ತೆಲುಗಿನ ‘ಬ್ರೋಚೇವಾರೇವರುರ’ ಸಿನಿಮಾವನ್ನು ಕನ್ನಡದಲ್ಲಿ ‘ಗೋವಿಂದ ಗೋವಿಂದ’ ಎಂಬ ಹೆಸರಿನಲ್ಲಿ ರೀಮೇಕ್ ಮಾಡಲಾಗುತ್ತಿದೆ. ಇದೊಂದು ಹಾಸ್ಯಮಯ ಸಿನಿಮಾ. ಈ ಚಿತ್ರದ ಮೂಲಕ ಕೆನಡಾ ಮೂಲದ ಬಾಲಿವುಡ್ ನಟಿ ನೋರಾ ಫತೇಹಿ ಎಂಟ್ರಿ ಕೊಟ್ಟಿದ್ದಾರೆ.
‘ಗೋವಿಂದ ಗೋವಿಂದ’ ಚಿತ್ರದ ಒಂದು ಐಟಂ ಹಾಡಿನಲ್ಲಿ ಕುಣಿಯಲು ನೋರಾ ಮುಂಬೈನಿAದ ಬೆಂಗಳೂರಿಗೆ ಬಂದಿದ್ದಾರೆ. ಬಾಹುಬಲಿ ಸೇರಿದಂತೆ ಈಗಾಗಲೇ ತೆಲುಗು, ತಮಿಳು, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲಿ ಹೆಜ್ಜೆ ಹಾಕಿರುವ ನೋರಾ ಫತೇಹಿ ಹಾಡನ್ನು ರಾಜು ಸುಂದರ ನೃತ್ಯ ನಿರ್ದೇಶನ ಮಾಡಲಿದ್ದಾರೆ. ಹಿರಿಯ ನಿರ್ಮಾಪಕ ಎಸ್. ಶೈಲೇಂದ್ರ ಬಾಬು ಮೊದಲ ಬಾರಿ ಜಂಟಿ ನಿರ್ಮಾಪಕರಾಗಿ ಕಿಶೋರ್ ಎಂ. ಕೆ ಮಧುಗಿರಿ ಹಾಗೂ ರವಿ ಆರ್. ಗರಣಿ ಜೊತೆ ಸೇರಿದ್ದಾರೆ. ಕಿರುತೆರೆ ನಿರ್ದೇಶಕ ತಿಲಕ್ ಮೊದಲ ಬಾರಿ ಬೆಳ್ಳಿತೆರೆಯಲ್ಲಿ ಸಿನಿಮಾವನ್ನು ನಿರ್ದೇಶಿಸುತ್ತಾರೆ. ಹಣದ ಹಿಂದೆ ಹೋಗುವ ಮೂವರು ಸ್ನೇಹಿತರು ಏನೆಲ್ಲಾ ಫಜೀತಿ ಪಡುತ್ತಾರೆ ಎಂಬುದನ್ನು ಚಿತ್ರದಲ್ಲಿ ಹಾಸ್ಯ, ಸೆಂಟಿಮೆAಟ್, ಥ್ರಿಲ್ ಜೊತೆ ಬೆರೆಸಿ ಹೇಳಲಾಗಿದೆ.
ಕೆ. ಎಸ್. ಚಂದ್ರಶೇಖರ್ ಛಾಯಾಗ್ರಹಣ, ಹಿತನ್ ಹಾಸನ್ ಸಂಗೀತ, ಸಿ. ರವಿಚಂದ್ರನ್ ಸಂಕಲನ, ದೇವ್ ರಂಗಭೂಮಿ ಸಂಭಾಷಣೆ ಒದಗಿಸಿದ್ದಾರೆ. ಸುಮಂತ್ ಶೈಲೇಂದ್ರ ಹಾಗೂ ಕವಿತಾ ಗೌಡ ಜೊತೆ ಪವನ್ ಕುಮಾರ್, ವಿಜಯ್ ಚೆಂಡೂರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಭಾವನಾ ಮೆನನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪೋಷಕ ಪಾತ್ರಗಳಲ್ಲಿ ರೂಪೇಶ್ ಶೆಟ್ಟಿ, ಅಚ್ಯುತ್ ಕುಮಾರ್, ಶೋಭರಾಜ್, ಶ್ರೀನಿವಾಸ ಪ್ರಭು, ಪದ್ಮ ವಾಸಂತಿ, ಸುನೇತ್ರ ಪಂಡಿತ್, ಗೋವಿಂದೇಗೌಡ ಹಾಗೂ ಇನ್ನಿತರರು ಇದ್ದಾರೆ.
Pingback: Greensboro Tree removal