‘ತಾಜ್‌ಮಹಲ್ ೨’ ಹಾಡಿಗೆ ಧ್ವನಿಯಾದ ವಿಜಯಪ್ರಕಾಶ್

ಈ ಹಿಂದೆ ‘ದೇಂಜರ್ ಜೋನ್`, `ನಿಶ್ಯಬ್ದ ೨’, ‘ಅನುಷ್ಕ` ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್ ನಿರ್ದೇಶನದ ೪ನೇ ಚಿತ್ರ `ತಾಜ್‌ಮಹಲ್ ೨` ಚಿತ್ರಕ್ಕಾಗಿ ಮನ್ವರ್ಷಿ ನವಲಗುಂದ ಅವರು ಬರೆದಿರುವ `ಜೀವಾ ಬಿಡುವೆ ನಿನಗಾಗಿ. ನಾ ಜೀವ ಕೊಡುವೆ ನಿನಗಾಗಿ` ಎಂಬ ಹಾಡನ್ನು ಖ್ಯಾತ ಗಾಯಕ ವಿಜಯಪ್ರಕಾಶ್ ಮುಂಬೈನ ಸ್ಟುಡಿಯೋದಲ್ಲಿ ಹಾಡಿದ್ದಾರೆ.
ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಸದ್ಯ ಮಾತಿನ ಜೋಡಣೆ ನಡೆಯುತ್ತಿದೆ. ಸಕಲೇಶಪುರ, ಬೆಂಗಳೂರು ಸುತ್ತಮುತ್ತ, ಮೈಸೂರು, ಗಗನ ಚುಕ್ಕಿ, ಭರ ಚುಕ್ಕಿ ಮುಂತಾದ ಕಡೆ ೫೦ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಶ್ರೀಗಂಗಾAಬಿಕೆ ಫಿûಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗುತ್ತಿದೆ.

ನಿರ್ದೇಶಕ ದೇವರಾಜ್ ಕುಮಾರ್ ಅವರೇ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಸಮೃದ್ಧಿ, ಶೋಭ್‌ರಾಜ್, ತಬಲಾ ನಾಣಿ, ಕಡ್ಡಿಪುಡಿ ಚಂದ್ರು, ಜಿಮ್ ರವಿ, ವಿಕ್ಚರಿ ವಾಸು ಮುಂತಾದವರಿದ್ದಾರೆ.ವಿಕ್ರಂ ಸೆಲ್ವಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ, ವೀನಸ್ ಮೂರ್ತ್ ಅವರ ಛಾಯಗರಹಣವಿದೆ. ವಿಜಯ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಮನ್ವರ್ಷಿ ನವಲಗುಂದ ಸಂಭಾಷಣೆ ಹಾಗೂ ಸಾಹಿತ್ಯ ಬರೆಯುತ್ತಿದ್ದಾರೆ. ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ಧನುಕುಮಾರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!