‘ಮದುವೆ ಮಾಡ್ರೀ ಸರಿಹೋಗ್ತಾನೆ’ ಆಡಿಯೋ ರಿಲೀಸ್

ಗೋಪಿ ಕೆರೂರ್ ನಿರ್ದೇಶನದ ‘ಮದುವೆ ಮಾಡ್ರೀ ಸರಿಹೋಗ್ತಾನೆ’ ಚಿತ್ರತಂಡ ಇತ್ತೀಚೆಗೆ ಆಡಿಯೋ ರಿಲೀಸ್ ಮಾಡಿತು. ವಿಶೇಷವೆಂದರೆ, ಈ ಚಿತ್ರದಲ್ಲಿ ೧೧ ಹಾಡುಗಳಿವೆ. ಆದರೆ, ಎಲ್ಲವೂ ಕಥೆಗೆ ಪೂರಕವಾಗಿವೆ ಎಂಬುದು ನಿರ್ದೇಶಕ ಗೋಪಿ ಹೇಳಿಕೆ. ಶಿವಚಂದ್ರ ಕುಮಾರ್ ಮತ್ತು ಆರಾಧ್ಯ ಮುಖ್ಯಭೂಮಿಕೆಯಲ್ಲಿ ಮೂಡಿ ಬಂದಿರುವ ಪಕ್ಕಾ ಎಂಟರ್‌ಟೈನ್‌ಮೆAಟ್ ಸಿನಿಮಾ.
ಸ್ಯಾಂಡಲ್‌ವುಡ್‌ನಲ್ಲಿ ಈಗ ಡಿಫರೆಂಟ್ ಟೈಟಲ್‌ಗಳದ್ದೇ ಟೈಮ್. ಈ ಸಾಲಿಗೆ ಈಗ ‘ಮದುವೆ ಮಾಡ್ರೀ ಸರಿಹೋಗ್ತಾನೆ’ ಚಿತ್ರ ಸೇರ್ಪಡೆಯಾಗುತ್ತದೆ. ಸಿನಿಮಾ ಉತ್ತರ ಕರ್ನಾಟಕ ಭಾಷೆಯಲ್ಲಿದ್ದು ಆ ಭಾಗದಲ್ಲೇ ಚಿತ್ರೀಕರಿಸಲಾಗಿದೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ೧೧ ಹಾಡುಗಳಿವೆ. ಆದರೆ, ಎಲ್ಲವೂ ಕಥೆಗೆ ಪೂರಕವಾಗಿವೆ ಎಂಬುದು ನಿರ್ದೇಶಕ ಗೋಪಿ ಹೇಳಿಕೆ. ಆಡಿಷನ್ ಮೂಲಕ ಚಿತ್ರಕ್ಕೆ ಸೆಲೆಕ್ಟ್ ಆದ ಶಿವ ಚಂದ್ರಕುಮಾರ್ ಈ ಸಿನಿಮಾ ಮೂಲಕ ಚೊಚ್ಚಲ ಬಾರಿಗೆ ಹೀರೋ ಆಗಿದ್ದಾರೆ. ‘ನಾನಿಲ್ಲಿ ಪಡ್ಡೆ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಎಲ್ಲರಿಂದಲೂ ಬೈಯಿಸಿಕೋಳ್ಳುವ ಪಾತ್ರ ನನ್ನದು. ನನಗೆ ಮದುವೆ ಆದರೆ ಎಲ್ಲವೂ ಸರಿಹೋಗುತ್ತದೆ ಎಂಬುದು ಎಲ್ಲರ ನಂಬಿಕೆ ಆಗಿರುತ್ತದೆ’ ಎಂದ ಲೀಡ್ ಹೀರೋ ಶಿವಚಂದ್ರ ಕುಮಾರ್ ಮಾತನಾಡಿದರು. ಇವರಿಗೆ ಜೋಡಿಯಾಗಿ ಮುದ್ದು ಮುಖದ ಆರಾಧ್ಯ ನಟಿಸಿದ್ದಾರೆ. ಅದಾಗಲೇ ಟೀಸರ್ ಮೂಲಕ ಈ ಜೋಡಿ ಮೋಡಿ ಮಾಡಿದೆ. ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ಬಲು ಅಚ್ಚುಕಟ್ಟಾಗಿ ಮೂಡಿ ಬಂದಿದೆ ಊರಲ್ಲಿ ಸೋಮಾರಿ ಹುಡುಗ ನ ಮದುವೆಯ ಕಥೆ ಇದು. ಅಕ್ಕಪಕ್ಕದವರಿಂದ ಬೈಯಿಸಿಕೊಳ್ಳುವ ಹುಡುಗನೊಬ್ಬ, ಅಂತಿಮವಾಗಿ ಹೇಗೆ ಅದೇ ಊರ ಜನರಿಗೆ ಇಷ್ಟವಾಗುತ್ತಾನೆ ಎಂಬುದು ಚಿತ್ರಕಥೆ ಇದೇ ಮೊದಲ ಬಾರಿಗೆ ಶಿವರಾಜ್ ಲಕ್ಷ್ಮಣ ರಾವ್ ದೇಸಾಯಿ ಈ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!