ನವರತ್ನ ಚಿತ್ರದ ನಿರ್ದೇಶಕ ಹಾಗೂ ನಾಯಕರು ಕೂಡಾ ಆದ ಪ್ರತಾಪ್ ರಾಜ್ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಾ, “ಈ ಶೀರ್ಷಿಕೆ ಗೂ ಕತೆಗೂ ಸಂಬಂಧವಿದೆ. ಆದರೆ ನವರತ್ನ ಎನ್ನುವುದು ನೇರ ಅರ್ಥವಲ್ಲ. ಏನು ಎಂದು ಸರಿಯಾಗಿ ಹೇಳಿದವರಿಗೆ ಬಹುಮಾನ ಕೊಡುತ್ತೇವೆ” ಎಂದರು.
ಜನ ಥಿಯೇಟರ್ ಗೆ ಬರುತ್ತಿಲ್ಲ ಎನ್ನುವ ಆಪಾದನೆಗಳ ನಡುವೆ ಇಂಥ ಗಿಮಿಕ್ ಗಳ ಅಗತ್ಯ ಖಂಡಿತವಾಗಿ ಇದೆ! “ನಾವು ಚಿತ್ರೀಕರಣ ವನ್ನು ಶೃಂಗೇರಿಯ ಕಿಗ್ಗ ಮತ್ತು ಇಂಡೋನೇಷ್ಯದಲ್ಲಿ ಚಿತ್ರೀಕರಿಸಿದ್ದೇವೆ. ಇದೊಂದು ಫಾರೆಸ್ಟ್ ಜರ್ನಿಯ ಕತೆ. ಶೂಟಿಂಗ್ ಸಮಯದಲ್ಲಿ ತುಂಬಾ ಚಾಲೆಂಜಸ್ ಫೇಸ್ ಮಾಡಿದ್ದೇವೆ. ಜಿಗಣೆಗಳ ಕಾಟ ತುಂಬಾನೇ ಇತ್ತು. ಹಾಗಾಗಿ ಬೆವರಲ್ಲ ರಕ್ತ ಕೂಡ ಸುರಿಸಿದ್ದೀವಿ” ಎಂದರು.
ತುಂಬಾ ಒಳ್ಳೆಯ ಚಿತ್ರ ಮಾಡಿದ್ದೇವೆ. ನೋಡಿದವರ ಅನಿಸಿಕೆ ಹರಡಿದರೆ ನಮಗೆ ಅದುವೇ ಪ್ರಚಾರ. ಚಿತ್ರ ಎಲ್ಲರಿಗೂ ಇಷ್ಟವಾಗುವ ನಂಬಿಕೆ ಇದೆ ಎಂದರು ಪ್ರತಾಪ್.
ನಾಯಕಿಯಾಗಿ ನವ ನಟಿ ಮೋಕ್ಷ ಕುಶಾಲ್ ಅಭಿನಯಿಸಿದ್ದಾರೆ. ಎಮೋಶನಲ್ ಕ್ಯಾರೆಕ್ಟರ್ ನನ್ನದು. ಹಾಡಲ್ಲಿ ಹಾಟ್ ಆಗಿ ತೋರಿಸಿದ್ದಾರೆ. ವಲ್ಗಾರಿಟಿ ಇಲ್ಲ. ಎಂದು ಮಾಧ್ಯಮದ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದ ಮತ್ತೋರ್ವ ಪ್ರಧಾನ ಪಾತ್ರಧಾರಿ ಅಮಿತ್ ಉಪಸ್ಥಿತರಿದ್ದರು. ಚಂದ್ರಶೇಖರ್ ಸಿ.ಪಿ. ಈ ಚಿತ್ರವನ್ನು ನಿರ್ಮಿಸಿದ್ದಾರೆ.
Be the first to comment