ಈಗ ನೀವು ಯಾವುದೇ ಭಾಷೆಯ ಚಿತ್ರಗಳನ್ನು ನೋಡಿ, ಚಿತ್ರತಂಡ ಚಿತ್ರದ ಪೋಸ್ಟರ್ಗೆ ಸಾಕಷ್ಟು ಇಂಪಾರ್ಟೆನ್ಸ್ ಕೊಡುತ್ತೆ. ಚಿತ್ರದ ಪೋಸ್ಟರ್ ಡಿಸೈನ್ ರ್ ಗೆಕೂಡ ಪ್ರೇಕ್ಷಕನಲ್ಲಿ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸುವ ಶಕ್ತಿ ಇದೆ ಎಂಬುದು ಪ್ರತಿಯೊಬ್ಬ ನಿರ್ದೇಶಕ/ನಿರ್ಮಾಪಕನಿಗೂ ಅರ್ಥವಾಗಿದೆ. ಪ್ರತಿಯೊಂದು ಮ್ಯಾಜಿಕಲ್ ಪೋಸ್ಟರ್ ಹಿಂದೆ, ಒಂದು ಕ್ರೀಯೇಟಿವ್ ಮೈಂಡ್ ಕೆಲಸ ಮಾಡಿರುತ್ತೆ. ಅಂತಹ ಕ್ರಿಯೇಟೀವ್ ಮೈಂಡ್ ಇರುವ ವ್ಯಕ್ತಿ ಪಬ್ಲಿಸಿಟಿ ಡಿಸೈನರ್ ತುಳಸಿರಾಮ್ ರಾಜು
ತನ್ನಲ್ಲಿರುವ ಕಲೆಯನ್ನೇ ನಂಬಿ ಇಲ್ಲಿ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡವರು. ಇವರು ಕೆಲಸ ಮಾಡಿದ ಚಿತ್ರಗಳ ಹೆಸರು ಹೇಳಿದರೆ ಸಾಕು ಪೋಸ್ಟರ್ ಗಳು ನಿಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ. ಫಸ್ಟ್ ರ್ಯಾಂಕ್ ರಾಜು, ಉಡುಂಬಾ, ಉಪೇಂದ್ರ ಮತ್ತೆ ಬಾ, ಲವ್ ಮಾಕ್ಟೈಲ್, ರಣ ಬೇಟೆಗಾರ , ಕಬ್ಜ…ಹೀಗೆ ಸಾಕಷ್ಟು ಪೋಸ್ಟರ್ ಗಳು ಇಂದಿಗೂ ಜನಮಾನಸದಲ್ಲಿ ಅಚ್ಚೊತ್ತಿದೆ. ಇದಕ್ಕೆ ಕಾರಣ ತುಳಿಸಿರಾಮ್ ರಾಜು ಅವರು ಡಿಸೈನ್ ಅನ್ನು ಕೇವಲ ವೃತ್ತಿ ಎಂದು ಮಾಡದೆ, ಪ್ರೀತಿಯಿಂದ ಮಾಡುತ್ತಾರೆ.
ಒಂದು ಪ್ರೊಜೆಕ್ಟ್ ಅನ್ನು ಕೈಗೆತ್ತಿಕೊಂಡರೆ, ಚಿತ್ರದ ನಿರ್ದೇಶಕರ ಜೊತೆ ಕೂತು ಚಿತ್ರದ ಜಾನರ್ ಮತ್ತು ಕಥೆಯ ಬಗ್ಗೆ ಚರ್ಚಿಸಿ, ಅದಕ್ಕೆ ಸೂಕ್ತವಾದ ಪೋಸ್ಟರ್ಸ್ ,ಮೋಷನ್ ಪೋಸ್ಟರ್ಸ್,ಥೇಟರಿಕಲ್ ಟೈಲರ್ಸ್ ಮತ್ತು ಟೀಸರ್ ಮತ್ತು ಕಾನ್ ಸೆಪಸಲ್ ಡಿಸೈನ್,ಕಾನ್ ಸೆಪಸಲ್ ಪೋಸ್ಟರ್ಸ್ ಗಳನ್ನು ಅತ್ಯಂತ ಡೆಡಿಕೇಶನ್ನಿಂ ದ ಮಾಡಿಕೊಡುತ್ತಾರೆ. ಹೀಗೆ, ತನ್ನ ಕೆಲಸವನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತಾ ಬಂದಿರುವ ತುಳಿಸಿರಾಮ್ ಈಗ ಡಿಸೈನಿಂಗ್ ಜೊತೆ, ಎರಡು ಚಿತ್ರಗಳಿಗೆ ಎಡಿಟರ್ ಅಗಿ ಮತ್ತು ಹೊಸ ಚಿತ್ರವೊಂದರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಚಂದನವನ ಕಂಡ ಈ ಅಪರೂಪದ ಪ್ರತಿಭೆಗೆ ‘ಬಿನಿಮಾಸ್’ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಶುಭಕೋರುತ್ತದೆ.
Be the first to comment