚಿತ್ರ, ಚಿಂತಕ ಸಂಗೀತಜ್ಞ ರಾಜೀವ್ ತಾರಾನಾಥ್, ಸಂಗೀತಗಾರ್ತಿ, ಕಲಾವಿದೆ ಹೆಲೆನ್ ರೆಡ್ಡಿ, ಖ್ಯಾತ ಕಾದಂಬರಿಕಾರ ಎಸ್ ಎಲ್.ಭೈರಪ್ಪ, ಕನ್ನಡ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಖ್ಯಾತ ಛಾಯಾಗ್ರಾಹಕ, ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ ಮೂರ್ತಿ ಅವರ ವ್ಯಕ್ತಿಚಿತ್ರಗಳಿರುತ್ತವೆ.
• ಕೆನಡಾ, ಇಸ್ರೇಲ್ ಮತ್ತು ಆಸ್ಟೆçÃಲಿಯಾ ದೇಶಗಳ ರಾಯಭಾರಿಗಳು, ಗೋಥೆ ಇನ್ಸ್ಟಿಟ್ಯೂಟ್/ಮ್ಯಾಕ್ಸ್ಮುಲ್ಲರ್ ಭವನ ಮುಂತಾದ ವಿದೇಶಿ ಸಾಂಸ್ಕೃತಿಕ ಸಂಘಟನೆಗಳು ಚಿತ್ರೋತ್ಸವಕ್ಕೆ ತಮ್ಮ ಸಹಕಾರವನ್ನು ಪ್ರಕಟಿಸಿವೆ.
ಆಹ್ವಾನಿತ ಪ್ರತಿನಿಧಿಗಳು
• ಆಹ್ವಾನಿತ ವಿದೇಶಿ ಪ್ರತಿನಿಧಿಗಳಲ್ಲಿ ಹೆಸರಾಂತ ಚಲನಚಿತ್ರ ನಿರ್ಮಾತೃಗಳು, ಪತ್ರಕರ್ತರು, ವಿಮರ್ಶಕರು, ಚಲನಚಿತ್ರೋತ್ಸವ ಕಾರ್ಯಕ್ರಮ ನಿಯೋಜಕರು, ಶಿಕ್ಷಣವೇತ್ತರು ಸೇರಿದ್ದಾರೆ. ಭಾರತದಲ್ಲಿರುವ ವಿದೇಶಿ ರಾಯಭಾರ ಕಚೇರಿಗಳ ಅಧಿಕಾರಿಗಳು ಹಾಗೂ ವಿದೇಶಿ ಸಾಂಸ್ಕೃತಿಕ ಸಂಘಟನೆಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
• ಭಾರತದಿಂದ ಆಹ್ವಾನಿತರಾದ ಪ್ರತಿನಿಧಿಗಳಲ್ಲಿ ಚಲನಚಿತ್ರ ನಿರ್ಮಾತೃಗಳು, ಚಿತ್ರೋತ್ಸವ ಸಂಘಟಕರು/ಕಾರ್ಯಕ್ರಮ ನಿಯೋಜಕರು ಹಾಗೂ ಬಂಗಾಲ, ಮಹಾರಾಷ್ಟç, ರಾಜಸ್ಥಾನ, ತೆಲಂಗಾನ, ದೆಹಲಿ, ಕೇರಳ, ತಮಿಳುನಾಡು ಮತ್ತು ಈಶಾನ್ಯ ರಾಜ್ಯಗಳ ಪತ್ರಕರ್ತರು ಮತ್ತು ವಿಮರ್ಶಕರು ಸೇರಿದ್ದಾರೆ.

ಕಾರ್ಯಾಗಾರ, ಸಂವಾದ ಮತ್ತು ತಜ್ಞರಿಂದ ಉಪನ್ಯಾಸ
ಚಿತ್ರೋತ್ಸವ ನಡೆಯುವ ದಿನಗಳಲ್ಲಿ ಚಲನಚಿತ್ರ ಮಾಧ್ಯಮ ಮತ್ತು ಉದ್ಯಮ ಸಂಬಧಪಟ್ಟತೆ ತಜ್ಞರಿಂದ ಕಾರ್ಯಾಗಾರ, ಸಂವಾದ ಮತ್ತು ಉಪನ್ಯಾಸಗಳು ನಡೆಯಲಿವೆ. ಈ ವರ್ಷ ನಿಯೋಜಿತ ಕಾರ್ಯಕ್ರಮಗಳು ಹೀಗಿವೆ :
೧. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ದಿ.ವಿ.ಕೆ.ಮೂರ್ತಿ ಸ್ಮಾರಕ ವಿಶೇಷ ಉಪನ್ಯಾಸ, ಹೆಸರಾಂತ ಛಾಯಾಗ್ರಾಹಕರಿಂದ
೨. ಎರಡು ದಿನಗಳ ಚಿತ್ರಕಥೆ ರಚನೆಯ ಕಾರ್ಯಾಗಾರವನ್ನು ಆಸ್ಟೆಲಿಯಾದ ಚಿತ್ರಕಥಾ ಸಲಹೆಗಾರ್ತಿ/ಸಂಕಲನಗಾರ್ತಿ, ಕ್ಲೇರ್ ಡೊಬಿನ್ ನಡೆಸಿಕೊಡುತ್ತಾರೆ.
೩. ಕಾನ್ಫಿಡಾ, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ ಈ ಬಾರಿ ನಿರ್ದೇಶಕರ ಫಿಲಂ ಬಜಾರ್ ನಡೆಸಲು ಮುಂದೆ ಬಂದಿದ್ದು, ಅಲ್ಲಿ ಚಲನಚಿತ್ರ ತಂತ್ರಜ್ಞಾನಕ್ಕೆ ಸಂಬAಧಪಟ್ಟ ಈ ಕೆಳಗಿನ ವಿಷಯಗಳ ಚರ್ಚೆ, ಕಾರ್ಯಾಗಾರಗಳು ನಡೆಯಲಿವೆ.
• ವೆಬ್ ಸೀರೀಸ್ ರಚನೆ ಮತ್ತುಸಂಚಿಕೆಗಳ ನಿರ್ವಹಣೆ
• ಚಿತ್ರ ನಿರ್ಮಾಣ :ಉದ್ಯಮಶೀಲ ವಿಧಾನ
• ಚಿತ್ರನಿರ್ಮಾಪಕರಿಗೆ ಕಾನೂನು ನೆರವು : ವಿತರಣೆ, ಪೈರೆಸಿ ತಡೆ ಮತ್ತು ಕೃತಿಸ್ವಾಮ್ಯ ರಕ್ಷಣೆ
• ಸೆನ್ಸಾರ್ ಮತ್ತು ಪ್ರಾದೇಶಿಕ ಭಾವನೆಗಳು – ನ್ಯಾಯವಾದಿಗಳು ಮತ್ತು ಕಾನೂನು ತಜ್ಞರ ಜೊತೆ ಚರ್ಚೆ.
• ಕೃತಕ ಬುದ್ಧಿಮತ್ತೆ, ಸ್ವತಂತ್ರ ಚಿತ್ರನಿರ್ಮಾಣದ ಕೊನೆಯೇ?
• ಗ್ರೀನ್ ಚಿತ್ರನಿರ್ಮಾಣ
• ಅಂತರರಾಷ್ಟ್ರೀಯ ಸಹ ನಿರ್ಮಾಣ : ನಿರ್ಮಾಪಕರ ಯಶೋಪಥ

೪. ಸಿನಿಮಾ ನಿರ್ಮಾಣ/ವಿತರಣೆಯ ತಾಂತ್ರಿಕ ಸಮಸ್ಯೆಗಳ ಕುರಿತಂತೆ ಪರ್ಪಲ್ ಏರೋ ಸಹಯೋಗದಲ್ಲಿ ಸಂವಾದ
• ಕಥಾಚಿತ್ರಗಳಿಗೆ ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆಯ ಯೋಜನೆ –
• ದ ಲಯನ್ ಕಿಂಗ್ ಹಾಲಿವುಡ್ ಚಿತ್ರದ ನಿರ್ಮಾಣದಲ್ಲಿ ವಿಎಫ್ಎಕ್ಸ್
• ಡಿಜಿಟಲ್ ಸ್ಟ್ರೀಮಿಂಗ್ ಭವಿಷ್ಯ – ಒಟಿಟಿ ದೃಷ್ಟಿ

೫. ಬೆಂಗಳೂರು ಚಿತ್ರಮಂದಿರಗಳ ಬದಲಾಗುತ್ತಿರುವ ಭೂವಿನ್ಯಾಸ : ಬೆಂಗಳೂರು ಇತಿಹಾಸಕಾರ ಸುರೇಶ್ ಮೂನ ಅವರಿಂದ ಐತಿಹಾಸಿಕ ನೋಟ
೬. ಚಿತ್ರೋತ್ಸವದಲ್ಲಿ ಅತಿಥಿಗಳಾಗಿ ಆಗಮಿಸಿದ ಹಿಂದಿ ಚಿತ್ರರಂಗದ ಗಣ್ಯರ ಜೊತೆ ಸಂವಾದ
೭. ಲಿಂಗ ಸಂವೇದನೆ ಕುರಿತು ಸಂವಾದ : ಮಹಿಳಾ ಸಾಹಿತಿ ಮತ್ತು ಪತ್ರಕರ್ತರ ಬಳಗ ಹಿತೈಷಿಣಿ ಆಯೋಜನೆ
೮. ಚಿತ್ರೋತ್ಸವಗಳ ವಸ್ತು/ಚಿತ್ರಗಳ ಆಯ್ಕೆಯಲ್ಲಿ ವಿಮರ್ಶಕರ ಪಾತ್ರ ಕುರಿತಂತೆ ವಿಶ್ವ ಚಲನಚಿತ್ರ ವಿಮರ್ಶಕರ ಸಂಘಟನೆ (ಫಿಪ್ರಸ್ಕಿ)ಯಿಂದ ವಿಚಾರ ಸಂಕಿರಣ
೯. ಸಿನಿಮಾ ೧೨೫ ಕುರಿತ ವಿಶೇಷ ಉಪನ್ಯಾಸ
೧೦. ಭಾರತೀಯ ಚಿತ್ರಸಮಾಜಗಳ ಒಕ್ಕೂಟದ ದಕ್ಷಿಣ ವಲಯ ನಡೆಸಿಕೊಡುವ ಮುಕ್ತ ವೇದಿಕೆ’
– ಈ ಎಲ್ಲ ಕಾರ್ಯಕ್ರಮಗಳು ಪಿವಿಆರ್ ಸಿನಿಮಾಸ್‌ನ ಒಂದು ಪ್ರದರ್ಶನ ಮಂದಿರದಲ್ಲಿ ನಡೆಯಲಿದೆ.
ಪ್ರತಿನಿಧಿ ನೋಂದಣಿ :

ಚಿತ್ರೋತ್ಸವದ ಜಾಲತಾಣದಲ್ಲಿ ಪ್ರತಿನಿಧಿಗಳ ನೋಂದಣಿ ಕಾರ್ಯ ಆರಂಭವಾಗಿದೆ. ಈ ಬಾರಿ ಆನ್ಲೈನ್ ಮೂಲಕ ಮಾತ್ರ ನೋಂದಣಿ ಇದ್ದು, ಈ ಹೊಣೆಯನ್ನು bookmyshow.com ವಹಿಸಿಕೊಂಡಿದೆ. ಆಸಕ್ತರು ಚಿತ್ರೋತ್ಸವದ ಜಾಲತಾಣಕ್ಕೆ (biffes.in) ಹೋಗಿ ಪ್ರತಿನಿಧಿಯಾಗಬಹುದು. ಪ್ರತಿನಿಧಿಗಳು ತಮ್ಮ ಕಾರ್ಡನ್ನು ಫೆಬ್ರವರಿ ೨೨ರ ನಂತರ ಈ ಕೆಳಗಿನ ಜಾಗಗಳಲ್ಲಿ ಪಡೆಯಬಹುದು
೧. ಚಲನಚಿತ್ರ ಅಕಾಡೆಮಿ ಕಾರ್ಯಾಲಯ,
ಕನ್ನಡ ಚಲನಚಿತ್ರ ಅಮೃತೋತ್ಸವ ಭವನ,
ವರ್ತುಲ ರಸ್ತೆ, ನಂದಿನಿ ಬಡಾವಣೆ, ಬೆಂಗಳೂರು -೫೬೦೦೯೬,

೨. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,
ಇನ್‌ಫೆಂಟ್ರಿ ರಸ್ತೆ, ಬೆಂಗಳೂರು ೫೬೦೦೦೧
೩. ಸುಚಿತ್ರಾ ಫಿಲಂ ಸೊಸೈಟಿ,
೯ನೇ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ
ಬೆಂಗಳೂರು -೫೬೦೦೭೦ ಇಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಸುವಾಗಲೇ, ತಾವು ಕಾರ್ಡನ್ನು ಪಡೆಯುವ ಸ್ಥಳವನ್ನು ನಮೂದಿಸಿರಬೇಕು.
ಚಿತ್ರೋತ್ಸವಕ್ಕೆ ಪ್ರತಿನಿಧಿ ಶುಲ್ಕ : ಸಾರ್ವಜನಿಕರಿಗೆ ರೂ.೮೦೦/-,
ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಚಿತ್ರಸಮಾಜಗಳ ಸದಸ್ಯರಿಗೆ ಹಾಗೂ ಹಿರಿಯ ನಾಗರಿಕರಿಗೆ ರೂ.೪೦೦/
ಪ್ರತಿನಿಧಿಗಳ ನೋಂದಣಿ ನೆರವಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಃ ೦೨೨೬೧೪೪೫೦೫೦, ಇ-ಮೇಲ್ :support@bookmyshow.com

*************@bcinemas.in

This Article Has 4 Comments
  1. Pingback: electrician banks

  2. Pingback: Devops

  3. Pingback: Fletcher plumbing contractor

  4. Pingback: youtube video sexyback

Leave a Reply

Your email address will not be published. Required fields are marked *

Translate »
error: Content is protected !!