‘ರೈಮ್ಸ್’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

“ಈ ವರ್ಷ ನನಗೆ ಒಳ್ಳೆಯ ಅವಕಾಶಗಳು ಈಗ ದೊರಕುತ್ತಿವೆ. . ಅದರಲ್ಲಿಯೂ ‘ರೈಮ್ಸ್’ ಚಿತ್ರದಲ್ಲಿನ ಪಾತ್ರ ತುಂಬ ವಿಭಿನ್ನವಾಗಿದೆ” ಎಂದು ಖುಷಿ ಹಂಚಿಕೊಂಡರು ರೈಮ್ಸ್ ಚಿತ್ರದ ಹೀರೋ ಅಜಿತ್ ಜಯರಾಜ್. ಅವರು ಚಿತ್ರದ ಫಸ್ಟ್ ಲುಕ್ ಬಿಡುಗಡೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನನ್ನ ನಟನೆಯನ್ನು ಹಿರಿಯನಟಿ ಅಭಿನಯ ಅವರು ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ನನ್ನ ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಅಜಿತ್ ಹೇಳಿದರು. “ನನ್ನದು ಸಣ್ಣ ಪಾತ್ರವಾದರೂ ನೆನಪು ಉಳಿಯುವಂಥ ದೃಶ್ಯಗಳಲ್ಲಿ ನಟಿಸಿದ್ದೇನೆ ಎಂದು  ಅಭಿನಯ ಹೇಳಿದರು. 
ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸುಷ್ಮಾ ನಾಯರ್, ತಮಿಳು ಧಾರಾವಾಹಿಯಲ್ಲಿ ಖಳನಟಿಯಾಗಿದ್ದ ತಮಗೆ  ಇಲ್ಲಿ ನನಗೆ ಮುದ್ದಾದ ನಾಯಕಿಯ ಪಾತ್ರ ನೀಡಿರುವುದು ವಿಶೇಷ ಅನಿಸಿತು ಎಂದರು. ಮಿಮಿಕ್ರಿ ಗೋಪಿ‌ ಮಾತನಾಡಿ, “ಇಲ್ಲಿ ನಾನು ಮಿಮಿಕ್ರಿ ಮಾಡಿಲ್ಲ. ‌ಆದರೆ ಒಂದು ಒಳ್ಳೆಯ ಪಾತ್ರ ಕೊಟ್ಟಿದ್ದಾರೆ. ‘ಸಿದ್ಲಿಂಗು’ ಬಳಿಕ ಉತ್ತಮ ಪಾತ್ರ ದೊರಕಿದೆ ಎಂದು ಖುಷಿಯಾಗಿದೆ” ಎಂದರು. ನಿರ್ದೇಶಕ ಅಜಿತ್ ಕುಮಾರ್  ಚಿತ್ರದ ಕತೆಯ ಬಗ್ಗೆ ಮಾತನಾಡುತ್ತಾ,  “ಬೆಂಗಳೂರು ನಗರದಲ್ಲಿ ಸುಮಾರು ಕೊಲೆಗಳು ಆಗುತ್ತದೆ. ಎ.ಕೆ‌ ಎಂದು ಕರೆಯಲ್ಪಡುವ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಈ ಕೊಲೆಗಳನ್ನು ಭೇದಿಸಲು ನೇಮಕವಾಗುತ್ತಾರೆ. ಇದರ ನಡುವೆ ಕೊಲೆಗಳ ಬಗ್ಗೆ ತನಿಖೆ ವರದಿಗಾಗಿ ಒಂದು ಹೆಸರಾಂತ ಪತ್ರಿಕೆಯು  ಕ್ರೈಮ್ ಪತ್ರಕರ್ತೆ ಅವಂತಿಕಾರನ್ನು ನೇಮಕ ಮಾಡುತ್ತದೆ. ಅದೇ ವೇಳೆ ಪ್ರಕರಣವು CBCIDಗೆ ವರ್ಗವಾಗುತ್ತದೆ. ಆದರೂ ಎ.ಕೆಯ ಸಹಭಾಗಿತ್ವದಿಂದ ತನಿಖೆ ಮುಂದುವರೆಯುತ್ತದೆ.
ಮುಂದೆ ಪ್ರಕರಣ ಯಾರ ಮೂಲಕ ಹೇಗೆ ಭೇದಿಸಲ್ಪಡುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಕತೆ. ಇದು ಸಸ್ಪೆನ್ಸ್  ಥ್ರಿಲ್ಲರ್ ಸಿನಿಮಾವಾದರೂ,  ಚಿತ್ರವು ಮನೆ ಮಂದಿಯೆಲ್ಲ ನೋಡುವ ರೀತಿಯಲ್ಲಿ ಮೂಡಿ ಬಂದಿದೆ” ಎಂದು ಮಾಹಿತಿ ನೀಡಿದರು.
ನಿರ್ಮಾಪಕರಾದ ರಮೇಶ್ ಆರ್ಯ, ರವಿ ಕುಮಾರ್, ಗಿರೀಶ್ ಮತ್ತು ಗೀತಾ ಸೇರಿ ಚಿತ್ರವನ್ನು ನಿರ್ಮಿಸಿದ್ದಾರೆ. ಶುಭಾ ಪೂಂಜಾ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಮೂಲಕ  ಚಂದನವನಕ್ಕೆ ಬಾಲನಟಿಯಾಗಿ ಪದಾರ್ಪಣೆ ಮಾಡುತ್ತಿರುವ ಭಾಸ್ವತಿ ಗೋಪಾಲ ಕಜೆ ‘ರೈಮ್ಸ್’ ನ ಟೀಸರ್ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಜನ್ಮದಿನವನ್ನು ಆಚರಿಸಲಾಯಿತು.
This Article Has 1 Comment
  1. Pingback: 꽃계열 사이트

Leave a Reply

Your email address will not be published. Required fields are marked *

Translate »
error: Content is protected !!