50 ದಿನ ಪೂರೈಸಿದ ಸಂಭ್ರಮದಲ್ಲಿ

ಈಗ ಚಿತ್ರಗಳು ಸಕ್ಸಸ್ ಸಮಾರಂಭಗಳನ್ನು ಆಚರಿಸಿಕೊಳ್ಳುವುದು ವಿರಳ ಎಂದೇ ಹೇಳಬಹುದು. ವರ್ಷದಲ್ಲಿ ಬಿಡುಗಡೆಯಾಗುವ 200ಕ್ಕೂ ಹೆಚ್ಚು ಚಿತ್ರಗಳ ಪೈಕಿ ಒಂದೋ, ಎರಡೋ ಚಿತ್ರಗಳಿಗೆ ಆ ಸೌಭಾಗ್ಯ ಒಲಿದು ಬರುತ್ತದೆ, ಅದೇ ಸಾಲಿಗೆ ಸೇರುವ ಚಿತ್ರವೆಂದರೆ ಮನೆ ಮಾರಾಟಕ್ಕಿದೆ ಚಿತ್ರ.
ಯಾವ ಸ್ಟಾರ್ ನಟರುಗಳು ಚಿತ್ರದಲ್ಲಿ ಇಲ್ಲದಿದ್ದರೂ ಕೂಡ ಚಿತ್ರರಂಗದ ಸ್ಟಾರ್ ಕಾಮಿಡಿ ನಟರುಗಳೇ ಪ್ರೇಕ್ಷಕರನ್ನು ನಕ್ಕು ನಲಿಸಿದ್ದ ಫಲವೇ ಮೊನ್ನೆ ಚಿತ್ರತಂಡವು 50 ದಿನದ ಸಂಭ್ರಮವನ್ನು ಆಚರಿಸಿಕೊಂಡಿದ್ದು.

ನಿರ್ಮಾಪಕ ಎಸ್.ವಿ.ಬಾಬು ಅವರು ನಿರ್ಮಿಸಿರುವ ಮನೆ ಮಾರಾಟಕ್ಕಿದೆ ಚಿತ್ರದ 50ನೆ ದಿನದ ಸಂಭ್ರಮವನ್ನು ಮೊನ್ನೆ ಆಚರಿಸಿ ಚಿತ್ರದ ಯಶಸ್ಸಿಗೆ ಕಾರಣರಾದ ಕಲಾವಿದರು ಹಾಗೂ ತಂತ್ರಜ್ಞರಿಗೆ ನೆನಪಿನ ಫಲಕಗಳನ್ನು ನಿರ್ಮಾಪಕ ಸಾ.ರಾ.ಗೋವಿಂದು, ನಟ , ನಿರ್ದೇಶಕ ರಿಶೆಬ್ ಶೆಟ್ಟಿ ಅವರು ವಿತರಿಸಿದರು.

ಸಾ.ರಾ.ಗೋವಿಂದು ಅವರು ಮಾತನಾಡಿ, ಎಸ್.ವಿ.ಬಾಬು ಅವರು ಒಬ್ಬ ಸದಭಿರುಚಿ ನಿರ್ಮಾಪಕರು. ಆದ್ದರಿಂದೇ ಅವರು ನಿರ್ಮಿಸಿರುವ ಬಹಳಷ್ಟು ಚಿತ್ರಗಳು ಗೆಲುವಿನ ರುಚಿಯನ್ನು ಕಂಡಿದೆ, ಪರಭಾಷೆ ಚಿತ್ರಗಳ ಹಾವಳಿ ನಡುವೆಯೂ ಅವರು ನಿರ್ಮಿಸಿರುವ ಮನೆ ಮಾರಾಟಕ್ಕಿದೆ ಚಿತ್ರವು 50 ದಿನಗಳ ಪ್ರದರ್ಶನ ಕಂಡಿರುವುದು ಸಂತಸ ತಂದಿದೆ.
ಇಂದಿನ ಬಹುತೇಕ ನಿರ್ಮಾಪಕರು ಸರ್ಕಾರ ಕೊಡುವ ಸಹಾಯಧನವನ್ನು ಪಡೆಯಲೆಂದೇ ಚಿತ್ರ ಮಾಡುತ್ತಿರುವುದು ಬೇಸರ ತರಿಸಿದೆ. ರೇಸು ಹಾಗೂ ಚಿತ್ರರಂಗ ಎರಡು ಒಂದೇ ಮುಖದ ನಾಣ್ಯಗಳಿದ್ದಂತೆ ನಿರ್ಮಾಪಕ ಎಸ್.ವಿ.ಬಾಬು ಕೊಡುಗೈ ದಾನಿ ಎಂದು ಶ್ಲಾಘಿಸಿದರು.

ನಿರ್ದೇಶಕ ಮಂಜು ಸ್ವರಾಜ್ ಮಾತನಾಡಿ, ನಾನು ಈ ಹಿಂದೆ ನಿರ್ದೇಶಿಸಿದ್ದ ಎರಡು ಚಿತ್ರಗಳು ಗೆಲುವು ಕಂಡಿದ್ದರು ಫಲಕ ಸ್ವೀಕರಿಸಿರಲಿಲ್ಲ.ಎಸ್.ವಿ.ಬಾಬುರಂತಹ ನಿರ್ಮಾಪಕರು ಇದ್ದರೆ ಒಳ್ಳೆಯ ಸಿನಿಮಾಗಳು ಬರುತ್ತದೆ, ಅವರುತಂತ್ರಜ್ಘರಿಗೆ ಪೂರ್ಣ ಸ್ವಾತಂತ್ರಕೊಡುತ್ತಾರೆ.ತಂಡವು ಸಹಕಾರ ನೀಡಿದ್ದರಿಂದಲೇ,ಇದರಯಶಸ್ಸುಅವರಿಗೂ ಸಲ್ಲಬೇಕು ಎಂದರು.

ನಿರ್ಮಾಪಕ ಎಸ್.ವಿ.ಬಾಬು ಮಾತನಾಡಿ, ನಮ್ಮ ರಿಕ್ಕಿ ಚಿತ್ರದಲ್ಲಿ ನಟಿಸಿದ್ದ ರಿಷಭ್ಶೆಟ್ಟಿ ಅವರು ಚಿತ್ರರಂಗದಲ್ಲಿ ಉತ್ತಮ ನಟ ಹಾಗೂ ನಿರ್ದೇಶಕರಾಗಿದ್ದಾರೆ, ರಿಕ್ಕಿ ಚಿತ್ರವು ಸರಿಯಾದ ಪ್ರಚಾರವಿಲ್ಲದೆ ಸೊರಗಿತ್ತು, ಆ ಚಿತ್ರದ ಹಾಡುಗಳು ಎಲ್ಲರ ಮನಸ್ಸನ್ನು ಕದ್ದಿತ್ತು. ಈಗ ರಿಕ್ಕಿ ಚಿತ್ರವನ್ನು ಮರುಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದರು.

ರಿಷಭ್ಶೆಟ್ಟಿ ಮಾತನಾಡಿ, ಹನ್ನೊಂದು ವರ್ಷಗಳ ಅನುಭವದಲ್ಲಿಕತೆಯನ್ನು ಸಾಕಷ್ಟು ನಿರ್ಮಾಪಕರಿಗೆ ಹೇಳಲಾಗಿತ್ತು. ಸೂಕ್ತ ಸ್ಪಂದನೆ ಸಿಗಲಿಲ್ಲ. ಕೊನೆಗೆ ಇವರ ಬಳಿ ಬಂದಾಗ ಮುಂದೆ ನಿಂತಿದ್ದುಅಲ್ಲದೆಎಲ್ಲಾ ವಿಧದಲ್ಲಿ ಸಹಕಾರ ನೀಡಿದರು. ಕೆಲವೇ ನಿರ್ಮಾಪಕರಲ್ಲಿಇಂತಹವರು ಸಿಗುತ್ತಾರೆಂದು ಅವರ ಬಗ್ಗೆ ಔನ್ನತ್ಯದ ಮಾತುಗಳನ್ನು ನುಡಿದರು.
ಕಲಾವಿದರುಗಳಾದ ಶಿವರಾಂ, ಚಿಕ್ಕಣ್ಣ, ರವಿಶಂಕರ್, ಗಿರಿ, ಕಾರುಣ್ಯರಾಮ್, ತಬಲನಾಣಿ, ನೀನಾಸಂಅಶ್ವಥ್, ರಾಜೇಶ್ನಟರಂಗ ಸಂಗೀತಗಾರಅಭಿಮನ್ರಾಯ್, ಗಾಯಕ ಹರಿಕೃಷ್ಣ ಮುಂತಾದವರುಗೌರವ ಫಲಕವನ್ನು ಸ್ವೀಕರಿಸಿದರು.

This Article Has 1 Comment
  1. Pingback: Agile DevOps

Leave a Reply

Your email address will not be published. Required fields are marked *

Translate »
error: Content is protected !!