ಪ್ರಯೋಗ್ ಸ್ಟುಡಿಯೋ ದ್ವಿತೀಯ ವಾರ್ಷಿಕೋತ್ಸವ

ಪ್ರದೀಪ್ ಮಳ್ಳುರು ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಲೇ ಬೆಂಗಳೂರಿನಲ್ಲಿ ಸುಸಜ್ಜಿತ ಸೌಲಭ್ಯಗಳುಳ್ಳ ಪ್ರಯೋಗ್ ಸ್ಟುಡಿಯೋವನ್ನು ಎರಡು ವರ್ಷಗಳ ಹಿಂದೆ ಸ್ಥಾಪಿಸಿದ್ದರು. ಚಿತ್ರದ ಶೂಟಿಂಗ್ ಮುಗಿಸಿಕೊಂಡು ಇಲ್ಲಿಗೆ ಬಂದರೆ ಚಿತ್ರದ ಫಸ್ಟ್ಕಾಪಿವರೆಗೆ ಎಲ್ಲಾ ಕೆಲಸಗಳನ್ನು ಇಲ್ಲೇ ಮಾಡಿಕೊಂಡು ಹೋಗುವಂಥ ಎಲ್ಲಾ ಸೌಲಭ್ಯಗಳು ಈ ಸ್ಟುಡಿಯೋದಲ್ಲಿದೆ. ಪ್ರಯೋಗ್ ಸ್ಟುಡಿಯೋ ಇದೀಗ ತನ್ನ ಎರಡನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಇದೇ ಸಂದರ್ಭದಲ್ಲಿ ಇದರ ಸ್ಥಾಪಕರಾದ ಪ್ರದೀಪ್ ಮಳ್ಳೂರು ಅವರು ಚಿತ್ರರಂಗದಲ್ಲಿ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ.

ಪ್ರಯೋಗ್ ಪ್ರೊಡಕ್ಷನ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಲಾಗಿದ್ದು, ಅದರ ಉದ್ಘಾಟನೆ ಕಳೆದವಾರ ನಡೆಯಿತು. ಈ ಮೂಲಕ ಹೊಸದಾಗಿ ಚಿತ್ರರಂಗಕ್ಕೆ ಬರುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಇವರ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ಉತ್ತಮ ಕಲಾವಿದರಿಗೆ, ತಂತ್ರಜ್ಞರಿಗೆ ಸಂಸ್ಥೆಯಲ್ಲಿ ಅವಕಾಶ ನೀಡಲಾಗುವುದು. ಹಾಗಾಗಿ ಈ ಸಂಸ್ಥೆಯಡಿ ಕಾರ್ಯನಿರ್ವಹಿಸಲು ಇಚ್ಚಿಸುವ ಪ್ರತಿಭಾವಂತರು ಕೂಡಲೇ ಸಂಪರ್ಕಿಸಬಹುದಾಗಿದೆ.

ಪ್ರಯೋಗ್ ಪ್ರೊಡಕ್ಷನ್ ಸಂಸ್ಥೆಯ ನಿರ್ಮಾಣದ ೨೦ ನಿಮಿಷಗಳ ಕಿರುಚಿತ್ರ ಲಾಟರಿ ವಿಶೇಷ ಪ್ರದರ್ಶನವನ್ನು ಕನ್ನಡ ಚಲನಚಿತ್ರರಂಗದ ಗಣ್ಯರಿಗೆ ಪ್ರಯೋಗ್ ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು. ಜಗದೀಶ್ ನಡನಳ್ಳಿ ಅವರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಪ್ರಿಯಾ, ನಂದನ ಪ್ರಮುಖ ಪಾತ್ರದಲ್ಲಿ ನಟಿಸಿದ್ರು.

ಸಂಗೀತ ನಿರ್ದೇಶಕ ವಿ. ಮನೋಹರ್, ನಿರ್ದೇಶಕ ಸತ್ಯಪ್ರಕಾಶ್, ರಾಮ ರಾಮ ರೇ ಖ್ಯಾತಿಯ ನಟರಾಜï, ಸುಮನ್ ನಗರಕರ್, ನಿರ್ದೇಶಕ ದೀಪಕ್ ಮಧುವನಹಳ್ಳಿ, ಗುರುದೇವ್ ನಾಗರಾಜ, ನಿರ್ಮಾಪಕ ಮಂಜುನಾಥ್ ದಾಸೇಗೌಡ, ನಿರ್ದೇಶಕ ಆದರ್ಶ ಈಶ್ವರಪ್ಪ, ನಿರ್ದೇಶಕ ಪ್ರದೀಪ್ ವರ್ಮಾ, ನಟ ನಿರ್ದೇಶಕ ವರುಣ್ ಕಟ್ಟಿಮನಿ, ನಾಯಕ ನಟ ಅರವಿಂದ್ ಅಯ್ಯರ್, ನಿಹಾಲ್ ರಾಜ್‌ಪುತ್, ನಿರ್ಮಾಪಕ ರಾಮಚಂದ್ರ ಬಾಬು ಅಲ್ಲದೆ ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು.ಪ್ರಯೋಗ್ ಸ್ಟುಡಿಯೋ ಅರಂಭವಾದ ಎರಡು ವರ್ಷಗಳಲ್ಲಿ ನಾಟಕ, ಕಿರುಚಿತ್ರ ಪ್ರದರ್ಶನ ಹೀಗೆ ೪೦೦ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ೩ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ, ೩ ನಾಟಕ ನಿರ್ಮಾಣ, ೪೫ಕ್ಕೂ ಹೆಚ್ಚು ಕಿರುಚಿತ್ರಗಳಿಗೆ ಡಬ್ಬಿಂಗ್, ೨೦ಕ್ಕೂ ಹೆಚ್ಚು ಕಿರುಚಿತ್ರಗಳಿಗೆ ಸಂಗೀತ ನಿರ್ದೇಶನ, ೧೫ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ ಹೆಗ್ಗಳಿಕೆ ಪ್ರಯೋಗ್ ಸ್ಟುಡಿಯೋಗಿದೆ. ಈಗ ಹೊಸ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದು, ಅದರ ಮೂಲಕ ಪ್ರತಿವರ್ಷ ಉತ್ತಮ ಚಲನಚಿತ್ರಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಮೂರು ಚಿತ್ರಗಳ ನಿರ್ಮಾಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಪ್ರಿಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಮಾಲಿಕರಾದ ಶ್ರೀಮತಿ ರಜನಿ ಪ್ರದೀಪ್ ಹಾಗೂ ಪ್ರದೀಪ್ ಮುಳ್ಳೂರು ಸಂಸ್ಥೆಯ ಮುಂದಿನ ಹೆಜ್ಜೆಗಳ ಬಗ್ಗೆ ವಿವರಿಸಿ ನಿಮ್ಮೆಲ್ಲರ ಸಹಕಾರ ಬೇಕೆಂದು ಕೇಳಿಕೊಂಡರು.

This Article Has 2 Comments
  1. Pingback: CI CD

  2. Pingback: DevSecOps Definition

Leave a Reply

Your email address will not be published. Required fields are marked *

Translate »
error: Content is protected !!