ಬಿಸಿನಿಮಾಸ್ ಚಿತ್ರ ವಿಮರ್ಶೆ :ವೇಸ್ಟ್ ಬಾಡಿಗಳ ಲೇಟೆಸ್ಟ್ ಮನರಂಜನೆ
ರೇಟಿಂಗ್ :[3.5/5]
ನಿರ್ದೇಶಕ ಮಂಜು ಮಾಂಡವ್ಯ ಹಿರೋ ಆಗ್ತೀನಿ ಅಂತ ಹೊರಟಾಗ ಗಾಂಧಿನಗರ ‘ಡೈರೆಕ್ಟ್ ಮಾಡಿಕೊಂಡಿದ್ದವನಿಗೆ ಇದೆಲ್ಲಾ ಬೇಕಾ..’ ಎಂಬರ್ಥದಲ್ಲಿ ಕಾಲೆಳೆದಿತ್ತು. ಇನ್ನು, ಚಿತ್ರ ನೋಡಿದವರಿಗೆ ಕೋಟಿ ಬಹುಮಾನ ಎಂದು ಪ್ರಕಟಿಸಿದಾಗಲಂತೂ….ಸಿನ್ಮಾ ಚೆನ್ನಾಗಿಲ್ಲ ಅದ್ಕೇ ಈ ಸ್ಟ್ರಾಟಜೀ’ ಎಂದು ಚಿತ್ರರಂಗದವರೇ ಆಡಿಕೊಂಡಿದ್ದರು. ಆದರೆ, ಮಂಜು ಮಾಂಡವ್ಯ ತನ್ನ ಕೆಲಸದ ಮೂಲಕ ಎಲ್ಲರಿಗೂ ಉತ್ತರ ನೀಡಿದ್ದಾರೆ. ‘ಭರತ ಬಾಹುಬಲಿ’ ಚಿತ್ರದ ಮೂಲಕ ಗೆದ್ದು ತೋರಿಸಿದ್ದದಾರೆ. ಅಂತಹ ಗೆಲುವ ಕೊಟ್ಟ ಚಿತ್ರದ ಬಗ್ಗೆ ಒಂದಿಷ್ಟು ಮಾತು..
ಮಂಜು ಮಾಂಡವ್ಯ, ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಶ್ರೀ ಭರತ ಬಾಹುಬಲಿ ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಯಾವ ಸ್ಟಾರ್ ಡಮ್ ಕೂಡಾ ಇಲ್ಲದ ಈ ಸಿನಿಮಾ ಸುದ್ದಿಯಾಗಿದ್ದದ್ದೇ ಕ್ರಿಯೇಟಿವ್ ಅಂಶಗಳಿಂದ. ಭರತ ಬಾಹುಬಲಿಯದ್ದೊಂದು ವಿಶೇಷವಾದ ಕಥೆ ಎಂಬುದನ್ನು ಪ್ರೇಕ್ಷಕರಲ್ಲಿ ಬಲವಾಗಿ ಊರುವಂತೆ ಮಾಡುವಲ್ಲಿ ಮಾಂಡವ್ಯ&ಟೀಮ್ ಸಫಲವಾಗಿತ್ತು.
ಆ ಎಲ್ಲ ನಿರೀಕ್ಷೆ, ಕಾತರಗಳನ್ನು ನಿಜವಾಗಿಸುವಂತೆ ಭರಪೂರ ಮನರಂಜನೆಯೊಂದಿಗೆ ಈ ಚಿತ್ರವೀಗ ತೆರೆಗಂಡಿದೆ. ಭರತ ಬಾಹುಬಲಿಯ ಕಾಮಿಡಿ ಝಲಕ್ ನೋಡುಗನ ಮೊಬೈಲ್ ಅನ್ನು ಮರೆಸಿ ಚಿತ್ರದಲ್ಲಿ ಸಂಪೂರ್ಣವಾಗಿ ಇನ್ವಾಲ್ ಆಗುವಂತೆ ಮಾಡಿಬಿಡುತ್ತದೆ.
ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾ ನಿರ್ದೇಶಕನಾಗಿ ತಮ್ಮ ಪ್ರತಿಭೆ ತೋರಿದ್ದ ಮಂಜು ಮಾಂಡವ್ಯ ಈ ಚಿತ್ರದ ಮೂಲಕ ನಾಯಕನಾಗಲೂ ಸೈ ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಚಿಕ್ಕಣ್ಣ, ಮಂಜು ಮಾಂಡವ್ಯ ಜುಗಲ್ ಬಂದಿ ತೆರೆ ಮೇಲೆ ನಿಜಕ್ಕೂ ಮ್ಯಾಜಿಕ್ ಮಾಡಿದೆ.
ಹೊಸ ರೀತಿಯ ಸ್ಕ್ರೀನ್ ಫ್ಲೇ, ಯಾವ ಹಂತದಲ್ಲಿಯೂ ಸಡಿಲಗೊಳ್ಳದ ಕಥೆ, ಪ್ರತಿ ಹಂತದಲ್ಲಿಯೂ ನಗುವಿನ ಸಿಂಚನ ಮಾಡುತ್ತಲೇ ಸಾಗುವ ಎಫೆಕ್ಟೀವ್ ಸಂಭಾಷಣೆಗಳೊಂದಿಗೆ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ನಿಖರವಾಗಿ ಹೇಳಬೇಕೆಂದರೆ ಈ ಭರತ ಬಾಹುಬಲಿ ಮೊದ ಮೊದಲು ವೇಸ್ಟ್ ಬಾಡಿಗಳಾಗಿ ನಗಿಸುತ್ತಲೇ ಬರ ಬರುತ್ತಾ ಸಿರೀಯಸ್ ಅಂಶವೊಂದನ್ನು ನಾಜೂಕಾಗಿ ಪ್ರೇಕ್ಷನಿಗೆ ತಲುಪಿಸುತ್ತದೆ. ಇದು ಒಂದು ರೀತಿಯಲ್ಲಿ, ಕ್ರಿಯೇಟೀವ್ ಡಾಕ್ಟರ್ ಮಗುವಿನ ಅರಿವಿಗೆ ಬಾರದೆ ಇಂಜೆಕ್ಷನ್ ಕೊಟ್ಟಂತೆ!
ಹಾಗಿದ್ದರೆ ‘ಭರತ ಬಾಹುಬಲಿ’ಯ ಕಥೆ ಏನು?, ವೇಸ್ಟ್ ಬಾಡಿಗಳಾಗಿ ತಲೆಹರಟೆ ಮಾಡಿಕೊಂಡು ಊರ ತುಂಬಾ ಅಂಡಲೆಯೋದೇ ಭರತ ಬಾಹುಬಲಿಯ ಫುಲ್ ಟೈಂ ಡ್ಯೂಟಿ. ಈ ನಡುವೆ ಹುಡುಗಾಟದಲ್ಲಿ ಮಾಡಿದ ಕೆಲಸವೇ ಅವರಿಬ್ಬರನ್ನು ಕಾನೂನಿನ ಸರಪಳಿಯಲ್ಲಿ ಬಂಧಿಗಳಾಗುವಂತೆ ಮಾಡುತ್ತದೆ. ಅಪ್ರಾಪ್ತ ಸ್ನೇಹಿತನಿಗೆ ಮದುವೆ ಮಾಡಿಸಿ ಜೈಲಿಗೆ ಸೇರೊ ಭರತ ಬಾಹುಬಲಿ ಬದುಕಿಗೆ ಎಂಟ್ರಿ ಕೊಡುವ ಶ್ರೀ ಇಡೀ ಚಿತ್ರದ ಚಿತ್ರಣವನ್ನೇ ಬದಲಿಸುತ್ತಾಳೆ. ಆ ನಂತರದಲ್ಲಿ ಕಥೆ ಮತ್ತಷ್ಟು ಓಘ ಪಡೆದುಕೊಳ್ಳುತ್ತದೆ. ಮುಂದೆ ಭರತ ಬಾಹುಬಲಿ ತಮ್ಮ ಪೋಲಿತನ ಬಿಟ್ಟು ಸರಿ ಹೋಗ್ತಾರಾ, ಭರತ ಬಾಹುಬಲಿ ಲೈಫಲ್ಲಿ ಏನೇನೆಲ್ಲ ಘಟಿಸುತ್ತವೆ ಅನ್ನೋ ಕುತೂಹಲ ನಿಮಗಿದ್ದರೆ ಈ ಚಿತ್ರವನ್ನು ಖಂಡಿತವಾಗಿಯೂ ಮಿಸ್ ಮಾಡದೆ ನೋಡಲೇಕು.
ಇಂಥಾ ನಿರೀಕ್ಷೆ ಹೊತ್ತು ಯಾರೇ ಚಿತ್ರಮಂದಿರ ಹೊಕ್ಕರೂ ಭರತ ಬಾಹುಬಲಿ ಖಂಡಿತಾ ನಿರಾಸೆ ಮಾಡುವುದಿಲ್ಲ. ಇಲ್ಲಿರೋದು ತುಂಬ ಸರಳವಾದ ಕಥೆ. ಇಂಟ್ರಸ್ಟಿಂಗ್ ವೇನಲ್ಲಿ ಸ್ಕ್ರೀನ್ ಪ್ಲೇ ಹೆಣೆದು ಅದನ್ನು ತೆರೆ ಮೇಲೆ ಅಷ್ಟೇ ಚೆಂದವಾಗಿ ಪ್ರೊಜೆಕ್ಟ್ ಮಾಡುವ ಮೂಲಕ ನಿರ್ದೇಶಕ ಮಂಜು ಮಾಂಡವ್ಯ ತಾನೊಬ್ಬ ಪರ್ಫೆಕ್ಷನಿಸ್ಟ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಎಂದಿನಂತೆ ಚಿಕ್ಕಣ್ಣ ಎಲ್ಲರಿಗೂ ಇಷ್ಟವಾಗುತ್ತಾರೆ. ನಾಯಕಿ ಪಾತ್ರದಲ್ಲಿ ಸಾರಾ ಮಹೇಶ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮಣಿಕಾಂತ್ ಕದ್ರಿ ಮ್ಯೂಸಿಕ್, ಫರ್ವೇಜ್ ಕೆ ಸಿನಿಮಾಟೋಗ್ರಫಿ ಎಲ್ಲರ ಮನಸೆಳೆಯುತ್ತದೆ. ಒಟ್ಟಾರೆಯಾಗಿ ಶ್ರೀ ಭರತ ಬಾಹುಬಲಿ ನಿರೀಕ್ಷೆ ಮೀರಿದ ಫೀಲ್ ಕೊಡುವಂತೆ ಮೂಡಿ ಬಂದಿದೆ.
ಕೊನೆಯದಾಗಿ, ಮಂಜು ಮಾಂಡವ್ಯ ಅವರ ಸಾಹಸವನ್ನು ಮೆಚ್ಚಲೇ ಬೇಕು. ಬಿಕಾಸ್, ನಟನಾಗಿ ಎಂಟ್ರಿ ಯಾವ ನಿರ್ದೇಶಕನೂ ಕೊಡಬಹುದು ಆದರೆ ಅದಕ್ಕೇ ಬೇಕಾದ ತಯಾರಿಯಲ್ಲಿ ಎಲ್ಲರೂ ಎಡವುತ್ತಾರೆ, ಮಾಂಡವ್ಯ ಅವರ ವಿಚಾರದಲ್ಲಿ ಇದಾಗಲಿಲ್ಲ. ಶೂಟಿಂಗ್ಗೂ ಮೊದಲು ಮಾಂಡವ್ಯ ತನ್ನ ತಲೆಯೊಳಗೆ ಕೂತಿದ್ದ ಡೈರೆಕ್ಟ ರನ್ನು ಬದಿಗಿರಿಸಿ ಪಾತ್ರಕ್ಕಾಗಿ ಮಾಡಿಕೊಂಡ ತಯಾರಿ ಪ್ರತೀ ಫ್ರೇಮ್ ನಲ್ಲೂ ಕಾಣಸಿಗುತ್ತದೆ. ನಾವು, ಅನ್ಯ ಭಾಷೆಗಳಲ್ಲಿ ಸಾಕಷ್ಟು ಡೈರೆಕ್ಟರ್ ಗಳು ನಟನಾಗಿ ಭದ್ರವಾಗಿ ನೆಲೆಯೂರಿದ್ದು ಗಮನಿಸಿದ್ದೇವೆ. ಈಗ ಮಾಂಡವ್ಯ ಅವರ ವಿಷ್ಯದಲ್ಲೂ ಅದೇ ಆಗಲಿದೆ.
@ಬಿಸಿನಿಮಾಸ್ ವಿಮೆರ್ಶೆ
Be the first to comment